ETV Bharat / state

ಕಾರ್ತಿಕ ಮಾಸದಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಲಿವೆ: ಕೋಡಿಹಳ್ಳಿ ಶ್ರೀ ಭವಿಷ್ಯ

author img

By

Published : Sep 1, 2022, 5:00 PM IST

Updated : Sep 1, 2022, 5:11 PM IST

ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀ
ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀ

ಕಾರ್ತಿಕ ಮಾಸದಲ್ಲಿ ನೀರಿನಿಂದ ಜಲಗಂಡಾಂತರವಿದೆ. ಭೂಮಿ ನಡುಗುತ್ತೆ ಎಂದು ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀಗಳು ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ: ಕಾರ್ತಿಕ ಮಾಸದಲ್ಲಿ ಇನ್ನಷ್ಟು ಪ್ರಕೃತಿ ವಿಕೋಪಗಳು ಹೆಚ್ಚಾಗಲಿವೆ ಎಂದು ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀಗಳು ಶಿವಮೊಗ್ಗದಲ್ಲಿ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ತಾಂಡಾದ ಐಯ್ಯನವರ ಕೆರೆಗೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರು ಕಟ್ಟಿಸಿರುವ ಅಯ್ಯನಕೆರೆ ಮಳೆಯಿಂದಾಗಿ ತುಂಬಿರುವುದು ಹರ್ಷ ತಂದಿದೆ. ಮಳೆ ಹೆಚ್ಚಾಗಿರುವುದರಿಂದ ಬಹಳ ವರ್ಷಗಳ ಬಳಿಕ ಈ ಕೆರೆ ತುಂಬಿರುವುದು ಹರ್ಷ ತಂದಿದೆ. ಇದು ಈ ಭಾಗದ ಜನರಿಗೆ ಅನುಕೂಲವಾಗುತ್ತೆ. ಮುಂದಿನ ದಿನಗಳಲ್ಲಿ ನೀರಿನಿಂದ ಅನಾಹುತವಾಗಲಿದೆ ಎಂದರು.

ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀ ಅವರು ಮಾತನಾಡಿದರು

ಕಾರ್ತಿಕ ಮಾಸದಲ್ಲಿ ಅವಘಡ ಹೆಚ್ಚು: ಕಾರ್ತಿಕ ಮಾಸದಲ್ಲಿ ನೀರಿನಿಂದ ಜಲಗಂಡಾಂತರವಿದೆ. ಭೂಮಿ ನಡುಗುತ್ತೆ. ಬೆಂಕಿ ಅನಾಹುತಗಳು ಹೆಚ್ಚಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಜನರು ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಹೆಚ್ಚು ಹೆಚ್ಚು ಪೂಜೆ ನಡೆಸುವುದರಿಂದ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದರು.

ಓದಿ: ಬಜೆಟ್ ಅಂದಾಜನ್ನೂ ಮೀರುತ್ತಿರುವ ಸಾಲದ ಹೊರೆ.. ಮೊದಲ ತ್ರೈಮಾಸಿಕದಲ್ಲೇ ಅಧಿಕ ಸಾಲ!

Last Updated :Sep 1, 2022, 5:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.