ETV Bharat / state

ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆ: 100ಕ್ಕೂ ಹೆಚ್ಚು ಶಾಲೆಗಳಿಗೆ ರಜೆ ಘೋಷಣೆ

author img

By

Published : Jul 21, 2023, 1:00 PM IST

Representative image
ಪ್ರಾತಿನಿಧಿಕ ಚಿತ್ರ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಶಿವಮೊಗ್ಗ: ಮಲೆನಾಡಿನ ಭಾಗವಾದ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ತಾಲೂಕಿನ 100ಕ್ಕೂ ಅಧಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನ ಮಂಡಗದ್ದೆ, ಆಗುಂಬೆ ಹೋಬಳಿಯಲ್ಲಿ ಎಡೆಬಿಡದೆ ವರ್ಷಧಾರೆಯಾಗುತ್ತಿದೆ. ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಶಾಲೆಯ ಎಸ್​ಡಿಎಂಸಿ ಅವರಿಗೆ ನೀಡಲಾಗಿದೆ. ಎಸ್‌ ಡಿಎಂಸಿ ಹಾಗೂ ಶಾಲೆಯ ಶಿಕ್ಷಕರು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿದ್ದಾರೆ ಎಂದು ತೀರ್ಥಹಳ್ಳಿ ಬಿಇಒ ಗಣೇಶ್.ವೈ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ವಾಗಿದೆ. ತುಂಗಾ ಜಲಾಶಯಕ್ಕೆ ಒಳ ಹರಿವು ಕೂಡಾ ಹೆಚ್ಚಾಗಿದೆ. ಅಣೆಕಟ್ಟೆಯ 16 ಕ್ರೆಸ್ಟ್ ಗೇಟ್‌ಗಳಿಂದ ನದಿಗೆ ನೀರು ಹರಿಸಲಾಗುತ್ತಿದೆ. 18 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿದೆ. ಸಾಗರ, ಹೊಸನಗರ ತಾಲೂಕಿನಲ್ಲೂ ಮಳೆ ಅಬ್ಬರ ಜೋರಾಗಿದೆ.

ಇದನ್ನೂ ಓದಿ: ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಭದ್ರಾವತಿ ಹೊಸ ಸೇತುವೆ ಮುಳುಗಡೆ

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ‌ ಸುರಿದ ಮಳೆಯ ವಿವರ:

  • ಶಿವಮೊಗ್ಗ- 13.30 ಎಂ.ಎಂ.
  • ಭದ್ರಾವತಿ- 11.20 ಎಂ.ಎಂ.
  • ತೀರ್ಥಹಳ್ಳಿ- 71.80 ಎಂ.ಎಂ
  • ಸಾಗರ- 86.80 ಎಂ.ಎಂ.
  • ಹೊಸನಗರ-79.30 ಎಂ.ಎಂ.
  • ಸೊರಬ-39.40 ಎಂ.ಎಂ.
  • ಶಿಕಾರಿಪುರ- 21.60 ಎಂ.ಎಂ.

ಜಿಲ್ಲೆಯ ಜಲಾಶಯಗಳ ಇಂದಿನ‌ ನೀರಿನ‌ ಮಟ್ಟ:

ತುಂಗಾ ಅಣೆಕಟ್ಟು:

  • ಗರಿಷ್ಟ ಮಟ್ಟ- 584.24 ಅಡಿ
  • ಇಂದಿನ‌ ನೀರಿನ ಮಟ್ಟ-584.24 ಅಡಿ
  • ಒಳ ಹರಿವು-18,000 ಕ್ಯೂಸೆಕ್
  • ಹೊರ ಹರಿವು- 18,000 ಕ್ಯೂಸೆಕ್

ಭದ್ರಾ ಅಣೆಕಟ್ಟು:

  • ಗರಿಷ್ಟ ಮಟ್ಟ- 186 ಅಡಿ
  • ಇಂದಿನ‌ ನೀರಿನ ಮಟ್ಟ-143 ಅಡಿ
  • ಒಳ ಹರಿವು-7,734 ಕ್ಯೂಸೆಕ್
  • ಹೊರ ಹರಿವು- 165 ಕ್ಯೂಸೆಕ್

ಲಿಂಗನಮಕ್ಕಿ ಅಣೆಕಟ್ಟು:

  • ಗರಿಷ್ಟ ಮಟ್ಟ- 1819 ಅಡಿ
  • ಇಂದಿನ‌ ನೀರಿನ ಮಟ್ಟ-1764.7 ಅಡಿ
  • ಒಳ ಹರಿವು-43.043 ಕ್ಯೂಸೆಕ್
  • ಹೊರ ಹರಿವು- 1157.3 ಕ್ಯೂಸೆಕ್

ಚಿಕ್ಕಮಗಳೂರು ಮಳೆ ವರದಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅನೇಕ ಅವಘಡಗಳೂ ಸಂಭವಿಸಿದೆ. ನಿನ್ನೆ(ಗುರುವಾರ) ಜಿಲ್ಲೆಯ ಕಳಸ ತಾಲೂಕಿನ ಓಣಿಗಂಡಿಯ ಮಾಸ್ಟರ್ ಡೊಂಗ್ರೆ ಅವರ ಮನೆಯ ಪಕ್ಕ ನಿರ್ಮಿಸಿದ್ದ ತಡೆಗೋಡೆ ಸಂಪೂರ್ಣವಾಗಿ ಕುಸಿದಿತ್ತು. ಮನೆಯ ಪಕ್ಕ ಹಾಗೂ ಸುತ್ತಮುತ್ತ ನಿಧಾನವಾಗಿ ಮಣ್ಣು ಜರುಗುತ್ತಿದ್ದದ್ದು, ಮನೆಯ ಸದಸ್ಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಕಳಸ ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಣ್ಣು ಜರಿದ ಜಾಗಕ್ಕೆ ಟಾರ್ಪಲ್ ಮುಚ್ಚಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಮನೆಯ ಪಕ್ಕದ ತಡೆಗೋಡೆ ಕುಸಿತ, ಮುರಿದು ಬಿದ್ದ ಮನೆಯ ಛಾವಣಿ

ಧಾರವಾಡ ಮಳೆ ವರದಿ: ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸೇತುವೆ ಜಲಾವೃತಗೊಂಡಿದೆ.

ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ಡಿಸಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.