ETV Bharat / state

ರಾಣೆಬೆನ್ನೂರಿನಲ್ಲಿ ಮುಗಿಯದ ಹೆದ್ದಾರಿ ಸೇತುವೆ ಕಾಮಗಾರಿ; ಹೆಚ್ಚಿದ ರಸ್ತೆ ಅಪಘಾತ

author img

By

Published : Nov 15, 2022, 5:32 PM IST

Updated : Nov 15, 2022, 5:38 PM IST

Kn_hvr
ರಾಣಿಬೆನ್ನೂರಿನಲ್ಲಿ ಮುಗಿಯದ ಹೆದ್ದಾರಿ ಸೇತುವೆ ಕಾಮಗಾರಿ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಮತ್ತು ರಾಣೆಬೆನ್ನೂರು ತಾಲೂಕಿನ ಛತ್ರದ ಬಳಿ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ.

ಹಾವೇರಿ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, ಈ ರಾಷ್ಟ್ರೀಯ ಹೆದ್ದಾರಿ 48 ಬೆಂಗಳೂರಿನಿಂದ ಮುಂಬೈ ನಡುವೆ ಸಂಪರ್ಕ ಕಲ್ಪಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 48 ಕಳೆದ ಆರು ವರ್ಷಗಳ ಹಿಂದೆ ಚತುಷ್ಪಥದಿಂದ ಷಟ್ಪಥವಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಹಲವು ಗ್ರಾಮ ನಗರಗಳಿಗೆ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಅಲ್ಲದೇ ಪ್ರಮುಖ ಗ್ರಾಮಗಳಲ್ಲಿ ಸೇತುವೆ ನಿರ್ಮಿಸಿ ವಾಹನಗಳ ಸಂಚಾರ ಸುಗಮಗೊಳಿಸಲಾಗಿದೆ.

ಆದರೇ, ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಮತ್ತು ರಾಣೆಬೆನ್ನೂರು ತಾಲೂಕಿನ ಛತ್ರದ ಬಳಿ ಸೇತುವೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದರಿಂದಾಗಿ ರಸ್ತೆ ಅಕ್ಕಪಕ್ಕ ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ. ಈ ರೀತಿ ನಿರ್ಮಿಸಿರುವ ಸರ್ವಿಸ್ ರಸ್ತೆಗಳು ಈಗಾಗಲೇ ಹಲವಾರು ಜೀವಗಳನ್ನ ಬಲಿತಗೆದುಕೊಂಡಿದ್ದು, ಈ ಸರ್ವಿಸ್ ರಸ್ತೆಗಳಲ್ಲಿ ದ್ವಿಚಕ್ರವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ಮುಗಿಯದ ಹೆದ್ದಾರಿ ಸೇತುವೆ ಕಾಮಗಾರಿ ಹೆಚ್ಚಿದ ರಸ್ತೆ ಅಪಘಾತ

ಸರ್ವಿಸ್ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನಗಳು ತಗ್ಗು ಗುಂಡಿಗಳಲ್ಲಿ ಸಂಚರಿಸುತ್ತೀವೆ. ಮೋಟೆಬೆನ್ನೂರು ಬ್ಯಾಡಗಿ ಸೇರಿಸುವ ಪ್ರಮುಖ ರಸ್ತೆಯಾಗಿದ್ದು, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬರುವ ರೈತರು ಈ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ರೈತರ ಮನೆಗಳು ರಸ್ತೆ ಈ ಕಡೆ ಇದ್ದರೆ ಜಮೀನುಗಳು ರಸ್ತೆಯ ಇನ್ನೊಂದು ಬದಿಯಲ್ಲಿವೆ. ಜಾನುವಾರು ಚಕ್ಕಡಿಗಳಲ್ಲಿ ರೈತರು ಸಾಗುತ್ತಿದ್ದ ವೇಳೆ ಹಲವು ಅಪಘಾತಗಳಾಗಿವೆ.

ಹಾವೇರಿಯಿಂದ ಮೋಟೆಬೆನ್ನೂರು ಮೂಲಕ ಬೆಂಗಳೂರಿಗೆ ಹೋಗುವಾಗ ರಸ್ತೆ ತಿರುವು ಅಧಿಕ ಇರುವ ಕಾರಣ ವಾರದಲ್ಲಿ ಒಂದಾದರೂ ವಾಹನ ಇಲ್ಲಿ ಪಲ್ಟಿಯಾಗುತ್ತದೆ. ಬಾರಿ ಸರಕು ತುಂಬಿರುವ ವಾಹನಗಳು ಪಲ್ಟಿಯಾಗುವುದರಿಂದ ಟ್ರಾಫಿಕ್ ಸಮಸ್ಯೆ ಖಾಯಂ ಆಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಿ.ಮೀಗಟ್ಟಲೇ ವಾಹನಗಳು ನಿಲ್ಲುತ್ತವೆ.

ಇನ್ನು ರಸ್ತೆಗಳು ಹಾಳಾಗಿದ್ದು, ಸರಿಯಾದ ಸಮಯಕ್ಕೆ ಸರಿಯಾದ ಜಾಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹಾವೇರಿ ಜಿಲ್ಲೆಯ ಈ ಎರಡು ಸ್ಥಳಗಳಲ್ಲಿ ಮಾತ್ರ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಉಳಿದಂತೆ ರಸ್ತೆಗಳು ಪೂರ್ಣಗೊಂಡಿವೆ. ಕಳೆದ 6 ವರ್ಷಗಳಿಂದ ಈ ಸೇತುವೆಗಳ ನಿರ್ಮಾಣ ಅರ್ಧದಲ್ಲಿ ನಿಂತಿದ್ದು ವಾಹನ ಸವಾರರು ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕಬ್ಬು ತುಂಬಿದ ಟ್ರ್ಯಾಕ್ಟರ್​ ಹರಿದು ಗರ್ಭಿಣಿ ಸ್ಥಳದಲ್ಲೇ ಸಾವು: ತಾಯಿ ಹೊಟ್ಟೆಯಲ್ಲೇ ಪ್ರಾಣ ಕಳೆದುಕೊಂಡ ಶಿಶು

Last Updated :Nov 15, 2022, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.