ETV Bharat / state

'ನಾನು 35 ಪರ್ಸೆಂಟ್ ವಿದ್ಯಾರ್ಥಿ‌, ನೀವು ಯಾರ್‌ ಫಸ್ಟ್‌ಕ್ಲಾಸ್ ಬರ್ತಿರೋ ಅವ್ರಿಗೆಲ್ಲ ತಲಾ ₹5..'

author img

By

Published : Apr 3, 2021, 3:25 PM IST

Minister Eshwarappa
ಫಸ್ಟ್ ಕ್ಲಾಸ್​​ನಲ್ಲಿ ಪಾಸಾದ್ರೆ 5 ಸಾವಿರ ರೂ. ನೀಡುತ್ತೇನೆ : ಸಚಿವ ಈಶ್ವರಪ್ಪ

ನಾನು 35 ಪರ್ಸೆಂಟ್ ವಿದ್ಯಾರ್ಥಿ. 60 ಪರ್ಸೆಂಟ್ ಫಲಿತಾಂಶ ತೆಗೆಯೋದು ಎಷ್ಟು ಕಷ್ಟ ಅಂತ ನನಗೆ ಗೊತ್ತು..

‌ಶಿವಮೊಗ್ಗ : ಸರ್ಕಾರಿ ಶಾಲೆಯ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಗಳು ಶೇ.60 ಅಂಕ ಪಡೆದರೆ, ಪ್ರತಿ ವಿದ್ಯಾರ್ಥಿಗೆ ತಲಾ 5 ಸಾವಿರ ರೂ. ನೀಡುತ್ತೇನೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ವಿನೋಬನಗರದ ಸರ್ಕಾರಿ ಫ್ರೌಢಶಾಲೆಯಲ್ಲಿ ಇಂದು ದಾನಿಗಳಿಂದ ವಿದ್ಯಾರ್ಥಿಗಳಿಗೆ ಬ್ಯಾಗ್​, ಸಮವಸ್ತ್ರಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಈ ಸರ್ಕಾರಿ ಶಾಲೆಯಲ್ಲಿರುವ 17 ಮಂದಿ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಗನ್ನು ಪಾಸ್ ಮಾಡಿಸಿದರೆ, ಶಾಲೆಗೆ 1 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದರು.

ಫಸ್ಟ್ ಕ್ಲಾಸ್​​ನಲ್ಲಿ ಪಾಸಾದ್ರೆ 5 ಸಾವಿರ ರೂ. ನೀಡುತ್ತೇನೆ : ಸಚಿವ ಈಶ್ವರಪ್ಪ

ನಾನು 35 ಪರ್ಸೆಂಟ್ ವಿದ್ಯಾರ್ಥಿ. 60 ಪರ್ಸೆಂಟ್ ಫಲಿತಾಂಶ ತೆಗೆಯೋದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ಹಾಗಾಗಿ, ನೀವೆಲ್ಲ ಫಸ್ಟ್ ಕ್ಲಾಸ್​​ನಲ್ಲಿ ಪಾಸಾದ್ರೆ ನಿಮಗೆ ನಾನು ತಲಾ 5 ಸಾವಿರ ರೂ. ನಗದು ಪುರಸ್ಕಾರ ನೀಡುತ್ತೇನೆ ಎಂದರು.

ಶುಭಂ ಹೋಟೆಲ್​ನ ಚಂದ್ರು ಅವರು ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗೂ 30 ಮಕ್ಕಳಿಗೆ ಬ್ಯಾಗ್, ಬಾಲಕರಿಗೆ 50 ಟೀ ಶರ್ಟ್ ನೀಡಿದ್ದಾರೆ. ದಿವ್ಯ ಎಂಬುವರು 625 ಕಿಂಗ್ ಸೈಜ್ ನೋಟ್ ಬುಕ್, 104 ಗ್ರಾಫ್ ಪುಸ್ತಕ, 104 ಮಕ್ಕಳಿಗೆ ಬಿಳಿ ಸಮವಸ್ತ್ರಗಳನ್ನು ನೀಡಿದರು.

ಅಶೋಕ್ ಎಂಬುವರು 50 ಬ್ಯಾಗ್ ನೀಡಿದ್ದರೆ, ಇಂದುಮತಿ ಹಾಗೂ ಜಯಶ್ರೀ ಅವರು ಸೇರಿ 23 ಸಾವಿರ ರೂ. ಖುರ್ಚಿ ನೀಡಿದ್ದಾರೆ. ಜ್ಯೋತಿ ಎಂಬುವರು 50 ಬಾಲಕಿಯರಿಗೆ ಕಲರ್ ಕೋಟು ನೀಡಿದ್ದಾರೆ. ಲಲಿತಾ ಎಂಬುವರು 104 ಜಾಮಿಟ್ರಿ ಬಾಕ್ಸ್​ಗಳನ್ನು ನೀಡಿದ್ದಾರೆ. ಈ ವೇಳೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

ಓದಿ: ಬಿಎಸ್​ವೈ ರಾಜೀನಾಮೆ ನೀಡಲ್ಲ, ಸಿದ್ದರಾಮಯ್ಯ ಸಿಎಂ ಆಗುವ ಭ್ರಮೆ ಇಟ್ಟುಕೊಳ್ಳುವುದು ಬೇಡ: ಈಶ್ವರಪ್ಪ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.