ETV Bharat / state

ಕಲಬುರಗಿ ಜಿಲ್ಲೆಯಲ್ಲಿ ವರುಣನ ಆರ್ಭಟ: ಹಳ್ಳದಲ್ಲಿ ಸಿಲುಕಿ ಪರದಾಡಿದ ಕುರಿಗಾಹಿಗಳು

author img

By

Published : Jul 13, 2021, 5:26 PM IST

Heavy rain in Kalaburagi district
ಹಳ್ಳದಲ್ಲಿ ಸಿಲುಕಿ ಪರದಾಡಿದ ಕುರಿಗಾಹಿಗಳು

ಬೆಳಗ್ಗೆ ಕುರಿ ಮೇಯಿಸಲು ಹೋಗುವಾಗ ಇಲ್ಲದ ಹಳ್ಳ, ವಾಪಸ್ ಬರುವಾಗ ತುಂಬಿ ಹರಿಯುತ್ತಿದ್ದ ಪರಿಣಾಮ ಕುರಿಗಳ ಸಮೇತ ಕುರಿಗಾಹಿಗಳು ಸಿಲುಕಿ ಪರದಾಡಿದ್ದಾರೆ.

ಕಲಬುರಗಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಜನ‌ಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುರಿ ಮೇಯಿಸಲು ತೆರಳಿದಾಗ ಏಕಾಏಕಿ ಹಳ್ಳ ಬಂದು ಕುರಿಗಾಹಿಗಳು ಜೀವ ಉಳಿಸಿಕೊಳ್ಳಲು ಪರದಾಡಿದಂತಹ ಘಟನೆ ಚಿಂಚೋಳಿ ತಾಲೂಕಿನ ಧರ್ಮಸಾಗರ ತಾಂಡಾದಲ್ಲಿ ನಡೆದಿದೆ.

ಹಳ್ಳದಲ್ಲಿ ಸಿಲುಕಿ ಪರದಾಡಿದ ಕುರಿಗಾಹಿಗಳು

ತಾಂಡಾದ ಸುತ್ತಮುತ್ತಲಿನ ಹಳ್ಳ ಕೆರೆಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿವೆ. ಬೆಳಗ್ಗೆ ಕುರಿ ಮೇಯಿಸಲು ಹೋಗುವಾಗ ಇಲ್ಲದ ಹಳ್ಳ, ವಾಪಸ್ ಬರುವಾಗ ತುಂಬಿ ಹರಿಯುತ್ತಿದ್ದ ಪರಿಣಾಮ ಕುರಿಗಳ ಸಮೇತ ಕುರಿಗಾಹಿಗಳು ಸಿಲುಕಿ ಪರದಾಡಿದ್ದಾರೆ.

ಇಬ್ಬರು ಕುರಿಗಾಹಿಗಳು ಹಳ್ಳದಾಟಲಾಗದೇ ನೆರವಿಗಾಗಿ ಪರಿತಪಿಸಿದ್ದಾರೆ. ನಂತರ ತಾಂಡಾದ ಜನರು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಇಬ್ಬರನ್ನು ಹಳ್ಳ ದಾಟಿಸುವಲ್ಲಿ ಸಹಾಯ ಮಾಡಿದ್ದಾರೆ. ಸ್ಥಳೀಯ ಯುವಕರ ಸಹಾಯದಿಂದ ಮೇಕೆಗಳ ಸಮೇತ ಕುರಿಗಾಹಿ ಯಲ್ಲಪ್ಪ ಹಾಗೂ ಇನ್ನೋರ್ವ ಸುರಕ್ಷಿತವಾಗಿ ತಾಂಡಾಕ್ಕೆ ಮರಳಿದ್ದಾರೆ.

ಇದನ್ನೂ ಓದಿ : ಪಕ್ಕದ ಮನೆಗೆ ಕನ್ನ ಹಾಕಿದ್ದ ಖದೀಮನ ಬಂಧಿಸಿದ ಪಣಂಬೂರು ಪೊಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.