ETV Bharat / state

ಮೈಸೂರಲ್ಲಿ ತ್ರಿಬಲ್ ರೈಡಿಂಗ್ ವಿರುದ್ಧ ಕಾರ್ಯಾಚರಣೆ: 103 ವಾಹನ ವಶ, 760 ಕೇಸ್

author img

By

Published : Dec 21, 2022, 8:06 AM IST

special operation for triple riding in Mysore
ತ್ರಿಬಲ್ ರೈಡಿಂಗೆಗೆ ವಿಶೇಷ ಕಾರ್ಯಾಚರಣೆ

ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಮತ್ತು ರಸ್ತೆ ಅಪಘಾತಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಾಚರಣೆಯನ್ನು ಮೈಸೂರು ನಗರ ಸಂಚಾರ ಪೊಲೀಸರು ಕೈಗೊಂಡಿದ್ದಾರೆ.

ಮೈಸೂರು: ತ್ರಿಬಲ್ ರೈಡಿಂಗ್ ವಿರುದ್ಧ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 103 ವಾಹನಗಳ ವಶಪಡಿಸಿಕೊಂಡು, 760 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಮತ್ತು ರಸ್ತೆ ಅಪಘಾತಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಾಚರಣೆಯನ್ನು ಮೈಸೂರು ನಗರ ಸಂಚಾರ ಪೊಲೀಸರು ಕೈಗೊಂಡಿದ್ದಾರೆ. ಡಿಸೆಂಬರ್​ 5ರಿಂದ 19ರವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ 103 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ವಾಹನಗಳ ಬಗ್ಗೆ ಪರಿಶೀಲಿಸಲಾಗಿ 760 ಪ್ರಕರಣಗಳು ಇದ್ದು, ಅವಶ್ಯಕ ದಾಖಲಾತಿಗಳನ್ನು ಪರಿಶೀಲಿಸಿ, ದಂಡ ಪಾವತಿಸಿದ ನಂತರ ಸೂಕ್ತ ತಿಳುವಳಿಕೆ ನೀಡಿ ಕಳುಹಿಸಲಾಗುತ್ತಿದೆ.

ತ್ರಿಬಲ್ ರೈಡಿಂಗ್ ವಿರುದ್ಧ ಈ ವಿಶೇಷ ಕಾರ್ಯಾಚರಣೆಯು ಮುಂದುವರೆಯುವುದಲ್ಲದೇ, ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಳ ವಿರುದ್ಧವೂ ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಸಂಬಂಧಪಟ್ಟ ಅವಶ್ಯಕ ದಾಖಲಾತಿಗಳನ್ನು ಇಟ್ಟುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಪ್ರಕಟಣೆ ಮೂಲಕ ಸೂಚಿಸಿದ್ದಾರೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಜೆಸಿಬಿಗೆ ಡಿಕ್ಕಿ ಹೊಡೆದ ಬೈಕ್ .. ಓರ್ವ ಸಾವು, ಇನ್ನೋರ್ವನಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.