ETV Bharat / state

ನನ್ನ ತಮ್ಮನೂ ರಾಜಕಾರಣದಲ್ಲಿದ್ದಾನೆ, ಜೆಡಿಎಸ್​​ ಕುಟುಂಬ ರಾಜಕಾರಣ ಕುರಿತು ನಾನೇನು ಹೇಳಲ್ಲ: ಡಿಕೆಶಿ

author img

By

Published : Dec 6, 2021, 8:34 PM IST

DK Shivakumar
ಡಿ.ಕೆ ಶಿವಕುಮಾರ್

ಮಂಡ್ಯದಲ್ಲಿ ವಿಧಾನಪರಿಷತ್ ಚುನಾವಣೆಗೆ ನಿಂತಿರುವುದು ಗೂಳಿ ಗೌಡ ಅಲ್ಲ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಎಂದು ತಿಳಿದು ಮತ ಹಾಕಿ. ಗೂಳಿ ಗೌಡ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿ ಕೆಲಸ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

ಮಂಡ್ಯ: ಜೆಡಿಎಸ್​ ಕುಟುಂಬ ರಾಜಕಾರಣ ಬಗ್ಗೆ ನಾನೇನು ಮಾತನಾಡುವುದಿಲ್ಲ. ಯಾಕಂದ್ರೆ ನನ್ನ ತಮ್ಮನೂ ರಾಜಕೀಯದಲ್ಲಿದ್ದಾನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ಅಭ್ಯರ್ಥಿ ಗೂಳಿ ಗೌಡ ಪರ ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ, ಸಿದ್ದರಾಮಯ್ಯರೂ ಸಹ ಹಾಗೆ ಮಾತನಾಡುವುದಿಲ್ಲ. ಅವರ ಮಗನೂ ರಾಜಕಾರಣದಲ್ಲಿದ್ದಾನೆ ಎಂದರು.

ಜೆಡಿಎಸ್​​ ಕುಟುಂಬ ರಾಜಕಾರಣ ಕುರಿತು ಡಿಕೆಶಿ ಮಾತು

ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ

ಇಲ್ಲಿ ನಿಂತಿರುವುದು ಗೂಳಿ ಗೌಡರಲ್ಲ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ ಎಂದು ತಿಳಿದು ಮತ ಚಲಾಯಿಸಿ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಗೂಳಿ ಗೌಡ ನೋಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗಾಳಿ ಆರಂಭವಾಗಿದೆ. ಇಡೀ ರಾಜ್ಯದಲ್ಲಿ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿದ್ದಾರೆ ಎಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.

ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಆಗಲೇಬೇಕು. ಹಳೇ ಮೈಸೂರು ಭಾಗದ ರೈತರನ್ನು ರಕ್ಷಣೆ ಮಾಡಬೇಕು. ರಕ್ಷಣೆ ಮಾಡಬೇಕು ಎಂದರೆ ಮೇಕೆದಾಟು ಯೋಜನೆ ಆಗಬೇಕು. ಯೋಜನೆ ಪ್ರಾರಂಭವಾಗಲು ಎಲ್ಲಾ ಅನುಮತಿ ಸಿಕ್ಕಿದೆ. ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಸಿಗುತ್ತದೆ. ಜನವರಿ ಮೊದಲ ವಾರದಿಂದ ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುತ್ತೇವೆ. 10 ರಿಂದ 15 ದಿನಗಳ ಕಾಲ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಮಿಷನ್ ಆರೋಪ ತನಿಖೆ

ಮತ್ತೊಂದೆಡೆ ತುಮಕೂರು ಜಿಲ್ಲೆಯಲ್ಲೂ ಪ್ರಚಾರ ನಡೆಸಿದ ಡಿಕೆಶಿ, ಬಿಜೆಪಿ ಸರ್ಕಾರದಲ್ಲಿ ಕಮಿಷನ್ ಕಡ್ಡಾಯವಾಗಿದೆ ಎಂಬ ಕಂಟ್ರ್ಯಾಕ್ಟರ್ ಅಸೋಸಿಯೇಷನ್​ ಆರೋಪವನ್ನು ಸರ್ಕಾರ ಲಘುವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಂಟ್ರಾಕ್ಟರ್ ಅಸೋಸಿಯೇಷನ್ ಆರೋಪದ ಕುರಿತು ತನಿಖೆ ನಡೆಸಬೇಕು. ಇಲ್ಲದಿದ್ದರೆ ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು. ಆ ಸಮಿತಿಯಲ್ಲಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಇರುತ್ತಾರೆ. ಆಗ ಭ್ರಷ್ಟಾಚಾರದ ಕುರಿತು ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಮಗ್ರ ರೀತಿಯಲ್ಲಿ ತನಿಖೆ ನಡೆಯಲಿದೆ ಎಂದರು.

ಓದಿ: ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ, ಏನಾಗುತ್ತೋ ನೋಡೋಣ : ರೇಣುಕಾಚಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.