ETV Bharat / state

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ : ಕೆ.ಬಿ.ಕೋಳಿವಾಡ

author img

By

Published : Nov 10, 2019, 4:35 PM IST

ಉದ್ಯೋಗ ‌ಮೇಳ ಕಾರ್ಯಕ್ರಮ

ಸತತವಾಗಿ ಐದನೇ ಬಾರಿ ಉದ್ಯೋಗ ಮೇಳ ಮಾಡುತ್ತಿರುವ ಪಿಕೆಕೆ ಇನಿಷಿಯೇಟಿವ್ ಈದುವರೆಗೆ ಸುಮಾರು 4500 ಜನರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಒದಗಿಸಿದೆ.

ರಾಣೆಬೆನ್ನೂರು: ದೇಶದಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದ್ದು, ಬಹಳಷ್ಟು ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್​ ಕೆ.ಬಿ. ಕೋಳಿವಾಡ ಆತಂಕ ವ್ಯಕ್ತಪಡಿಸಿದರು.

ಪಿಕೆಕೆ ಇನಿಷಿಯೇಟಿವ್ ಹಾಗೂ ಎಲ್​ಸಿಸಿ ಧಾರವಾಡ ಇವರ ವತಿಯಿಂದ ನಡೆದ ಉದ್ಯೋಗ ‌ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಸದ್ಯ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಮುಚ್ಚುತ್ತಿದ್ದು, ಅಲ್ಲಿರುವ ನೌಕರರು ಬೀದಿಗೆ ಬಂದಿದ್ದಾರೆ. ಅಂತಹ ಒಂದು ದೊಡ್ಡ ಸಮಸ್ಯೆಯಲ್ಲಿ ಪಿಕೆಕೆ ಇನಿಷಿಯೇಟಿವ್ ವತಿಯಿಂದ ಹಲವು ಕಂಪನಿಗಳನ್ನು ನಗರಕ್ಕೆ ಕರೆದುಕೊಂಡು ಬಂದು ಉದ್ಯೋಗ ಮೇಳ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಉದ್ಯೋಗ ‌ಮೇಳ ಕಾರ್ಯಕ್ರಮ

ಸತತವಾಗಿ ಐದನೇ ಬಾರಿ ಉದ್ಯೋಗ ಮೇಳ ಮಾಡುತ್ತಿರುವ ಪಿಕೆಕೆ ಕಂಪನಿ ಈದುವರೆಗೆ ಸುಮಾರು 4500 ಜನರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಒದಗಿಸಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಇನ್ಫೋಸಿಸ್, ಒಮೆಗಾ, ಗ್ರೇಟ್‌ ಟೆಕ್ನಾಲಜಿ, ಹೆಚ್​ಜಿಎಸ್, ಡಿಜಿಕಾಲ್, ಓಲಾ, ಏರ್​ಟೆಕ್ ಸೇರಿದಂತೆ ವಿವಿಧ ಕಂಪನಿಗಳು ಭಾಗಿಯಾಗಿದ್ದವು.

Intro:KN_RNR_02_UDYOGAMELA-KAC10001

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ.

ರಾಣೆಬೆನ್ನೂರ..
ದೇಶದಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದ್ದು, ಬಹಳಷ್ಟು ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

Body:ನಗರದಲ್ಲಿ ಪಿಕೆಕೆ ಇನ್ಸಿಯೆಟಿವ್ ಹಾಗೂ ಎಲ್ಸಿಸಿ ಧಾರವಾಡ ಇವರ ವತಿಯಿಂದ ನಡೆದ ಉದ್ಯೋಗ ‌ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಸದ್ಯ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಮುಚ್ಚುತ್ತಿದ್ದು, ಅಲ್ಲಿರುವ ನೌಕರರು ಬೀದಿಗೆ ಬಂದಿದ್ದಾರೆ. ಅಂತಹ ಒಂದು ದೊಡ್ಡ ಸಮಸ್ಯೆಯಲ್ಲಿ ಪಿಕೆಕೆ ಇನ್ಸಿಯೆಟಿವ್ ವತಿಯಿಂದ ಹಲವು ಕಂಪನಿಗಳು ನಗರಕ್ಕೆ ಕರೆದುಕೊಂಡು ಬಂದು ಉದ್ಯೋಗ ಮೇಳ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

Conclusion:ಸತತವಾಗಿ ಐದನೇ ಬಾರಿ ಉದ್ಯೋಗ ಮೇಳ ಮಾಡಿರುವ ಪಿಕೆಕೆ ಇನ್ಸಿಯೆಟಿವ್ ಸುಮಾರು 4500 ಜನರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಒದಗಿಸಿದೆ. ಮುಂದಿನ ದಿನಗಳಲ್ಲಿ ರಾಣೆಬೆನ್ನೂರ ಸ್ಟಾರ್ಟ್ ಅಪ್ ಎಂಬ ಮೂಲಕ ರಾಣೆಬೆನ್ನೂರ ನಗರದಲ್ಲಿ ಉದ್ಯೋಗ ಒದಗಿಸುವ ಕಾರ್ಯಕ್ಕೆ ನಾವು ಮುಂದಾಗಬೇಕಾಗಿದ್ದು, ಅದನ್ನು ಮಾಡುವಂತೆ ಪಿಕೆಕೆ ಇನ್ಸಿಯೆಟಿವ್ ಮುಖಂಡರಿಗೆ ತಿಳಿಸಿದರು.

ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಇನ್ಫೋಸಿಸ್, ಒಮೆಗಾ, ಗ್ರೇಟ್‌ ಟೆಕ್ನಾಲಜಿ, ಹೆಚ್.ಜಿ.ಎಸ್, ಡಿಜಿಕಾಲ್, ಓಲಾ, ಏರಟೆಕ್ ಸೇರಿದಂತೆ ವಿವಿಧ ಕಂಪನಿಗಳು ಭಾಗಿಯಾಗಿದ್ದವು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಜಿಪಂ ಸದಸ್ಯ ಶಿವಾನಂದ ಕನ್ನಪ್ಪಳವರ ಮುಖಂಡರಾದ ಹನುಮಂತಪ್ಪ ಬ್ಯಾಲದಳ್ಳಿ, ವಸಂತ ಲಮಾಣಿ, ಪುಟ್ಟಪ್ಪ ಮರಿಯಮ್ಮನವರ ಸೇರಿದಂತೆ ಇತರರು ‌ಪಾಲ್ಗೊಂಡಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.