ETV Bharat / state

ಸೆಕೆಂಡ್​ನಲ್ಲಿ ಇಂಗ್ಲಿಷ್​​ ವರ್ಣಮಾಲೆ ಹೇಳುವ ನಾಗರಾಜು: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ

author img

By

Published : Dec 19, 2022, 12:24 PM IST

ಸೆಕೆಂಡ್​ನಲ್ಲಿ ಇಂಗ್ಲಿಷ್​​ ವರ್ಣಮಾಲೆ; ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ ನಿರ್ಮಿಸಿದ ಮೈಸೂರಿನ ನಾಗರಾಜು
mysores-nagaraju-made-a-record-in-the-asia-book-of-records-by-chanting-the-english-alphabets-in-a-second

1 ಸೆಕೆಂಡ್‌ 35 ಮಿಲಿ ಸೆಕೆಂಡ್‌ನಲ್ಲಿ ಇಂಗ್ಲಿಷ್​​ ವರ್ಣಮಾಲೆ A ಯಿಂದ Z ವರೆಗೂ ಹೇಳಿ ದಾಖಲೆ ಮಾಡಿದ್ದಾರೆ

ಮೈಸೂರು: ಒಂದು ಸೆಕೆಂಡ್‌ 35 ಮಿಲಿ ಸೆಕೆಂಡ್‌ನಲ್ಲಿ ಇಂಗ್ಲಿಷ್​​ ವರ್ಣಮಾಲೆಯನ್ನು ಹೇಳಿದ ನಂಜನಗೂಡಿನ ನಿವಾಸಿ ನಾಗರಾಜು ಎಂಬುವವರು ಏಷ್ಯಾ ಬುಕ್‌ ಆಫ್‌ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಟಿವಿಎಸ್‌ ಕಾರ್ಖಾನೆಯ ನೌಕರರಾದ ನಾಗರಾಜ್‌ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸುವ ಮೂಲಕ ತಾಲೂಕಿನಲ್ಲಿ ಮನೆ ಮಾತಾಗಿದ್ದಾರೆ.

ತಗಡೂರಿನ ಮೂಗೇಗೌಡ ಮತ್ತು ಮಹದೇವಮ್ಮ ದಂಪತಿಯ ಪುತ್ರರಾದ ನಾಗರಾಜು ಅವರಿಗೆ ಬಾಲ್ಯದಿಂದಲೂ ಸಾಧನೆ ಮಾಡಬೇಕೆಂಬ ಹಂಬಲ ಇತ್ತು. ಶಿಕ್ಷಣ ಪೂರೈಸಿ ಟಿವಿಎಸ್‌ ಕಾರ್ಖಾನೆಯಲ್ಲಿ ನೌಕರಾಗಿ ಸೇರ್ಪಡೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ, ಅವರಲ್ಲಿದ್ದ ಸಾಧನೆಯ ಕಿಚ್ಚು ಆರಿರಲಿಲ್ಲ. ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಲ್ಲಿದ್ದ ನಾಗರಾಜು, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆ ಮಾಡಬಹುದಾದ ವಿಷಯ ಕುರಿತು ಗಮನ ಹರಿಸಿದರು.

ಇದರ ಫಲವಾಗಿ ಸತತ ಅಭ್ಯಾಸ ಮೂಲಕ ಒಂದೇ ಪೋಸ್ಟ್‌ ಕಾರ್ಡಿನಲ್ಲಿ ಐದು ಸಾವಿರ ಬಾರಿ ಐ ಲವ್‌ ಯೂ ಇಂಡಿಯಾ ಎಂಬ ಪದ ಬರೆದಿದ್ದರು. ಈ ವಿಶೇಷ ಸಾಧನೆಯನ್ನು ಗುರುತಿಸಿ ಸಂಸ್ಥೆಯು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಅವರ ಹೆಸರನ್ನು ಸೇರಿಸಿ, ಪ್ರಶಸ್ತಿ ನೀಡಿ ಗೌರವಿಸಿತ್ತು. ಇದರಿಂದ ಸ್ಫೂರ್ತಿ ಪಡೆದ ಅವರು, ಇದೀಗ 1 ಸೆಕೆಂಡ್‌ 35 ಮಿಲಿ ಸೆಕೆಂಡ್‌ನಲ್ಲಿ A ಯಿಂದ Z ವರೆಗೂ ಹೇಳಿ ದಾಖಲೆ ನಿರ್ಮಿಸಿದ್ದಾರೆ.

ಇದರ ಜೊತೆಯಲ್ಲಿಯೇ ಅವರು ತಮ್ಮೂರಿನ ಶಾಲೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ನಾನಾ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕರ್ನಾಟಕ ಸಾಂಸ್ಕೃತಿ ಪರಿಷತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ವಾರಾಣಾಸಿಯ ಎಜಿಎಲ್‌ ಸಂಸ್ಥೆಯು ಎಕ್ಸಲೆನ್ಸ್‌ ಅವಾರ್ಡ್‌ ನೀಡಿದೆ.

ಇದನ್ನೂ ಓದಿ: ಬಾದಾಮಿ ಜನರಿಂದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್: ಜಮೀರ್ ಅಹಮ್ಮದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.