ETV Bharat / city

ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ, ಏನಾಗುತ್ತೋ ನೋಡೋಣ : ರೇಣುಕಾಚಾರ್ಯ

author img

By

Published : Dec 6, 2021, 7:54 PM IST

ಮಂತ್ರಿಯಾದವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ. ಇದನ್ನು ಬಿಟ್ಟು ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು. ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ. ಅವರು ಏನು ನಿರ್ಧಾಕ ಕೈಗೊಳ್ಳುತ್ತಾರೆ ನೋಡೋಣ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು..

mp-renukacharya
ಶಾಸಕ ರೇಣುಕಾಚಾರ್ಯ

ದಾವಣಗೆರೆ : 2004, 2008, 2010ರಲ್ಲಿ ಮಂತ್ರಿಯಾದವರೇ ಮಂತ್ರಿಗಳಾಗಿದ್ದಾರೆ. ಅವರನ್ನು ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು. ವಿಜಯೇಂದ್ರರವರು ಮಂತ್ರಿಯಾದ್ರೇ ಸಂತೋಷ ಪಡ್ತಿವಿ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದರು.

ಸಂಪುಟ ಪುನಾರಚನೆ ಕುರಿತು ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿರುವುದು..

ನಾನು ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಲ್ಲ : ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಮಾತನಾಡಿದ ಅವರು, ಬಿ.ಎಸ್​. ಯಡಿಯೂರಪ್ಪನವರು ಬಿಜೆಪಿ ಪಕ್ಷದ ಧೀಮಂತ ನಾಯಕರು. ಸಂಪುಟ ಪುನಾರಚನೆಯಾಗುತ್ತೆ ಎಂಬ ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಮುಖ್ಯಮಂತ್ರಿಯವರ ಪರಮಾಧಿಕಾರ, ಅವರು ಏನೂ ತೀರ್ಮಾನ ತೆಗೆದುಕೊಳ್ಳುತ್ತಾರೇ ನೋಡೋಣ. ನಾನು ಮಂತ್ರಿ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿರುತ್ತೇವೆ. ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬೇಕೆಂದು ಹೇಳಿದ್ದೇನೆ ಎಂದರು.

ವೀಕ್ ಸಿಎಂ ಎಂಬ ಡಿಕೆಶಿ ಹೇಳಿಕೆಗೆ ಆಕ್ರೋಶ : ಸಿಎಂ ಬೊಮ್ಮಾಯಿಯವರು ಒಬ್ಬ ಸಾಮಾನ್ಯ ಮುಖ್ಯಮಂತ್ರಿಯಾಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಬಾಯಿಗೆ ಬಂದಂತೆ ಮಾಧ್ಯಮಗಳಲ್ಲಿ ಮಾತನಾಡಿದ್ರೇ ಅವರನ್ನು ಪವರ್ ಫುಲ್ ಸಿಎಂ ಎನ್ನುತ್ತಾರಾ, ಬೊಮ್ಮಾಯಿಯವರು ಬೆಳಗ್ಗಿನಿಂದ ಸಂಜೆತನಕ ಕೆಲಸ ಮಾಡ್ತಿದ್ದಾರೆ. ಅವರು ವೀಕ್ ಸಿಎಂ ಅಲ್ಲ ಬೆಸ್ಟ್ ಸಿಎಂ ಎಂದು ಶಾಸಕ ರೇಣುಕಾಚಾರ್ಯ ಸಿಎಂರನ್ನು ಸಮರ್ಥಿಸಿಕೊಂಡರು.

ಡಿಕೆಶಿಯವರನ್ನು ಬಿಜೆಪಿಗೆ ಕರೆದಿಲ್ಲ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ನಾವು ಬಿಜೆಪಿಗೆ ಕರೆದೇ ಇಲ್ಲ. ಅವರ ವೈಯಕ್ತಿಕ ವಿಚಾರದಿಂದಾಗಿ ನೂರಪಟ್ಟು ಆಸ್ತಿಯನ್ನು ಮಾಡಿ ಭ್ರಷ್ಟಾಚಾರ ಮಾಡಿದ್ದರಿಂದ ಇಡಿ-ಐಟಿ ತನಿಖೆ ಮಾಡಿದ್ದರು. ಅದಕ್ಕೆ ಜೈಲಿಗೆ ಹೋದ್ರು ವಿನಾಃ ನಾವು ಅವರಿಗೆ ತಿಹಾರ್ ಜೈಲಿಗೆ ಕಳುಹಿಸಲಿಲ್ಲ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ಮಾಡಿದರು. ಅಲ್ಲದೆ, ಲಾಕ್‌ಡೌನ್ ಮಾಡೋದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.