ETV Bharat / state

ಚಿಂಚೋಳಿ ತಾಲೂಕಿನಲ್ಲಿ ಮತ್ತೆ ಕೇಳಿ ಬಂತು ಭಾರಿ ಶಬ್ದ.. ಆತಂಕಕ್ಕೆ ಸಿಲುಕಿದ ಜನ

author img

By

Published : Oct 28, 2021, 8:26 PM IST

chincholi
ಚಿಂಚೋಳಿ

ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಲಘು ಭೂಕಂಪನ ಉಂಟಾಗುತ್ತಿದೆ. ಗ್ರಾಮಕ್ಕೆ ಭೂ ವಿಜ್ಞಾನಿಗಳು ಭೇಟಿ ನೀಡಿ ಸೀಸ್ಮೋಮೀಟರ್ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಹೊಸಳ್ಳಿ ಹೆಚ್. ಗ್ರಾಮದಲ್ಲಿ ಮತ್ತೆ ಭೂಮಿಯಿಂದ ಬಾರಿ ಸದ್ದೊಂದು ಕೇಳಿ ಬಂದಿದೆ. ಪರಿಣಾಮ ಅಲ್ಲಿನ ಜನ ಮತ್ತೆ ಆತಂಕಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಗ್ರಾಮಗಳಲ್ಲಿ ಮುಂಜಾನೆ 9.50ರ ಸಮಯದಲ್ಲಿ ಬಂದ ಬಾರಿ ಸದ್ದಿಗೆ ಜನ ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಲಘು ಭೂಕಂಪನದಿಂದ ಜನ ಕಂಗಾಲಾಗಿದ್ದರು.

ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಲಘು ಭೂಕಂಪನ ಉಂಟಾಗುತ್ತಿದೆ. ಗ್ರಾಮಕ್ಕೆ ಭೂ ವಿಜ್ಞಾನಿಗಳು ಭೇಟಿ ನೀಡಿ ಸೀಸ್ಮೋಮೀಟರ್ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಾರದ ಹಿಂದೆ ಕಂದಾಯ ಸಚಿವ ಆರ್. ಅಶೋಕ್ ಕೂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ವೆಗೆ ಆದೇಶಿಸಿದ್ದರು.

ಒಂದು ವಾರದಿಂದ ಭೂಕಂಪ ಮತ್ತು ಭೂಮಿಯಿಂದ ಸದ್ದು ಕಡಿಮೆಯಾಗಿತ್ತು. ಸೀಸ್ಮೋಮೀಟರ್ ಅಳವಡಿಕೆಯಿಂದ ಭೂಕಂಪದ ಭಯ ಕಡಿಮೆಯಾಗಿದೆ ಎಂದು ನಿಟ್ಟುಸಿರು ಬಿಟ್ಟ ಗ್ರಾಮಸ್ಥರಿಗೆ ಇಂದು ಮತ್ತೆ ಕೇಳಿಬಂದ ಸದ್ದು ಆತಂಕಕ್ಕೆ ಕಾರಣವಾಗಿದೆ.

ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ: ಜೀವ ಬೆದರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.