ETV Bharat / state

ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಸ್ಥಿತಿ ಇದ್ದಿದ್ದರೆ ಸಿದ್ದರಾಮಯ್ಯ ತಿರುಕನ ತರಹ ಅಲೆಯುತ್ತಿರಲಿಲ್ಲ: ಆರ್ ಅಶೋಕ್ ವ್ಯಂಗ್ಯ

author img

By

Published : Mar 14, 2023, 9:02 PM IST

Updated : Mar 14, 2023, 9:18 PM IST

ಮೈಸೂರು ಆಯ್ತು ಬಾದಾಮಿ ಆಯ್ತು ಈಗ ಕೋಲಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಕೋಲಾರದಲ್ಲಿ ಸೋತರೆ ಮತ್ತೆ ಎಲ್ಲಿ ಹೋಗ್ತಾರೋ ಗೊತ್ತಿಲ್ಲ. ಸಚಿವ ಸೋಮಣ್ಣ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

Minister R Ashok spoke to the media
ಸಚಿವ ಆರ್ ಅಶೋಕ್ ಮಾಧ್ಯಮದವರ ಜತೆ ಮಾತನಾಡಿದರು.

ಸಚಿವ ಆರ್ ಅಶೋಕ್ ಮಾಧ್ಯಮದವರ ಜತೆ ಮಾತನಾಡಿದರು.

ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸ್ಥಿತಿ ಇದ್ದಿದ್ದರೆ, ಸಿದ್ದರಾಮಯ್ಯ ತಿರುಕನ ತರಹ ಊರೂರು ಅಲೆಯುತ್ತಿರಲಿಲ್ಲ. ಭಿಕ್ಷಾಂದೇಹಿ ಭಿಕ್ಷಾಂದೇಹಿ ಎಂದು ಕೇಳಿಕೊಳ್ಳುತ್ತಿರಲಿಲ್ಲ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಕೋಲಾರದ ಶ್ರೀನಿವಾಸಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಮೈಸೂರು ಆಯ್ತು ಬಾದಾಮಿ ಆಯ್ತು ಈಗ ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದಾರೆ. ಈ ಬಾರಿ ಕೋಲಾರದಲ್ಲಿ ಸೋತರೆ ಮತ್ತೆ ಎಲ್ಲಿ ಹೋಗ್ತಾರೋ ಗೊತ್ತಿಲ್ಲ. ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಹೆಸರಿಗಷ್ಟೇ ಡೂಪ್ಲಿಕೇಟ್ ಮನೆ ಮಾಡುತ್ತಿದ್ದಾರೆ. ಅದು ಸುಮ್ನೆ ಹೆಸರಿಗಷ್ಟೇ, ಮನೆ ಎಂದು ಬೋರ್ಡ್ ಇರುತ್ತದೆಯೇ ಹೊರತು ಅವರು ಇರೋದಿಲ್ಲ. ಸಿದ್ದರಾಮಯ್ಯ ಕೋಲಾರದ ಕಡೆ ತಿರುಗಿಯೂ ನೋಡುವುದಿಲ್ಲ, ಅವರಿಗೆ ಬಿಸಿಲು ಕಂಡರೆ ಆಗೋಲ್ಲ, ಬಿಸಿಲಲ್ಲಿ ಓಡಾಡುವುದಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್​ಗೆ ದೇಶದಲ್ಲಿ ಉಳಿಗಾಲವಿಲ್ಲ ಎಂದ ಕಂದಾಯ ಸಚಿವರು: ಕಾಂಗ್ರೆಸ್​ಗೆ ದೇಶದಲ್ಲೇ ಉಳಿಗಾಲವಿಲ್ಲ. ರಾಜ್ಯದಲ್ಲಿಯೂ ಇರೋದಿಲ್ಲ. ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ನೆಲಕಚ್ಚುತ್ತಿದೆ. ಕರಪ್ಷನ್ ಎಂದರೆ ಅದು ಕಾಂಗ್ರೆಸ್ ಎಂದ ಅವರು, ಹೆಂಡ ಮತ್ತು ಹಣ ಮೊದಲು ಹಂಚಿದವರೇ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ಸರ್ಕಾರ ಇದ್ದ ವೇಳೆ ಹಲವಾರು ಹಗರಣಗಳು ಬಯಲಿಗೆ ಬಂದವು. ಮೋದಿ ಸರ್ಕಾರದಲ್ಲಿ ಯಾವುದೂ ಹಗರಣಗಳು ಇಲ್ಲ. ಶುದ್ಧ ಆಡಳಿತವನ್ನು ಮೋದಿ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್​ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಹಗರಣದ ಆರೋಪಗಳಿವೆ. ಹೀಗಾಗಿ ಇವತ್ತಿಗೂ ಅವರು ಬೇಲ್ ಮೇಲೆ ಹೊರಗಿದ್ದಾರೆ ಎಂದು ಆರ್​ ಅಶೋಕ್​ ಟೀಕಾ ಪ್ರಹಾರ ನಡೆಸಿದರು.

ಪೈಟರ್ ರವಿ ಸ್ವಾಗತಿಸಿದ್ದು ಪರಿಶೀಲನೆ:ಇನ್ನೂ ಮಂಡ್ಯದ ಮೋದಿ ಅವರ ಕಾರ್ಯಕ್ರಮದಲ್ಲಿ ಪೈಟರ್ ರವಿ ಸ್ವಾಗತ ಕೋರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸ್ವಾಗತ ಪಟ್ಟಿಯಲ್ಲಿ ಹೇಗೆ ಬಂದ ಎಂದು ವಿಚಾರಣೆ ಮಾಡಲಾಗುತ್ತಿದೆ. ಕಮಿಟಿ ಉಸ್ತುವಾರಿ ಶೋಭಾ ಕರಂದ್ಲಾಜೆ ಅವರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಯಾರು ಅವರ ಹೆಸರನ್ನು ಸೇರಿಸಿದ್ದಾರೋ, ಅವರ ವಿರುದ್ಧ ಪಾರ್ಟಿ ಶಿಸ್ತಿನ ಕ್ರಮ ತೆಗೆದುಕೊಳ್ಳೂತ್ತದೆ ಎಂದು ತಿಳಿಸಿದರು.

ಇನ್ನು ಈ ರಾಜ್ಯದಲ್ಲಿ ಗೂಂಡಾ ಗಿರಿ ಪಾರ್ಟಿ ಅಂದರೆ ಅದು ಕಾಂಗ್ರೆಸ್ ಪಾರ್ಟಿ. ಗೂಂಡಾ ಸಂಸ್ಕೃತಿ ದೇವರಾಜ್ ಅರಸು ಅವರ ಕಾಲದಿಂದಲೂ ಇದೆ. ಬಿಜೆಪಿ ಸರ್ಕಾರ ಬಂದ ಬಳಿಕ ಗಲಭೆಯೂ ಇಲ್ಲ. ಬಿಜೆಪಿ ಪಕ್ಷದಲ್ಲಿ ಗೂಂಡಾಗಿರಿ ಎಂಬ ಸಂಸ್ಕೃತಿಯೂ ಇಲ್ಲ ಎಂದು ಕಂದಾಯ ಸಚಿವರು ಹೇಳಿದರು.

ಸೋಮಣ್ಣ ಬಿಜೆಪಿ ಬಿಡುವುದಿಲ್ಲ: ಇನ್ನೂ ಸಚಿವ ಸೋಮಣ್ಣ ಪಕ್ಷ ಬಿಡುವ ವಿಚಾರದ ಕುರಿತು ಮಾತನಾಡಿದ ಅವರು, ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಬಿಜೆಪಿಯಲ್ಲಿ ಇರ್ತಾರೆ. ಮಗನ ಟಿಕೆಟ್ ವಿಚಾರ ಮಾತನಾಡಿದ್ದಾರೆ. ಆದರೆ ಪಾರ್ಟಿ ಬಿಡುವ ವಿಚಾರ ಮಾತನಾಡಿಲ್ಲ.ಸೋಮಣ್ಣ ಅವರ ಕೆಲವು ಡಿಮ್ಯಾಂಡ್ ಇವೆ, ಅದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ:ನಾನು ಎಲ್ಲಿಗೂ ಹೋಗುವುದಿಲ್ಲ, ಬಿಜೆಪಿಯಲ್ಲೇ ಇರುತ್ತೇನೆ : ಸಚಿವ ವಿ ಸೋಮಣ್ಣ ಸ್ಪಷ್ಟನೆ

Last Updated : Mar 14, 2023, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.