ETV Bharat / state

ಕಲಬುರಗಿಯಲ್ಲಿ 3.4ರಷ್ಟು ತೀವ್ರತೆಯ ಲಘು ಭೂಕಂಪನ

author img

By

Published : Oct 10, 2021, 8:39 AM IST

An earthquake of 3.4 magnitude occurred in Kalaburagi
ಕಲಬುರಗಿಯಲ್ಲಿ ಲಘು ಭೂಕಂಪ: 3.4ರಷ್ಟು ತೀವ್ರತೆ ದಾಖಲು

ಕೆಲವು ದಿನಗಳಿಂದ ಕಲಬುರಗಿಯ ಹಲವೆಡೆ ಭೂಮಿ ಕಂಪಿಸುತ್ತಿದೆ. ಇಂದು ಬೆಳಗ್ಗೆಯೂ ಕೂಡಾ ಲಘು ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ತಿಳಿಸಿದೆ.

ಕಲಬುರಗಿ: ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

  • Earthquake of Magnitude:3.4, Occurred on 10-10-2021, 06:05:25 IST, Lat: 16.97 & Long: 77.30, Depth: 10 Km ,Region: Gulbarga, Karnataka, India for more information download the BhooKamp App https://t.co/RQ553RRSeR pic.twitter.com/zksp6U8rbe

    — National Center for Seismology (@NCS_Earthquake) October 10, 2021 " class="align-text-top noRightClick twitterSection" data=" ">

ಕೆಲವು ದಿನಗಳ ಹಿಂದೆಯಷ್ಟೇ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ ಲಘು ಭೂಕಂಪನವಾಗಿತ್ತು. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ ನಿಗೂಢ ಸದ್ದು ಬರ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಹಿರಿಯ ನಟ ಸತ್ಯಜಿತ್ ವಿಧಿವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.