ETV Bharat / state

ಮಳೆಯಾಗಿ ಭೂ ಕುಸಿತ ಆದಾಗ ಮೋದಿ, ಅಮಿತ್​​ ಶಾ ಬರಲಿಲ್ಲ: ಬಿಕೆ ಹರಿಪ್ರಸಾದ್ ಟೀಕೆ

author img

By

Published : May 2, 2023, 11:05 PM IST

modi-amit-shah-did-not-come-when-there-was-landslide-bk-hariprasad-criticism
ಮಳೆಯಾಗಿ ಭೂ ಕುಸಿತ ಆದಾಗ ಮೋದಿ, ಅಮಿತ್​​ ಶಾ ಬರಲಿಲ್ಲ: ಬಿಕೆ ಹರಿಪ್ರಸಾದ್ ಟೀಕೆ

ವಿಧಾನ ಪರಿಷತ್​​ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್​ ಇಂದು ಕೊಡಗಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಬಿಕೆ ಹರಿಪ್ರಸಾದ್

ಕೊಡಗು: ಕೊಡಗಿನಲ್ಲಿ ಮಳೆಯಾಗಿ ಭೂ ಕುಸಿತ ಉಂಟಾದಾಗ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜಿಲ್ಲೆಗೆ ಬರಬೇಕಿತ್ತು ಆದರೆ ಬರಲ್ಲಿಲ್ಲ. ಅವರ ಮನ್​ ಕೀ ಬಾತ್​ನಲ್ಲಿ ಸಾಂತ್ವನವನ್ನು ಹೇಳಲಿಲ್ಲ. ಉತ್ತರ ಕರ್ನಾಟಕದಲ್ಲಿ ಮಳೆಯಿಂದಾಗಿ ತೀವ್ರ ನಷ್ಟವಾದರೂ ಸಹಿತ ಆಗಲೂ ಪ್ರಧಾನಿಗಳು ರಾಜ್ಯಕ್ಕೆ ಬಂದಿರಲಿಲ್ಲ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ವಿಧಾನ ಪರಿಷತ್​​​ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್​ ಹೇಳಿದರು.

ಕಳೆದ 4 ವರ್ಷದ ಬಿಜೆಪಿ ಸರ್ಕಾರ ಜನರ ಆಯ್ಕೆ ಅಲ್ಲ, ಅದು ಶಾಸಕರನ್ನ ಕಳ್ಳತನ, ಖರೀದಿ ಮಾಡಿ ರಚನೆ ಮಾಡಿದ ಸರ್ಕಾರ. ಬಿಜೆಪಿ ಕೊಟ್ಟ ಭರವಸೆ ಈಡೇರಿಸಿಲ್ಲ, ನಮ್ಮ ಉಚಿತ ಕೊಡುಗೆಯನ್ನ ಬಿಜಪಿಯವರು ತುಂಬಾ ಟೀಕಿಸಿದ್ದರು. ಆದರೆ ಈಗ ಅವರ ಪ್ರಣಾಳಿಕೆಯಲ್ಲಿ ಇರೋದು ಕೂಡ ಉಚಿತ, ನಂದಿನಿ ಹಾಲನ್ನು ಉಚಿತವಾಗಿ ಕೊಡುತ್ತೀವಿ ಎಂದು ಹೇಳುತ್ತಾರೆ. ಆದರೆ ಇವರು ಮಕ್ಕಳು ತಿನ್ನುವ ಮೊಟ್ಟೆಯನ್ನು ಕದ್ದವರು ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿರುವ ರಾಜ್ಯ, ಉತ್ತರ ಪ್ರದೇಶ ರಾಜ್ಯಕ್ಕೆ ಹೋಲಿಸಿದಾಗ ನಾವು 200 ವರ್ಷ ಮುಂದೆ ಇದ್ದೇವೆ. ಗುಜರಾತ್​​ಗೆ ಹೋಲಿಕೆ ಮಾಡಿದಾಗ 50 ವರ್ಷ ಮುಂದೆ ಇದ್ದೇವೆ. ನಮಗೆ ಗುಜರಾತ್, ಯುಪಿ ಮಾಡೆಲ್ ಬೇಕಾಗಿಲ್ಲ, ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿರುವಂತಹ ರಾಜ್ಯ. ಕಾಂಗ್ರೆಸ್​​ನ ಗ್ಯಾರಂಟಿ ಕಾರ್ಡ್ ವಾಸ್ತವದಲ್ಲಿ ಸಾಧ್ಯ ಇದೆ. ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್​​​ ಕಮಿಷನ್‌ನಲ್ಲಿ ನಾವು ಹೇಳಿರುವ ಗ್ಯಾರಂಟಿಗಳನ್ನು ನೀಡುತ್ತೇವೆ. ಬಿಜೆಪಿ ಕಮಿಷನ್ ಪಡೆಯುತ್ತಿದ್ದುದ್ದನ್ನ ಜನರಿಗೆ ಕೊಡುತ್ತೇವೆ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ತಾಲೂಕು ಮಟ್ಟದಲ್ಲೂ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಮಾಡಾಳು ವಿರೂಪಾಕ್ಷಪ್ಪ ಬಿಜೆಪಿ ಪಕ್ಷದ ಭ್ರಷ್ಟಾಚಾರದ ಮಾಡೆಲ್​​ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. ಬಜರಂಗದಳ, ಪಿಎಫ್​ಐ ನಿಷೇಧದ ಬಗ್ಗೆ ಮಾತನಾಡಿ, ಭಯೋತ್ಪದಾನೆಗೆ ಯಾರು ಉತ್ತೇಜನ ಕೊಡುತ್ತಾರೋ ಅವರನ್ನು ಬ್ಯಾನ್​ ಮಾಡಬೇಕು. ಅದು ಬಜರಂಗದಳ, ಪಿಎಫ್​ಐ ಯಾರೇ ಇದ್ದರೂ ನಿಷೇಧಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಹೆಚ್​ ವೈ ಮೇಟಿ ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸಿ.. ಆಪ್ತನ ಪರ ಸಿದ್ದರಾಮಯ್ಯ ಪ್ರಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.