ETV Bharat / state

ಗುಬ್ಬಿಯಲ್ಲಿ ಜೆಡಿಎಸ್ ಸಮಾವೇಶ: ಹೆಚ್​ಡಿಕೆಗೆ 500 ಕೆಜಿ ಸೇಬಿನ ಹಾರ ಹಾಕಿದ ಕಾರ್ಯಕರ್ತರು

author img

By

Published : Oct 25, 2021, 3:51 PM IST

ಗುಬ್ಬಿಯಲ್ಲಿ ಜೆಡಿಎಸ್​ ಬೃಹತ್​ ಸಮಾವೇಶ ನಡೆಯುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿಗೆ ಪಕ್ಷದ ಕಾರ್ಯಕರ್ತರು 500 ಕೆಜಿ ಸೇಬಿನ ಹಾರ ಹಾಕಿ ತೆರೆದ ವಾಹನದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಿದ್ದಾರೆ.

hd kumaraswamy welcomed with 500 kg apple garland by activists
ಹೆಚ್​ಡಿಕೆಗೆ 500 ಕೆಜಿ ಸೇಬಿನ ಹಾರ ಹಾಕಿದ ಕಾರ್ಯಕರ್ತರು

ತುಮಕೂರು: ಗುಬ್ಬಿಯಲ್ಲಿ ಆಯೋಜಿಸಲಾಗಿರೋ ಜೆಡಿಎಸ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.

500 ಕೆ.ಜಿ. ತೂಕದ ಬೃಹತ್ ಸೇಬಿನ ಹಾರ ಹಾಕಲಾಯಿತು. ದಾರಿಯುದ್ದಕ್ಕೂ ಹೂವಿನ ಸುರಿಮಳೆಯನ್ನೇ ಹರಿಸಲಾಯಿತು. ಸಾವಿರಾರು ಜೆಡಿಎಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗುಬ್ಬಿಯ ಚನ್ನಬಸವೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಗುಬ್ಬಿಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಬಹಿರಂಗ ಸಮಾವೇಶಕ್ಕೆ ಕರೆದುಕೊಂಡು ಬರಲಾಯ್ತು.

ಹೆಚ್​ಡಿಕೆಗೆ 500 ಕೆಜಿ ಸೇಬಿನ ಹಾರ ಹಾಕಿದ ಕಾರ್ಯಕರ್ತರು

ಈಗಾಗಲೇ ಗುಬ್ಬಿ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಸಮಾವೇಶಕ್ಕೆ ತಮ್ಮನ್ನು ಅಧಿಕೃತವಾಗಿ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವೆಂಬಂತೆ ಶ್ರೀನಿವಾಸ್ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಗೈರು ಹಾಜರಾಗಿದ್ದದು ಕಂಡು ಬಂದಿತು. ಅಲ್ಲದೇ ಉದ್ಯಮಿ ಬಿ.ಎಸ್. ನಾಗರಾಜ್ ಅವರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಗುಬ್ಬಿ ವಿಧಾಸನಸಭೆಗೆ ಅವರೇ ಅಧಿಕೃತ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ. ಸಮಾವೇಶದಲ್ಲಿ ಜೆಡಿಎಸ್ ಶಾಸಕ ಡಿ.ಸಿ. ಗೌರಿಶಂಕರ್, ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.