ETV Bharat / state

ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆ ರಾಜಕೀಯ ಕುತಂತ್ರ : ಹೆಚ್ ವಿಶ್ವನಾಥ್

author img

By

Published : Mar 25, 2023, 3:25 PM IST

ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಗುಜರಾತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಕ್ಕೆ ತರಾತುರಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿರುವುದು ಸಮಂಜಸವಲ್ಲ-ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್.

Legislative Council member H Vishwanath press conference
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸುದ್ದಿಗೋಷ್ಠಿ

ಮೈಸೂರು: ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ತರಾತುರಿಯಲ್ಲಿ ಅನರ್ಹ ಮಾಡಿರುವುದು ರಾಜಕೀಯ ಕುತಂತ್ರ ಹಾಗೂ ಆಳುವ ಪಕ್ಷದ ಇಬ್ಬಂದಿ ನೀತಿ ಎಂದು ಬಿಜೆಪಿಯಿಂದ ನೇಮಕಗೊಂಡ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಖ್ಯವಾಗಿ ಮಾನಹಾನಿ ಪ್ರಕರಣದಲ್ಲಿ ಅವರ ಸಂಸತ್ ಸ್ಥಾನವನ್ನು ತರಾತುರಿಯಲ್ಲಿ ಅನರ್ಹ ಮಾಡಿರುವುದು ರಾಜಕೀಯ ಕುತಂತ್ರ ಹಾಗೂ ಆಳುವ ಪಕ್ಷದ ಇಬ್ಬಂದಿ ನೀತಿಯನ್ನು ಎತ್ತಿ ತೋರಿಸುತ್ತದೆ. ಈಗ ದೇಶ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದು, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತಿದೆ. ಉದಾಹರಣೆ ಸಹಿತ ವಿಶ್ವನಾಥ್ ವಿವರಣೆ ನೀಡಿದರು.

ರಾಹುಲ್ ಗಾಂಧಿ ಅವರನ್ನು ಟೀಕಿಸಿದರು, ಆದರೂ ಈ ಬಗ್ಗೆ ಯಾವುದನ್ನು ತಲೆಕೆಡಿಸಿಕೊಳ್ಳದ ರಾಹುಲ್ ಗಾಂಧಿ, ಭಾರತ್‌ ಜೋಡೋ ಯಾತ್ರೆ ನಡೆಸಿದರು. ಆ ಯಾತ್ರೆ ಇಡೀ ದೇಶಾದ್ಯಂತ ಹರಡಿ, ರಾಹುಲ್ ಗಾಂಧಿಗೆ ಜನಪ್ರಿಯ ತಂದುಕೊಟ್ಟು, ಭಾರತ್ ಜೋಡೋ ಯಶಸ್ವಿ ಆಯಿತು ಎಂದು ಅಭಿಮತ ತಿಳಿಸಿದರು.

ರಾಜಕೀಯ ಕುತಂತ್ರದ ಭಾಗ: ಈ ಮಧ್ಯೆ ಎಲ್ಲೋ ಯಾವಾಗಲೋ ಮಾತನಾಡಿದ ಬಗ್ಗೆ ಗುಜರಾತ್ ನಲ್ಲಿ ಮಾನಹಾನಿ ಪ್ರಕರಣ ಹಾಕಿ, ಅವರನ್ನು ಗುಜರಾತ್ ಕೋರ್ಟ್ ನಲ್ಲೇ ಎರಡು ವರ್ಷ ಶಿಕ್ಷೆ ವಿಧಿಸಿದೆ. ರಾಹುಲ್ ಗಾಂಧಿ ಪ್ರಕರಣ ಗಣತಂತ್ರ ರಾಜಕಾರಣದಲ್ಲಿ ಈ ರೀತಿ ನಡೆಯಬಾರದು. ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆಯನ್ನು ರಾಜಕೀಯ ಕುತಂತ್ರದ ಭಾಗ ಎಂದು ಟೀಕಿಸಿದರು.

ಕ್ರಿಮಿನಲ್ ಹಿನ್ನೆಲೆಯ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಿ: ಪಾರ್ಲಿಮೆಂಟ್ ನಲ್ಲಿ ಶೇ.54 ರಷ್ಟು ಸಂಸದರ ಮೇಲೆ ದೋಷಾರೋಪಣೆ ಇದೆ. ಅವರ ವಿರುದ್ದಧ ಯಾಕೆ ಕ್ರಮ‌ ಕೈಗೊಂಡಿಲ್ಲ. ಪ್ರತಿದಿನ ಶಾಸಕ ಸಿ ಟಿ.ರವಿ, ಈಶ್ವರಪ್ಪ, ಯತ್ನಾಳ್ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಾರೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದ್ದು, ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಈ ದ್ವಂದ್ವ ನೀತಿಯಿಂದ ಹೊರಗೆ ಬನ್ನಿ, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂಓದಿ:ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಹಾಕಿದರೂ ಕೂಡ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ: ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.