ETV Bharat / state

ಪಿಎಸ್ಐ ನೇಮಕಾತಿ ಹಗರಣ ; ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ದಂಪತಿ ಕೊನೆಗೂ ಲಾಕ್​​!

author img

By

Published : May 30, 2022, 1:50 PM IST

Couple arrested over PSI requirement scam, Couple arrested in Kalaburagi, Kalaburagi crime news, PSI recruitment scam news, PSI requirement scam update, ಪಿಎಸ್‌ಐ ನೇಮಕ ಹಗರಣದಲ್ಲಿ ದಂಪತಿ ಬಂಧನ, ಕಲಬುರಗಿಯಲ್ಲಿ ದಂಪತಿ ಬಂಧನ, ಕಲಬುರಗಿ ಅಪರಾಧ ಸುದ್ದಿ, ಪಿಎಸ್‌ಐ ನೇಮಕಾತಿ ಹಗರಣ ಸುದ್ದಿ, ಪಿಎಸ್‌ಐ ನೇಮಕಾತಿ ಹಗರಣ ಅಪ್​ಡೇಟ್​,
ದಂಪತಿ ಕೊನೆಗೂ ಲಾಕ್​​

ಪಿಎಸ್ಐ ನೇಮಕಾತಿ ಹಗರಣದಲ್ಲಿ ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ದಂಪತಿಯನ್ನು ಸಿಐಡಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ..

ಕಲಬುರಗಿ : ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ಪಿಎಸ್ಐ ಅಕ್ರಮ ಪ್ರಕರಣದ ಆರೋಪಿಗಳಾದ ಶಾಂತಿಬಾಯಿ ಹಾಗೂ ಆಕೆಯ ಪತಿ ಬಸಯ್ಯ ನಾಯಕನನ್ನು ಕೊನೆಗೂ ಸಿಐಡಿ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ. ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಮತ್ತೆ ಚುರುಕುಗೊಳಿಸಿದ ಸಿಐಡಿ ತಂಡ, ಆರೋಪಿಗಳನ್ನು ಒಬ್ಬೊಬ್ಬರಾಗಿ ಬಲೆಗೆ ಕೆಡುವುತ್ತಿದ್ದಾರೆ.

Couple arrested over PSI requirement scam, Couple arrested in Kalaburagi, Kalaburagi crime news, PSI recruitment scam news, PSI requirement scam update, ಪಿಎಸ್‌ಐ ನೇಮಕ ಹಗರಣದಲ್ಲಿ ದಂಪತಿ ಬಂಧನ, ಕಲಬುರಗಿಯಲ್ಲಿ ದಂಪತಿ ಬಂಧನ, ಕಲಬುರಗಿ ಅಪರಾಧ ಸುದ್ದಿ, ಪಿಎಸ್‌ಐ ನೇಮಕಾತಿ ಹಗರಣ ಸುದ್ದಿ, ಪಿಎಸ್‌ಐ ನೇಮಕಾತಿ ಹಗರಣ ಅಪ್​ಡೇಟ್​,
ದಂಪತಿ ಕೊನೆಗೂ ಲಾಕ್​​

ಓದಿ: ಸಿದ್ದರಾಮಯ್ಯ ಮನೆಗೆ ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಭೇಟಿ.. ಪ್ರಾಮಾಣಿಕರ ರಕ್ಷಣೆಗೆ ಮನವಿ

ಲಂಚ ಕೊಟ್ಟು ಪರೀಕ್ಷೆ ಬರೆದು ಪಾಸಾಗಿದ್ದ ಅಭ್ಯರ್ಥಿ ಹಾಗೂ ಅಕ್ರಮಕ್ಕೆ ಸಹಕರಿಸಿದ ಆಕೆಯ ಪತಿ ಬಸಯ್ಯ ನಾಯಕನನ್ನು ತೆಲಂಗಾಣದ ಹೈದ್ರಾಬಾದ್​ನಲ್ಲಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಭ್ಯರ್ಥಿ ಶಾಂತಿಬಾಯಿ ಪ್ರಕಣದ ಕಿಂಗ್​ಪಿನ್​ಗಳಾದ ಮಂಜುನಾಥ ಮೇಳಕುಂದಿಗೆ ಹಣ ನೀಡಿ ಪರೀಕ್ಷೆ ಬರೆದಿದ್ದಳು.

ಪ್ರಕರಣ ಹೊರಬೀಳುತ್ತಿದ್ದಂತೆ ಹೈದ್ರಾಬಾದ್​ನಲ್ಲಿ ತೆಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಕಳೆದ ಎರಡು ತಿಂಗಳಿನಿಂದ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದರು. ಕೊನೆಗೂ ದಂಪತಿ ಹೈದರಾಬಾದ್​ನಲ್ಲಿ ಸೆರೆ ಸಿಕ್ಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.