ETV Bharat / state

ಜಾತಿ ಗಣತಿ ಬಗ್ಗೆ ಬಿಎಸ್​​ವೈ ತಮ್ಮ ನಿಲುವು ಸ್ಪಷ್ಟಪಡಿಸಬೇಕು: ಆಯನೂರು ಮಂಜುನಾಥ್ ಆಗ್ರಹ

author img

By ETV Bharat Karnataka Team

Published : Dec 25, 2023, 2:29 PM IST

ಜಾತಿಗಣತಿ ಬಗ್ಗೆ ಮತ್ತು ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂಬ ಕುರಿತು ಯಡಿಯೂರಪ್ಪ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.

ಆಯನೂರು ಮಂಜುನಾಥ್
ಆಯನೂರು ಮಂಜುನಾಥ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್

ಶಿವಮೊಗ್ಗ : ಜಾತಿ ಗಣತಿ ಕುರಿತು ಮತ್ತು ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂಬುದರ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬದ ನಿಲುವುಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಿನ್ನೆ ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾ ಸಮ್ಮೇಳನದಲ್ಲಿ ವೀರಶೈವ ಲಿಂಗಾಯತ ಹಿಂದೂ ಧರ್ಮಕ್ಕೆ ಸೇರಿಲ್ಲ. ಇದರಿಂದ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಧರ್ಮದ ಜಾಗದಲ್ಲಿ ಬರೆಯಿಸಬೇಕು ಹಾಗೂ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಯಡಿಯೂರಪ್ಪ ಅವರು ತಮ್ಮ‌ ಸ್ಪಷ್ಟತೆ ನಿಲುವನ್ನು ತಿಳಿಸಬೇಕು ಎಂದು" ಆಗ್ರಹಿಸಿದರು.

ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾ ಸಮ್ಮೇಳನದಲ್ಲಿ ಇಷ್ಟೊಂದು ಸ್ವಾಮೀಜಿಗಳು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಎಲ್ಲಾ ಪಕ್ಷದ ಮುಖಂಡರು, ಚಿಂತಕರು, ವೈದ್ಯರು, ವಕೀಲರು, ನಿವೃತ್ತ ನ್ಯಾಯಾಧೀಶರಿದ್ದರು. ಅದೇ ರೀತಿ ಎಲ್ಲ ಮಹಿಳೆಯರು, ಪುರುಷರು, ಜಾತಿ ಉಪ ಜಾತಿಯವರು ಸೇರಿ ತೆಗೆದುಕೊಂಡ ನಿರ್ಣಯ ಆಗಿದೆ. ಅಲ್ಲಿನ ನಿರ್ಣಯ ಒಂದು ರೀತಿ ಬಹು ಸಂಖ್ಯಾಂತರ ನಿರ್ಣಯ ಆಗಿ ಬಿಟ್ಟಿತ್ತು ಎಂದರು.

ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮಕ್ಕಳು ಬಿಜೆಪಿ ಸಮಾವೇಶದಲ್ಲಿ ನಾವು ಹಿಂದೂಗಳು ಎಂದು ಹೇಳುವುದು, ಇಲ್ಲಿ ಬಂದು ವೀರಶೈವ ಲಿಂಗಾಯತ ಎಂದು ಹೇಳುವುದು. ಸಮಾಜವನ್ನು ಧಾರ್ಮಿಕವಾಗಿ, ಭಾವಾವೇಶದಿಂದ ಒಡೆದು ಹಾಕಬಾರದು ಎಂಬ ಸದ್ದುದ್ದೇಶದಿಂದ ಈ ಪ್ರಶ್ನೆ ಇಡುತ್ತಿದ್ದೇನೆ ಎಂದರು.

ಜಾತಿ ಗಣತಿ ವಿಚಾರದಲ್ಲಿ ಪ್ರಧಾನ ಮಂತ್ರಿಗಳ ಹಾಗೂ ಬಿಎಸ್​ವೈ ನಿಲುವೇನು. ಕೇಂದ್ರ ಸರ್ಕಾರ ಜನಗಣತಿಯ ಬಗ್ಗೆ ಒಲವನ್ನು ತೋರಿಸಿಲ್ಲ. ಇಲ್ಲಿ ಜಾತಿ ಗಣತಿ ಮಾಡುವುದರ ಬಗ್ಗೆ ನಿಮಗೆ ಒಲವು ಇದೀಯಾ ಎಂದು ಸ್ಪಷ್ಟಿಕರಿಸಬೇಕು. ಅವರು ದ್ವಂದ್ವದಲ್ಲಿ‌ ಇರಲು ಸ್ವಾತಂತ್ರರು. ಆದರೆ, ಬೇರೆಯವರನ್ನು ದ್ವಂದ್ವದಲ್ಲಿ ಇಡಲು ಅವರಿಗೆ ಸ್ವಾತಂತ್ರವಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಇದನ್ನೂ ಓದಿ : ಯಾವುದೇ ಧರ್ಮವನ್ನು ಅತಿಯಾಗಿ ಓಲೈಸದೆ ಅನುದಾನವನ್ನು ಸಮಾನವಾಗಿ ಹಂಚಿ: ಯಡಿಯೂರಪ್ಪ
ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ವೀರಶೈವ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿತ್ತು. ಈ ಮಹಾ ಅಧಿವೇಶನದಲ್ಲಿ ಹೊಸದಾಗಿ ಜಾತಿಗಣತಿ ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಕಾಂತರಾಜ ವರದಿಯನ್ನು ತಿರಸ್ಕಾರ ಮಾಡಬೇಕು ಎಂದು ಮಹಾಸಭಾ ಒತ್ತಾಯಿಸಿದೆ. ಈ ನಡುವೆ ಮಹಾಸಭಾವೇ ವೀರಶೈವರ ಗಣತಿ ಮಾಡುವಂತೆ ಒತ್ತಾಯವೂ ಕೇಳಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.