ETV Bharat / state

ಮತದಾನ ಮಾಹಿತಿ ಅಕ್ರಮ ಸಂಗ್ರಹ: ಬಿಜೆಪಿ ಪಕ್ಷದ ವಿರುದ್ಧ ಹೆಚ್​ಡಿಕೆ ಆರೋಪ

author img

By

Published : Nov 19, 2022, 7:21 PM IST

hd-kumarswamy
ಬಿಜೆಪಿ ಪಕ್ಷದ ವಿರುದ್ಧ ಹೆಚ್​ಡಿಕೆ ಆರೋಪ

ಹೆಚ್ಚಿನ ಶಕ್ತಿ ಇರುವ ಜೆಡಿಎಸ್, ಕಾಂಗ್ರೆಸ್​ ಬೂತುಗಳಲ್ಲಿ ಮತಗಳನ್ನ ರದ್ದು ಮಾಡಿದ್ದಾರೆಂದು ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿಕೆ. ಬಿಜೆಪಿ ವಿರುದ್ಧ ಆಕ್ರೋಶ.

ಕೋಲಾರ: ಮತದಾರ ಮಾಹಿತಿ ಅಕ್ರಮ ಸಂಗ್ರಹ ಮಾಡುತ್ತಿರುವುದರ ಕುರಿತು ಸರ್ಕಾರ ಹಾರಿಕೆ ಉತ್ತರ ನೀಡುತ್ತಿದ್ದು, ಇದೊಂದು ವ್ಯವಸ್ಥಿತ ಸಂಚು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ರಥಯಾತ್ರೆ ಕಾರ್ಯಕ್ರಮದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಈ ಆರೋಪ ಮಾಡಿದ್ದಾರೆ.

ಅಲ್ಲದೇ ಬಿಜೆಪಿ ಕುತಂತ್ರದ ರಾಜಕಾರಣ ಮಾಡುತ್ತಿದ್ದು, ಸಮಾಜ ಹಾಗೂ ದೇಶವನ್ನ ಒಡೆಯುವಂತಹ ಕೆಲಸ ಮಾಡುತ್ತಿದೆ. ಇನ್ನು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತಿದೆ. ಬಿಜೆಪಿ ಕುತಂತ್ರದ ರಾಜಕಾರಣದಿಂದ ಚುನಾವಣೆ ಗೆಲ್ಲಬಹುದು ಎಂಬ ನಿಟ್ಟಿ‌ನಲ್ಲಿ ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇಂದೊಂದು ಹೇಯ ಕೃತ್ಯ ಎಂದು ಹೆಚ್​ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ತನಿಖೆ ಮೇಲೆ ವಿಶ್ವಾಸವಿಲ್ಲ: ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿದಾಗ, ಸಚಿವರೊಬ್ಬರಿಗೆ ಸೇರಿದ ಚೆಕ್ ಗಳು ಸಿಕ್ಕಿವೆ, ಹೀಗಿರುವಾಗ ಮಂತ್ರಿಯನ್ನ ಇಟ್ಟುಕೊಂಡು ಇವರು ಯಾವ ತನಿಖೆ ಮಾಡುತ್ತಾರೆ. ಅವರ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿದರು. ಇನ್ನು ಜನರ ವಿಶ್ವಾಸ ಗಳಿಸಬೇಕಾದರೆ ಆ ಮಂತ್ರಿಯನ್ನ ವಜಾ ಮಾಡಿ ಇಲ್ಲವಾದರೆ ಕಾಟಚಾರದ ತನಿಖೆ ಮಾಡಿ ಪ್ರಕರಣ ಮುಚ್ಚಿ ಹಾಕುತ್ತಾರೆ ಎಂದು ದೂರಿದರು.

ಅಲ್ಲದೆ ಚುನಾವಣಾ ಆಯೋಗ ತಮ್ಮದೆ ಆದ ಸ್ವತಂತ್ರ ಸಂಸ್ಥೆ ಇದ್ದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಲು ಹೊರಟಿರುವ ದುಷ್ಟ ಶಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದರು.

‘ಪಂಚರತ್ನ’ ಕಳ್ಳಕಾಕರಿಗಲ್ಲ: ಇನ್ನು ರಮೇಶ್ ಜಾರಕಿಹೊಳಿಗೆ ಹೇಳಿಕೆಗೆ ಟಾಂಗ್ ನೀಡಿದ ಕುಮಾರಸ್ವಾಮಿ ಅವರು, ನಾವು ಅಧಿಕಾರಕ್ಕೆ ಬರದೇ ಕಾಂಗ್ರೆಸ್​ ಅಧಿಕಾರಕ್ಕೆ ಬರದೆ ರಮೇಶ್ ಜಾರಕಿಹೊಳಿ ಅಧಿಕಾರಕ್ಕೆ ಬರಬೇಕೆ ಎಂದು ಪ್ರಶ್ನಿಸಿದರು. ಅಲ್ಲದೇ ರಮೇಶ್ ಜಾರಕಿಹೊಳಿ ಅವರು, ಇನ್ನೊಂದು ವಿಡಿಯೋ ಮಾಡಲು ಬರಬೇಕ ಎಂದು ವ್ಯಂಗ್ಯವಾಗಿಡಿದರು. ಅಲ್ಲದೇ ನಾವು ಪಂಚರತ್ನ ಕಾರ್ಯಕ್ರಮ ಕಳ್ಳಕಾಕರಿಗೆ ಸಹಾಯ ಮಾಡಲು ಪ್ರಾರಂಭಿಸಿಲ್ಲ, ವ್ಯಂಗ್ಯ ಮಾಡಿರುವವರಿಗೆ ಮುಂದಿನ ಚುನಾವಣೆಯಲ್ಲಿ‌ ಉತ್ತರ ನೀಡಲಾಗುವುದು ಎಂದರು.

ಧಮ್ಮು ತಾಕತ್ತು ಅಕ್ರಮಗಳನ್ನ ನಿಲ್ಲಿಸುವುದಕ್ಕೆ ಪ್ರದರ್ಶನ: ಇನ್ನು ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಂಬಂಧ ಮಾತನಾಡಿದ ಅವರು ಸರ್ಕಾರ ಚುನಾವಣೆ ನಡೆಸದೆ ಎಲ್ಲಾ ರೀತಿಯ ಹುನ್ನಾರ ಮಾಡಲಾಗುತ್ತಿದೆ, ಚುನಾವಣೆ ನಡೆಸುತ್ತಾರೆಂಬ ನಂಬಿಕೆ ಇಲ್ಲ, ಚುನಾವಣೆ ಮಾಡುವುದಾದರೆ ಎಂದೋ ಮಾಡಿರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಸಮಾವೇಶಗಳನ್ನ ಮಾಡುತ್ತಿದ್ದು, ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ, ಕಲ್ಬುರ್ಗಿಯಲ್ಲಿ ಸಮಾವೇಶ ಮಾಡಿ, ತಾಕತ್ತು ಧಮ್ಮಿನ ಬಗ್ಗೆ ಬೊಮ್ಮಯಿ ಅವರು ಮಾತನಾಡುತ್ತಾರೆ, ಧಮ್ಮು ತಾಕತ್ತು ಅಕ್ರಮಗಳನ್ನ ನಿಲ್ಲಿಸುವುದಕ್ಕೆ ಪ್ರದರ್ಶನ ಮಾಡಿ ಎಂದು ಅವರಿಗೆ ತಾಕೀತು ಮಾಡಿದರು.

ಇದನ್ನೂ ಓದಿ: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ: ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.