ETV Bharat / state

ನೀರು ಪೂರೈಕೆಗೆ ಹಣ ಬಿಡುಗಡೆ ಮಾಡದ ಜಿಲ್ಲಾಡಳಿತ: ಸಗಣಿ, ಗೋಮೂತ್ರದಲ್ಲಿ ಸ್ನಾನಮಾಡಿ ಗ್ರಾ ಪಂ ಅಧ್ಯಕ್ಷರ ಪ್ರತಿಭಟನೆ

author img

By

Published : May 26, 2023, 4:27 PM IST

ಗ್ರಾ ಪಂ ಅಧ್ಯಕ್ಷ ವಿನೂತನ ಪ್ರತಿಭಟನೆ
ಗ್ರಾ ಪಂ ಅಧ್ಯಕ್ಷ ವಿನೂತನ ಪ್ರತಿಭಟನೆ

ನೀರು ಪೂರೈಕೆಗೆ ಹಣ ಬಿಡುಗಡೆ ಮಾಡದ ಹಿನ್ನೆಲೆ ಗ್ರಾ ಪಂ ಅಧ್ಯಕ್ಷರೊಬ್ಬರು ಸಗಣಿ ಹಾಗೂ ಗೋಮೂತ್ರದಲ್ಲಿ ಸ್ನಾನ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದಾರೆ.

ಗ್ರಾ ಪಂ ಅಧ್ಯಕ್ಷ ವಿನೂತನ ಪ್ರತಿಭಟನೆ

ಶಿವಮೊಗ್ಗ: ಕುಡಿವ ನೀರು ಪೂರೈಕೆ‌ಗೆ ಹಣ ಬಿಡುಗಡೆಯಾಗದ ಹಿನ್ನೆಲೆ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಕರ ಶೆಟ್ಟಿ ಎಂಬುವವರು ಸಗಣಿ ಹಾಗೂ ಗೋಮೂತ್ರದಲ್ಲಿ ಸ್ನಾನ ಮಾಡುವ ಮೂಲಕ ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಕಮಲಕರ ಶೆಟ್ಟಿ ಹೊಸನಗರ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನ ರೂಪದಲ್ಲಿ ಸಗಣಿ ಹಾಗೂ ಗೋಮೂತ್ರದಲ್ಲಿ ಸ್ನಾನ ಮಾಡಿ ಜಿಲ್ಲಾಡಳಿತದ ವಿರುದ್ದ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಹೊಸನಗರ ತಾಲೂಕಿನಲ್ಲಿ‌ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ‌ ಉಂಟಾಗಿದೆ. ಇಲ್ಲಿ ತೆರೆದ ಬಾವಿ ಸೇರಿದಂತೆ ನೀರಿನ‌ ಮೂಲಗಳು ಬತ್ತಿ ಹೋಗಿವೆ. ಇದರಿಂದ ಜಿಲ್ಲಾಡಳಿತ ಟ್ಯಾಂಕರ್​ಗಳ ಮೂಲಕ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಿತ್ತು. ಹೀಗೆ ನೀರು ಪೂರೈಕೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ 15 ರಿಂದ 20 ಲಕ್ಷ ರೂ‌ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಇದುವರೆಗೂ ಒಂದು ನಯಾಪೈಸೆ ಹಣ ಜಿಲ್ಲಾಡಳಿತದಿಂದ ಬಿಡುಗಡೆಯಾಗಿಲ್ಲ. ಇದರಿಂದ ನೀರು ಪೂರೈಕೆ ಮಾಡಿದ ಟ್ಯಾಂಕ್ ಮಾಲೀಕರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಮನೆ ಮುಂದೆ ಬಂದು ಹಣ ಕೇಳುತ್ತಿದ್ದಾರೆ.

ಈ ಕುರಿತು ಕಳೆದ ತಿಂಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ಸಭೆ ನಡೆಸಿದ್ದ ಜಿಲ್ಲಾಡಳಿತ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಸಹ ಇದುವರೆಗೂ ಹಣ ಬಂದಿಲ್ಲ. ಅಲ್ಲದೇ ಸಭೆ ನಡೆಸಿದ ಬಳಿಕ ಜಿಲ್ಲಾಡಳಿತ ಚುನಾವಣೆ ಕಾರ್ಯದಲ್ಲಿ ನಿರತವಾಗಿತ್ತು. ಈಗ ಟ್ಯಾಂಕ್ ಮಾಲೀಕರು‌ ಹಣಕ್ಕಾಗಿ ಪಿಡಿಸುತ್ತಿರುವುದರಿಂದ ಈ ರೀತಿಯ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಕಮಲಕರ ಶೆಟ್ಟಿ ತಮ್ಮ ಪ್ರತಿಭಟನೆ ಉದ್ದೇಶವನ್ನು ಈ ಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ಇವರು ಕಳೆದ ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಕೆ ಮಾಡಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಅಪರ ಜಿಲ್ಲಾಧಿಕಾರಿ, ಇನ್ನೂಂದು ಎರಡು ದಿನಗಳಲ್ಲಿ ಹಣ‌ಬ ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯಿಂದ ಧರಣಿ ಕೈ ಬಿಟ್ಟಿರುವುದಾಗಿ ಕಮಲಕರ ಶೆಟ್ಟಿ‌ ದೂರವಾಣಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಗಳಿಗೆ ಹೂವಿಟ್ಟು, ಹಣತೆ ಹಚ್ಚಿ ಜೆಡಿಎಸ್‍ ಪ್ರತಿಭಟನೆ

ರಸ್ತೆ ದುರಸ್ತಿ ಕಾಮಗಾರಿ ನಡೆಯದ ಹಿನ್ನೆಲೆ ಕೆಲದಿನಗಳ ಹಿಂದೆ ಸುಳ್ಯ - ಜಟ್ಟಿಪಳ್ಳ-ಕೊಡಿಯಾಲಬೈಲು - ದುಗ್ಗಲಡ್ಕದಲ್ಲಿ ಜನರು ಸ್ವತಃ ತಾವೇ ನಿಧಿ ಸಂಗ್ರಹಣಾ ಅಣಕು ಅಭಿಯಾನದ ಮೂಲಕ ಸುಳ್ಯ ನಗರ ಪಂಚಾಯತ್‌ ಮುಂದೆ ಪ್ರತಿಭಟನೆ ಸಭೆ ನಡೆಸಿದ್ದರು. ಈ ವೇಳೆ, ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಕೇಸರಿ ಶಾಲುಗಳನ್ನು ಧರಿಸಿ ವಿನೂತನ ಪ್ರತಿಭಟನೆ ನಡೆಸಿದ್ದರು.

ಇತ್ತೀಚೆಗೆ ನೆಲಮಂಗಲ ತಾಲೂಕಿನ ಮಂಚೇನಹಳ್ಳಿ ಗ್ರಾಮದ ಪ್ರಮುಖ ರಸ್ತೆಯ ತುಂಬೆಲ್ಲ ತಗ್ಗು, ಗುಂಡಿಗಳು ನಿರ್ಮಾಣವಾಗಿದ್ದರಿಂದ ಬೇಸತ್ತ ಗ್ರಾಮಸ್ಥರು ನೀರು ನಿಂತ ಗುಂಡಿಗಳಲ್ಲಿ ಬಲೆ ಹಾಕಿ ಮೀನು ಹಿಡಿಯುವ ಅಣುಕು ಪ್ರದರ್ಶನ ಮಾಡಿದ್ದರು.

ಇದನ್ನೂ ಓದಿ: ಮಕ್ಕಳು ಶಾಲೆಗೆ ಬರದಿದ್ದರೆ ಅವರ ಮನೆ ಮುಂದೆಯೇ ಮಲಗ್ತಾರೆ ಈ ಹೆಡ್ ಮಾಸ್ಟರ್ !!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.