ETV Bharat / state

NEET Result 2023: ರಾಯಚೂರಿನ ಖಾಸಗಿ ಕಾಲೇಜಿನ ಒಡಿಶಾ ವಿದ್ಯಾರ್ಥಿ ರಾಜ್ಯಕ್ಕೆ 127ನೇ ರ‍್ಯಾಂಕ್​, ಸಿಇಟಿಯಲ್ಲೂ ಉತ್ತಮ ಸಾಧನೆ

author img

By

Published : Jun 15, 2023, 7:26 PM IST

Updated : Jun 15, 2023, 10:44 PM IST

ನೀಟ್ ಪರೀಕ್ಷೆಯಲ್ಲಿ 725 ಅಂಕಗಳಿಗೆ 705 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

NEET Result 2023
ನೀಟ್​ ಫಲಿತಾಂಶ 2023

ರಾಜ್ಯಕ್ಕೆ 127ನೇ ರ‍್ಯಾಂಕ್ ಪಡೆದ ಅನುರಾಗ ರಂಜನ್

ರಾಯಚೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್​)ಯ ಫಲಿತಾಂಶ ಜೂನ್​ 13 ರಂದು ಮಂಗಳವಾರ ರಾತ್ರಿ ಪ್ರಕಟವಾಗಿತ್ತು. ಈ ಪರೀಕ್ಷೆಯಲ್ಲಿ ರಾಯಚೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಒಡಿಶಾ ಮೂಲದ ವಿದ್ಯಾರ್ಥಿಯೊಬ್ಬ 127ನೇ ರ‍್ಯಾಂಕ್​ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಅನುರಾಗ ರಂಜನ್ ನೀಟ್ ಪರೀಕ್ಷೆಯಲ್ಲಿ 127ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿ.

ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪ್ರಕಾಶ್ ರಂಜನ್ ಹಾಗೂ ಡಾ. ದಿವ್ಯಾ ರಂಜನ್ ಅವರ ಮಗ ಅನುರಾಗ ರಂಜನ್. ಇವರು ಮೂಲತಃ ಒಡಿಶಾ ರಾಜ್ಯದವರು ಆಗಿದ್ದರೂ, ಹಲವು ವರ್ಷಗಳಿಂದ ರಾಯಚೂರಿನಲ್ಲಿ ವಾಸವಾಗಿದ್ದಾರೆ. ಹೀಗಾಗಿ ತಮ್ಮ ಮಗನಿಗೆ ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಒಟ್ಟು 725 ಅಂಕಗಳ ಪೈಕಿ ಅನುರಾಗ ರಂಜನ್ 705 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಿರಂತರ ಓದಿನ ಶ್ರಮಫಲದಿಂದ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾರೆ.

ಕೆಸಿಇಟಿಯಲ್ಲೂ ಉತ್ತಮ ಸಾಧನೆ : ಅನುರಾಗ ರಂಜನ್ ನೀಟ್ ಪರೀಕ್ಷೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯದ ಕೆಸಿಇಟಿ ಪರೀಕ್ಷೆಯಲ್ಲೂ ಒಳ್ಳೆಯ ರ‍್ಯಾಂಕ್​ಗಳನ್ನು ಪಡೆದುಕೊಂಡಿದ್ದಾರೆ. ಇಂಜಿನಿಯರಿಂಗ್​ನಲ್ಲಿ 22ನೇ ರ‍್ಯಾಂಕ್ ಪಡೆದರೆ, ಆಗ್ರಿಕ್ಲ್ಚರ್ ಬಿಎಸ್ಸಿಯಲ್ಲಿ 2ನೇ ರ‍್ಯಾಂಕ್, ಬಿಎನ್ ವೈಎಸ್ 12ನೇ ರ‍್ಯಾಂಕ್, ಪಶುವೈದ್ಯಕೀಯ ಹಾಗೂ ಬಿಎಸ್ ನರ್ಸಿಂಗ್​ನಲ್ಲಿ 12ನೇ ರ‍್ಯಾಂಕ್, ಬಿಫಾರಂ ಹಾಗೂ ಫಾರಂ ಡಿನಲ್ಲಿ 22ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ.

ಇದನ್ನೂ ಓದಿ : CET Result 2023: ಒಂದು ವಾರದಲ್ಲಿ ಕೌನ್ಸಿಲಿಂಗ್​ ಪ್ರಾರಂಭ, ಟಾಪರ್ಸ್​ಗೆ ಸರ್ಕಾರದಿಂದ ಸ್ಕಾಲರ್​ಶಿಪ್​

ಇದೇ ವೇಳೆ ಸಂತಸವನ್ನು ಹಂಚಿಕೊಂಡಿರುವ ವಿದ್ಯಾರ್ಥಿ ಅನುರಾಗ್​ ರಂಜನ್​, ಇಂತಹ ಸಾಧನೆ ಮಾಡಲು ಪ್ರತಿನಿತ್ಯ ವಿದ್ಯಾಭ್ಯಾಸ ಮಾಡುತ್ತಿದ್ದೆ. ನಾನಾ ಪರೀಕ್ಷೆಗಳನ್ನು ಬರೆದು ಪರಿಶೀಲನೆ ಮಾಡುತ್ತಿದ್ದೆ. ಬಳಿಕ ಅದರಲ್ಲಿ ಆಗಿರುವ ತಪ್ಪುಗಳನ್ನು ಕಂಡು ಹಿಡಿದು ಅದನ್ನು ಸರಿಪಡಿಸಿಕೊಳ್ಳುತ್ತಿದೆ. ಮನೆಯಲ್ಲಿ ತಂದೆ, ತಾಯಿ ಸಹ ಬಹಳ ಪ್ರೋತ್ಸಾಹಿಸುತ್ತಿದ್ದರು. ಕಡಿಮೆ ಅಂಕಗಳನ್ನು ಪಡೆದುಕೊಂಡು ಬೇಸರ ವ್ಯಕ್ತಪಡಿಸದೇ ಮುಂದೆ ಚೆನ್ನಾಗಿ ಓದುವಂತೆ ಬೆಂಬಲಿಸುತ್ತಾ ಬಂದಿದ್ದರು. ಕಾಲೇಜಿನಲ್ಲಿ ಶಿಕ್ಷಕರು ಸಹ ಮಾರ್ಗದರ್ಶನ ನೀಡಿದ್ದಾರೆ. ಈಗ ಪಡೆದಿರುವ ರ‍್ಯಾಂಕ್ ನನಗೆ ಹಾಗೂ ಕುಟುಂಬದವರಿಗೆ ಸಂತಸ ತಂದಿದೆ. ಮುಂದೆ ವೈದ್ಯನಾಗುವ ಆಸೆ ಹೊಂದಿದ್ದಾನೆ ಎಂದು ಹೇಳಿದರು.

ಇದನ್ನೂ ಓದಿ : NEET Result 2023 : ಧ್ರುವ ಅಡ್ವಾಣಿ ರಾಜ್ಯಕ್ಕೆ ಫಸ್ಟ್, ವಿಕಲಚೇತನ ಮಹಿಳಾ ಕೋಟಾದಲ್ಲಿ ಲಾವಣ್ಯ ಗುಪ್ತ ದೇಶಕ್ಕೆ ಟಾಪರ್

Last Updated :Jun 15, 2023, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.