ETV Bharat / state

ನಾರಾಯಣಪುರ ನಾಲೆ ಒಡೆದು ಭಾರಿ ಪ್ರಮಾಣದ ನೀರು ಪೋಲು

author img

By

Published : Sep 19, 2019, 11:22 PM IST

ನಾರಾಯಣಪುರ ನಾಲೆ

ದೇವದುರ್ಗ ತಾಲೂಕಿನ ಗಲಗ್ ಗ್ರಾಮದಲ್ಲಿ ನಾರಾಯಣಪುರ ಬಲದಂಡೆಯ 12ನೇ ವಿತರಣೆ ಕಾಲುವೆ ಒಡೆದಿದೆ. ಇದರ ಪರಿಣಾಮ ರೈತರಿಗೆ ಹೊಲ-ಗದ್ದೆಗೆ ಪೂರೈಕೆಯಾಗಬೇಕಾದ ನೀರು ಅನಗತ್ಯವಾಗಿ ಪೋಲಾಗುತ್ತಿದೆ.

ರಾಯಚೂರು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾರಾಯಣಪುರ ಬಲದಂಡೆ ನಾಲೆ ಒಡೆದು ಅಪಾರ ಪ್ರಮಾಣ ನೀರು ಪೋಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಾಲೆ ಅಸುಪಾಸಿನ ಹೊಲ-ಗದ್ದೆಗಳಿಗೆ ನುಗ್ಗಿ ಬೆಳೆ ಸಹ ಹಾನಿಯಾಗಿದೆ. ನಾಲೆಯನ್ನ ಕೆಬಿಜೆಎನ್​ಎಲ್ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದ್ರೆ ಅಧಿಕಾರಗಳ ನಿರ್ಲಕ್ಷ್ಯ ಹಾಗೂ ಕಳಪೆ ಕಾಮಗಾರಿ ಇದಕ್ಕೆ ಕಾರಣ ಎಂದು ರೈತರು ದೂರಿದ್ದಾರೆ.

ನಾರಾಯಣಪುರ ನಾಲೆ

ನಾಲೆಯ ನೀರು ನುಗ್ಗಿ ಬೆಳೆ ಹಾನಿಯಾದ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ನಾಲೆಯ ದುರಸ್ತಿಗೊಳಿಸಿ ನಾಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿರುವ ಘಟನೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

Intro:ಸ್ಲಗ್: ಒಡೆದ ನಾಲೆ: ಅಪಾರ ಪ್ರಮಾಣದ ನೀರು ಪೋಲು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 19-೦9-2019
ಸ್ಥಳ: ರಾಯಚೂರು
ಆ್ಯಂಕರ್: ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ನಾರಾಯಣಪುರ ಬಲದಂಡ ನಾಲೆ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲು ಆಗಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ್ ಗ್ರಾಮದಲ್ಲಿ ನಾರಾಯಣಪುರ ಬಲದಂಡೆಯ 12ನೇ ವಿತರಣೆ ಕಾಲುವೆ ಒಡೆದಿದೆ. ಇದರ ಪರಿಣಾಮ ರೈತರಿಗೆ ಹೊಲ-ಗದ್ದೆಗೆ ಪೂರೈಕೆಯಾಗಬೇಕಾದ ನೀರು, ಅನಗತ್ಯ ಪೋಲು ಆಗಿ, ನಾಲೆ ಅಸುಪಾಸಿನ ಹೊಲ-ಗದ್ದೆಗಳಿಗೆ ನುಗ್ಗಿ ಬೆಳೆಗೆ ಹಾನಿ ಸಂಭವಿಸಿದೆ. ನಾಲೆಯನ್ನ ಕೆಬಿಜೆಎನ್ ಎಲ್ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಸರಕಾರ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದ್ರೆ ಅಧಿಕಾರಗಳ ನಿರ್ಲಕ್ಷ್ಯ ಹಾಗೂ ಕಳಪೆ ಕಾಮಗಾರಿಯಿಂದ ಇಂತಹ ಘಟನೆ ಕಾರಣವೆಂದು ರೈತರು ದೂರಿದ್ರೆ. Conclusion:ನಾಲೆಯ ನೀರು ನುಗ್ಗಿ ಬೆಳೆ ಹಾನಿಯಾದ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ನಾಲೆಯ ದುರಸ್ಥಿಗೊಳಿಸಿ ನಾಲೆ ಸಮರ್ಪಕ ನಿರ್ವಹಿಸಬೇಕು ಹಾಗೂ ಅಧಿಕಾರಿಗಳ ನಿರ್ಕ್ಷ್ಯದಿಂದ ಸಂಭವಿಸಿರುವ ಘಟನೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.