ETV Bharat / state

ಜೆಡಿಎಸ್ ಪಕ್ಷವನ್ನು ಇಬ್ರಾಹಿಂ ಹಳ್ಳಕ್ಕೆ ತಳ್ಳುತ್ತಿದ್ದಾರೆ: ಸಚಿವ ಅಶ್ವತ್ಥ್​ ನಾರಾಯಣ್

author img

By

Published : Feb 28, 2023, 10:02 PM IST

ಸಚಿವ ಅಶ್ವತ್ಥ್​ ನಾರಾಯಣ್
ಸಚಿವ ಅಶ್ವತ್ಥ್​ ನಾರಾಯಣ್

ಜೆಡಿಎಸ್​ ಪಕ್ಷ ಅಧಿಕಾರಕ್ಕೆ ಬಂದ್ರೆ ಟಿಪ್ಪು ವಿಶ್ವವಿದ್ಯಾಲಯ ನಿರ್ಮಾಣ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್​ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಇಬ್ರಾಹಿಂ ವಿರುದ್ದ ಸಚಿವ ಅಶ್ವತ್ಥ್​ ನಾರಾಯಣ್ ವಾಗ್ದಾಳಿ

ಮಂಡ್ಯ: ಜೆಡಿಎಸ್ ಪಕ್ಷವನ್ನು ಹಳ್ಳ ಹಿಡಿಸಲು ಸಿ.ಎಂ ಇಬ್ರಾಹಿಂ ಇಂತಹ ಹೇಳಿಕೆ ನೀಡ್ತಿದ್ದಾರೆ. ಅವರಿಂದ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳನ್ನು ಕೊಟ್ಟರೆ ಕರ್ನಾಟಕದಲ್ಲಿ ಅಡ್ರಸ್ ಇಲ್ಲದಂಗೆ ಕಳುಹಿಸುತ್ತಾರೆ ಎಂದು ಮದ್ದೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್ ಕಿಡಿಕಾರಿದರು.

ಇನ್ನೊಂದು ಬಾರಿ ಟಿಪ್ಪು ಬೆಂಬಲಿಸಿ ಹೇಳಿಕೆ ಕೊಟ್ಟರೆ ಅಡ್ರಸ್ ಇಲ್ಲದಂಗೆ ಆಗುತ್ತೆ. ಇಂತಹ ಹೇಳಿಕೆ ಆಧಾರದ ಮೇಲೆ ಜನರು ಚುನಾವಣೆಯಲ್ಲಿ ಉತ್ತರ ಕೊಡ್ತಾರೆ. ಟಿಪ್ಪು ಬೇಕಾ ಅಥವಾ ನಾಲ್ವಡಿ ಬೇಕಾ ಎಂಬ ಸ್ಪಷ್ಟ ಸಂದೇಶವನ್ನು ಜನರು ಕೊಡ್ತಾರೆ. ತುಷ್ಠೀಕರಣದ ರಾಜಕಾರಣ ಮಾರ್ಗ ದೇಶದಲ್ಲಿ ಮಾಯವಾಗಿದೆ ಎಂದರು.

ಬಿಎಸ್​ವೈ ಬಗ್ಗೆ ಅಪಾರ ಅಭಿಮಾನವಿದೆ: ಬಿಜೆಪಿ ಬಿಎಸ್​ವೈಗೆ ಕಣ್ಣೀರು ಹಾಕಿಸಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ಪಕ್ಷ ಬೆಳೆಸುವ ಜೊತೆಗೆ ಅವರು ಬೆಳೆದು ನಾಯಕರಾಗಿದ್ದಾರೆ. ಅವರು ನಮ್ಮ ನಾಯಕರು. ಅವರಿಗೆ ಬಿಜೆಪಿ ಬಗ್ಗೆ ಅಪಾರ ಕಾಳಜಿ, ಅಭಿಮಾನವಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಕೆಲಸ ಮಾಡ್ತಿದ್ದಾರೆ ಎಂದರು.

ಇದನ್ನೂ ಓದಿ : ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲೇ ಎಂದು ಬಿಜೆಪಿ ನಾಯಕರು ಘೋಷಣೆ ಮಾಡಲಿ: ಡಿಕೆಶಿ ಸವಾಲು

ಡಿಕೆಶಿ ಮತ್ತು ಅವರ ಪಕ್ಷದ ಪರಿಸ್ಥಿತಿ ನೋಡಿಕೊಂಡರೆ ಸಾಕು. ಡಿಕೆಶಿ ಅವರಿಗೆ ಅವರ ಪಕ್ಷದಲ್ಲಿ ಜಾಗ ಸಿಗ್ತಿಲ್ಲ. ಕುರ್ಚಿ ಎಳೆದುಕೊಂಡು ಕುಳಿತಿದ್ದಾರೆ‌. ಕಾಂಗ್ರೆಸ್ ಪಕ್ಷದವರಿಗೆ ಬಿಎಸ್​​ವೈ ಬಗ್ಗೆ ಮಾತನಾಡೋಕೆ ಯಾವ ನೈತಿಕತೆಯೂ, ಮೌಲ್ಯವೂ ಇಲ್ಲ ಎಂದು ಅಶ್ವತ್ಥ್​ ನಾರಾಯಣ್ ಹೇಳಿದರು.

ಇದನ್ನೂ ಓದಿ : 'ಪಕ್ಷದಲ್ಲಿದ್ದಾಗ ಕುಟುಂಬ ರಾಜಕಾರಣ ಗೊತ್ತಾಗಿಲ್ವಾ?': ಶಿವಲಿಂಗೇಗೌಡರ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಪಾತಾಳದಿಂದ ಆಕಾಶದವರೆಗೆ ಭ್ರಷ್ಟಾಚಾರ ಮಾಡಿರುವ ಪಕ್ಷ ಕಾಂಗ್ರೆಸ್. ಸಿಕ್ಕ ಸಿಕ್ಕಲ್ಲಿ ದುಡ್ಡು ಮಾಡಿಕೊಳ್ಳೋರಿಗೆ ನೈತಿಕತೆ ಇದ್ಯಾ?. ನಾನು ಹಿಂದು, ಆದ್ರೆ ಹಿಂದು ವಿರೋಧಿ ಅಂತಾರೆ. ಅವರಿಗೆ ಏನಾದ್ರು ಸ್ಪಷ್ಟತೆ ಇದೆಯಾ.? ನಮ್ಮ ಜನರ ಹಾಗೂ ರಾಜ್ಯವನ್ನು ಕಾಂಗ್ರೆಸ್ ಪಕ್ಷದಿಂದ ಕಾಪಾಡುವುದು ನಮ್ಮ ಕರ್ತವ್ಯ ಎಂದು ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ : ಕನಕಪುರದಲ್ಲಿ ತಯಾರಾದ ಕುಕ್ಕರ್​​ಗಳು ಡುಬ್ಲಿಕೇಟು, ಬ್ಲಾಸ್ಟ್ ಆಗುತ್ತವೆ ಎಚ್ಚರಿಕೆಯಿಂದಿರಿ: ರಮೇಶ್ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.