ETV Bharat / state

ರೌಡಿಶೀಟರ್ ಕೊಲೆ ಪ್ರಕರಣ: 11 ಜನರ ಬಂಧನ

author img

By

Published : May 22, 2023, 4:01 PM IST

Updated : May 22, 2023, 4:54 PM IST

ರೌಡಿ ಶೀಟರ್ ಕೊಲೆ ಪ್ರಕರಣ
ರೌಡಿ ಶೀಟರ್ ಕೊಲೆ ಪ್ರಕರಣ

ಕಳೆದ ಗುರುವಾರ ನಡೆದಿದ್ದ ರೌಡಿ ಶೀಟರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಜನರನ್ನು ಬಂಧಿಸಲಾಗಿದೆ.

ಮೈಸೂರು: ಹಳೇ ದ್ವೇಷದ ಹಿನ್ನೆಲೆ ಕಳೆದ ಗುರುವಾರ ವ್ಯಕ್ತಿಯನ್ನು ಬರ್ಬರವಾಗಿ ಹಾಡು ಹಗಲೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈವರೆಗೂ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್​​ ಮೂಲಗಳು ಖಚಿತ ಪಡಿಸಿವೆ. ಕಳೆದ ಗುರುವಾರ ಸಂಜೆ ಬೈಕ್​ನಲ್ಲಿ ಬಂದು, ಅಂಗಡಿಯ ಮುಂದೆ ಕುಳಿತಿದ್ದ ರೌಡಿ ಶೀಟರ್ ಚಂದ್ರುನನ್ನು ಮೂರೇ ನಿಮಿಷದಲ್ಲಿ ಕೊಲೆಮಾಡಿ ಪರಾರಿಯಾಗಿರುವ ದೃಶ್ಯ, ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಒಟ್ಟು 11 ಮಂದಿ ಬಂಧನ: ಹಳೇ ದ್ವೇಷದಿಂದ ನಡೆದ ಈ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕಾಗಿ ಪೋಲಿಸರು ಹಲವಾರು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿ ಶನಿವಾರ ಬೆಳಗಿನ ಜಾವ ಏಳು ಜನ ಆರೋಪಿಗಳನ್ನ ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.‌ ಉಳಿದ ನಾಲ್ವರು ತಲೆಮರಸಿಕೊಂಡಿದ್ದು, ಅವರ ಶೋಧ ಕಾರ್ಯ ಮುಂದುವರೆದಿದೆ ಎಂದು ಪೋಲಿಸ್ ಮೂಲಗಳು ಖಚಿತ ಪಡಿಸಿವೆ.

ಪ್ರಕರಣದ ಹಿನ್ನೆಲೆ: ಮೈಸೂರು: ಕಳೆದ ಗುರುವಾರ ಸಂಜೆ 5 ಗಂಟೆ ಸಮಯದಲ್ಲಿ ವಿವಿ ಮೊಹಲ್ಲದ ಒಂಟಿ ಕೊಪ್ಪಲಿನ, ಕಾಳಿದಾಸ ರಸ್ತೆಯಲ್ಲಿರುವ ಟೈಲರ್ ಅಂಗಡಿಯ ಮುಂದೆ ಕುಳಿತಿದ್ದ ಚಂದ್ರು ಎಂಬುವವರನ್ನು, ಹೊಂಚುಹಾಕಿ ಗುರುವಾರ ಸಂಜೆ 5 ಗಂಟೆ ಸಮಯದಲ್ಲಿ, 4 ದ್ವಿ ಚಕ್ರ ವಾಹನಗಳಲ್ಲಿ ಬಂದ 11 ಮಂದಿ ಯುವ ದುಷ್ಕರ್ಮಿಗಳು, ಅಂಗಡಿಯ ಮುಂದೆ ಕುಳಿತಿದ್ದ ರೌಡಿ ಶೀಟರ್ ಚಂದ್ರುವನ್ನ ಮೂರೆ ನಿಮಿಷದಲ್ಲಿ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿರುವ ಘಟನೆ ಮೈಸೂರಿನ ಪಡುವಾರಹಳ್ಳಿಯಲ್ಲಿ ನಡೆದಿತ್ತು.

ಹಳೇ ವೈಷಮ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆಯಷ್ಟೆ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ ಅವ್ವ ಮಾದೇಶ್ ಆಪ್ತ ಚಂದು ಅಲಿಯಾಸ್ ಚಂದ್ರಶೇಖರ್ ಎಂಬಾತನನ್ನು ಸ್ಕೂಟರ್​​​ನಲ್ಲಿ ಬಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಕೇಸ್ ಖುಲಾಸೆಯಾಗಿ ಹೊರ ಬಂದಿದ್ದ ಚಂದು ಅಲಿಯಾಸ್ ಚಂದ್ರಶೇಖರ್ ಎಂಬಾತನನ್ನು, ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಮಚ್ಚು ಮತ್ತು ಲಾಂಗುಗಳಿಂದ ನಡುರಸ್ತೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದರು.

ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್​ಗಳಿಗೆ ಗುದ್ದಿ ದುಷ್ಕರ್ಮಿಗಳು ಪರಾರಿ-ವಿಡಿಯೋ

ಕೊಲೆಗೆ ಹಳೇ ವೈಷಮ್ಯ ಕಾರಣ?: ಜೈಲಿನಿಂದ ಬಿಡುಗಡೆಯಾಗಿ ಬಂದ ಚಂದು ಅಲಿಯಾಸ್ ಚಂದ್ರಶೇಖರ್ ಎಂಬಾತನ ಕೊಲೆಗೆ ಹಳೇ ವೈಷಮ್ಯವೇ ಕಾರಣ ಎಂದು ಹೇಳಲಾಗಿತ್ತು. ಈ ಹಿಂದೆ ಕೊಲೆಯಾದ ಪಡುವಾರಹಳ್ಳಿಯ ದೇವು ಎಂಬಾತನ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಕೊಲೆಯಾದ ಚಂದು ಅಲಿಯಾಸ್ ಚಂದ್ರಶೇಖರ್ ಮಾಜಿ ನಗರ ಪಾಲಿಕೆ ಸದಸ್ಯ ಅವ್ವ ಮಾದೇಶ್ ಅಪ್ತನಾಗಿದ್ದು,ಈ ಹಿಂದೆ ಈತ ಹುಣಸೂರಿನಲ್ಲಿ ನಡೆದ ಜೋಡಿ ಕೊಲೆಯಲ್ಲಿ ಆರೋಪಿ ಸಹ ಆಗಿದ್ದ ಎನ್ನಲಾಗಿದೆ. ಕೊಲೆಯಾದ ಸ್ಥಳಕ್ಕೆ ನಗರ ಪೊಲೀಸ್​ ಕಮಿಷನರ್ ರಮೇಶ್ ಬಾನೋತ್ ಹಾಗೂ ವಿ ವಿ.ಪುರಂ ಠಾಣೆಯ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಇದನ್ನೂ ಓದಿ: ಗಂಗಾವತಿಯಲ್ಲಿ ಹನಿಟ್ರ್ಯಾಪ್​ಗೆ ಒಪ್ಪದ ಮಂಗಳಮುಖಿಯರ ಮೇಲೆ ಹಲ್ಲೆ

Last Updated :May 22, 2023, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.