ETV Bharat / state

ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದು ಏಕೆ..?: ಜಿಲ್ಲಾಧಿಕಾರಿ ಹೇಳಿದ್ದೇನು?

author img

By ETV Bharat Karnataka Team

Published : Jan 12, 2024, 3:57 PM IST

Updated : Jan 12, 2024, 4:36 PM IST

ಪಾರಂಪರಿಕ ನಗರ ಮೈಸೂರಿಗೆ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ಸಿಗದಿರಲು ಕಾರಣ ಏನು ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ
ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ

ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ ಹೇಳಿಕೆ

ಮೈಸೂರು : ಪ್ರತಿ ವರ್ಷ ದೇಶದ ಸ್ವಚ್ಛ ನಗರಗಳಿಗೆ "ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ"ಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ಪಡೆಯುವ ಸಾಲಿನಲ್ಲಿ 2022ರ ವೇಳೆ ಮೈಸೂರು ನಗರ ಎರಡನೇ ಸ್ಥಾನದಲ್ಲಿತ್ತು. ಆದರೇ ಈ ಬಾರಿ ಟಾಪ್​ 10 ನಗರಗಳಲ್ಲಿ ಸ್ಥಾನ ಪಡೆಯುವಲ್ಲೂ ವಿಫಲವಾಗಿದೆ. ಇದರ ಬೆನ್ನಲ್ಲೇ ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ಕೈ ತಪ್ಪಲು ಕಾರಣ ಏನು ಎಂಬುದನ್ನು ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದ ಸ್ವಚ್ಚತೆ ವಿಚಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಮಾನದಂಡಗಳಿವೆ. ನಮ್ಮಲ್ಲಿ ಇರುವಂತಹ ಪರಂಪರೆಯ ತ್ಯಾಜ್ಯ ಮತ್ತು ಮನೆಗಳಲ್ಲಿ ಇರುವಂತಹ ಹಳೆ ವಸ್ತುಗಳ ಸಂಗ್ರಹ ನಿರ್ವಹಣೆ ಬಗ್ಗೆ ಆಗಿರಬಹುದು. ಸಾರಿಗೆ, ಸಾರ್ವಜನಿಕ ಭಾಗಹಿಸುವಿಕೆ ಇರಬಹುದು. ಅದರ ಮೇಲೆ ಒಂದು ರ‍್ಯಾಂಕ್ ಅನ್ನು ನಿಗದಿ ಮಾಡಲಾಗುತ್ತದೆ. ನೀವು ನೋಡಿದ ಹಾಗೆ ಬೇರೆ ನಗರಗಳ ಜೊತೆ ಹೊಲಿಸಿದರೆ ಮೈಸೂರು ಸ್ವಚ್ಛವಾಗಿ ಇರುವ ನಗರವೇ. ಲೆಗಸಿ ವೇಸ್ಟ್​ಗಳನ್ನು ತೆರವುಗೊಳಿಸದೇ ಇರಬಹುದು ಮತ್ತು ಸಾರ್ವಜನಿಕರ ಭಾಗಹಿಸುವಿಕೆ ಇಲ್ಲದೇ ಇರಬಹುದು, ಇನ್ನೂ ಕೆಲವು ಹಂತಗಳಲ್ಲಿ ಹಿಂದೆ ಉಳಿದಿರಬಹುದು. ಈ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಈ ಹಿಂದೆ ರಾಷ್ಟ್ರಪತಿಗಳಿಂದ ಸ್ವಚ್ಛ ನಗರಿ ಪ್ರಶಸ್ತಿಯನ್ನು ಕೂಡ ಮೈಸೂರು ಪಡೆದುಕೊಂಡಿದೆ ಎಂದರು.

ಕೆಲವೊಂದು ವಿಷಯಗಳಲ್ಲಿ ನಾವು ಎಲ್ಲಿ ಹಿಂದೆ ಉಳಿದಿದ್ದೇವೋ ಅದನ್ನು ನಾವು ಇಂಪ್ರೂವ್ ಮಾಡಿಕೊಂಡು ಮುಂದಿನ ವರ್ಷದಲ್ಲಿ ರ‍್ಯಾಂಕ್ ನಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗಳಿಸುತ್ತೇವೆ. ಸ್ವಚ್ಚತಾ ನಗರಿ ಎಂಬ ಹೆಸರನ್ನು ಉಳಿದುಕೊಳ್ಳಲು ಕಾರ್ಪೊರೇಷನ್ ಮತ್ತು ಜಿಲ್ಲಾಡಳಿತದ ಕಡೆಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮೈಸೂರು ನಗರದ ಸ್ಚಚ್ಚತೆಯಲ್ಲಿ ಚಾಲೆಂಜಿಂಗ್ ಅಂದರೆ ಮೈಸೂರು ಸುತ್ತಮುತ್ತ 5 ಗ್ರಾಮ ಪಂಚಾಯಿತಿ ಇದ್ದು, 5 ಟಿಎಂಸಿ, ಸಿಎಂಸಿಗಳು ಇವೆ. ಅದರಲ್ಲಿ ಟ್ರಾನ್ಷಕ್ಷನ್ ಪಾಯಿಂಟ್​ಗಳಾದ ಕಡಕೋಳ, ರಮ್ಮನಹಳ್ಳಿ , ಹೂಟಗಳ್ಳಿ, ಶ್ರೀ ರಾಂಪುರ ಗಳಲ್ಲಿ ಸ್ವಲ್ಪ ಸಮಸ್ಯೆ ಆಗಿದೆ. ಮುಡಾ ವ್ಯಾಪ್ತಿಯಲ್ಲಿ ಇರುವ ಲೇಔಟ್​ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಆಗುತ್ತಿದೆ. ಇವೆಲ್ಲ ಸಮಸ್ಯೆಗಳನ್ನು ಸುಧಾರಣೆ ಮಾಡಲು ಜಿಲ್ಲಾಡಳಿತದ ಕಡೆಯಿಂದ ಎಲ್ಲ ತರಹದ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗನ್ ಹೌಸ್​ನಲ್ಲಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ : ನಗರದ ಗನ್ ಹೌಸ್​ನಲ್ಲಿ ಪ್ರತಿಷ್ಠಾಪನೆ ಮಾಡಿರುವ ಪ್ರತಿಮೆ ಎಲ್ಲ ರೀತಿಯ ಕಾನೂನು ಪ್ರಕ್ರಿಯೆ ಮೂಲಕ ಆಗಿದೆ. ಜಿಲ್ಲಾ ಮಟ್ಟದಲ್ಲಿ ಇರುವ ರಸ್ತೆ ಸುರಕ್ಷತೆ, ಅಪೆಕ್ಸ್ ಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಡೈರೆಕ್ಷನ್ ಮೇಲೆ ನಗರ ಪೊಲೀಸ್​ ಆಯುಕ್ತರು, ಮುಡಾ ಆಯುಕ್ತರು ಸೇರಿದಂತೆ ಅಧಿಕಾರಿಗಳ ಕಮಿಟಿ ಇದ್ದು. ಆ ಕಮಿಟಿ ಪ್ರತಿಮೆ ಸ್ಥಾಪನೆ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳ ಪ್ರಕಾರವೇ ಇಲ್ಲಿ ಪ್ರತಿಮೆ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ತೊಂದರೆಗಳು ಇದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅವಕಾಶ ಇದೆ. ಜೊತೆಗೆ ಪ್ರತಿಭಟನೆ ಮಾಡಲು ಅವಕಾಶ ಇದೆ ಎಂದು ಡಾ.ಕೆ ವಿ.ರಾಜೇಂದ್ರ ಹೇಳಿದರು.

ಯಾವುದೇ ಪ್ರತಿಮೆ ನಿರ್ಮಾಣ ಮಾಡಬೇಕಾದರೆ ಕೆಲವು ಸಂಘ ಸಂಸ್ಥೆಗಳು ಅದರ ಜವಾಬ್ದಾರಿ ತೆಗೆದುಕೊಂಡಿರುತ್ತಾರೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪ್ರತಿಮೆ ನಿರ್ಮಾಣ ವಿಚಾರ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿತ್ತು. ಆಗ ಕೋರ್ಟ್​ಗೆ ರಿಪಿಟಿಷನ್ ಹಾಕಿದ್ದು, ಬಳಿಕ ಸರ್ಕಾರವೇ ಅದರ ಬಗ್ಗೆ ಲಾಯರ್ ಇಟ್ಟು ರಿ ಅಪಿಲ್ ಹಾಕಿತ್ತು. ಜೊತೆಗೆ ಇದಕ್ಕೆ ಸಂಬಂಧಿಸಿದ ಹಾಗೆ ಜೊತೆಗೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ 2009ರಲ್ಲಿ ರಸ್ತೆ ಸುರಕ್ಷತೆಗೆ ಅಡ್ಡ ಬರುವಂತಹ ಯಾವುದೇ ರಿಲಿಜಿಯಸ್ ಪ್ರತಿಮೆ ಸೇರಿದಂತೆ ಇತರ ಪ್ರತಿಮೆಗಳನ್ನು ನಿರ್ಮಾಣ ಮಾಡಬಾರದು ಎಂದು ಹೇಳಿದೆ.

ಜೊತೆಗೆ ಇಲ್ಲಿ 5 ರಸ್ತೆಯಲ್ಲಿ ಬಂದು ಸೇರುವುದರಿಂದ ಅಲ್ಲಿ ಸರ್ಕಲ್ ಅವಶ್ಯಕತೆ ಇದೆ ಮತ್ತು ಇದು ಅನಧಿಕೃತವಾಗಿ ಇರುವುದಲ್ಲ. ಪ್ರತಿಮೆ ಸ್ಥಾಪನೆ ಬಗ್ಗೆ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ನಿಂದ ಅನುಮೋದನೆ ಪಡೆದು, ಕ್ಯಾಬಿನೆಟ್​ನಲ್ಲಿ ಪಾಸಾಗಿ ಕೋರ್ಟ್ ಮುಖಾಂತರ ಸರ್ಕಾರದ ಮುಖಾಂತರವೇ ಪ್ರತಿಮೆ ಆಗಿದೆ. ಇಲ್ಲಿ ಪ್ರತಿಮೆ ಜೊತೆ ಸರ್ಕಲ್ ಅವಶ್ಯಕತೆ ಇದ್ದು, ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಗೊತ್ತಾದ ನಂತರ ಕಾನೂನಾತ್ಮಕವಾಗಿಯೇ ಪ್ರತಿಮೆ ಸ್ಥಾಪನೆ ಆಗಿದೆ. ಈ ಸಂಬಂಧ ಎಲ್ಲ ವಿಚಾರಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಡಾ.ಕೆ ವಿ.ರಾಜೇಂದ್ರ ಪ್ರತಿಕ್ರಿಯೆ ನೀಡಿದರು.

ನಗರ ಸಭೆಯಲ್ಲಿ ಕಡತಗಳ ಕಳ್ಳತನ ಪ್ರಕರಣ : ನಂಜನಗೂಡು ನಗರ ಸಭೆಯಲ್ಲಿ ಕಡತಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಈಗ ಕಡತ ಕಳ್ಳತನ ಆಗಿರುವ ವಿಚಾರದ ಬಗ್ಗೆ ಇನ್ನೂ ನೋಡಿಲ್ಲ. ಅದರ ಬಗ್ಗೆ ಎಸಿ ಅವರಿಗೆ ಒಂದು ಆದೇಶ ಸಹ ಕೊಟ್ಟಿದ್ದೇವೆ. ವರದಿ ಕೊಡಲು ಹೇಳಿದ್ದೇನೆ. ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ : ಮೈಸೂರು : ಶಿಥಿಲಾವಸ್ಥೆಯಲ್ಲಿದ್ದ ಪಾರಂಪರಿಕ ಪೊಲೀಸ್ ಬ್ಯಾಂಡ್ ಹೌಸ್ ಕಟ್ಟಡ ನವೀಕರಣ ಕಾಮಗಾರಿ ಪೂರ್ಣ

Last Updated :Jan 12, 2024, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.