ETV Bharat / bharat

ಕಬ್ಬು ತುಂಬಿದ ಟ್ರ್ಯಾಕ್ಟರ್​ ಹರಿದು ಗರ್ಭಿಣಿ ಸ್ಥಳದಲ್ಲೇ ಸಾವು: ತಾಯಿ ಹೊಟ್ಟೆಯಲ್ಲೇ ಪ್ರಾಣ ಕಳೆದುಕೊಂಡ ಶಿಶು

author img

By

Published : Nov 15, 2022, 4:48 PM IST

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗರ್ಭಿಣಿ ಸಾವನ್ನಪ್ಪಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಶಿಶು ಕೂಡ ಮೃತಪಟ್ಟಿದೆ.

pregnant-died-on-the-spot-after-a-tractor-wheel-ran-over-her-head
ಕಬ್ಬು ತುಂಬಿದ ಟ್ರ್ಯಾಕ್ಟರ್​ ಹರಿದು ಗರ್ಭಿಣಿ ಸ್ಥಳದಲ್ಲೇ ಸಾವು: ತಾಯಿ ಹೊಟ್ಟೆಯಲ್ಲೇ ಪ್ರಾಣ ಕಳೆದುಕೊಂಡ ಶಿಶು

ಪುಣೆ (ಮಹಾರಾಷ್ಟ್ರ): ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಟ್ರಾಲಿಯ ಚಕ್ರಕ್ಕೆ ಸಿಲುಕಿ ಗರ್ಭಿಣಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಿಂದ ಮಹಿಳೆಯ ಹೊಟ್ಟೆಯಲ್ಲಿ ಶಿಶು ಕೂಡ ಹುಟ್ಟುವ ಮೊದಲೇ ಪ್ರಾಣ ಕಳೆದುಕೊಂಡಿದೆ.

ಜುನ್ನಾರ್ ತಾಲೂಕಿನ ನಿಮ್ದಾರಿ ನಿವಾಸಿ ವಿದ್ಯಾ ಕಂಸ್ಕರ್ (22) ಎಂಬುವವರೇ ಮೃತರು. ತುಂಬು ಗರ್ಭಿಣಿಯಾಗಿದ್ದ ವಿದ್ಯಾ ಕಾರಿನಲ್ಲಿ ಪತಿ ರಮೇಶ್ ಮತ್ತು ತಾಯಿಯೊಂದಿಗೆ ತಪಾಸಣೆಗಾಗಿ ನಾರಾಯಣಗಾಂವ್​ಗೆ ತೆರಳಿದ್ದರು. ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದಾಗ ವಾರುಲ್ವಾಡಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಕಾರಿನಿಂದ ಕೆಳಗಿಳಿದಿದ್ದರು. ಒಂದೇ ಇಂಜಿನ್​ಗೆ ಎರಡು ಟ್ರಾಲಿಗಳು ಜೋಡಿಸಿದ್ದ ಟ್ರ್ಯಾಕ್ಟರ್​ ವಿದ್ಯಾಗೆ ಡಿಕ್ಕಿ ಹೊಡೆದಿದೆ.

ಇದರಿಂದ ರಸ್ತೆಗೆ ಬಿದ್ದ ವಿದ್ಯಾರ ತಲೆ ಮೇಲೆ ಟ್ರಾಲಿಯ ಚಕ್ರ ಹರಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಂತರ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ, ಪತಿ ರಮೇಶ್ ಕಂಸ್ಕರ್ ನೀಡಿದ ದೂರಿನ ಮೇರೆಗೆ ಟ್ರ್ಯಾಕ್ಟರ್​ ಚಾಲಕ ಗೋರಕ್ಷ್ ಸುಖದೇವ್ ಧೆಬರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಮಚ್ಚಿನಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.