ETV Bharat / state

ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ.. ಡಿಜೆ ಬಂದ್​ ಮಾಡಿ ಮುಸ್ಲಿಂ ವ್ಯಕ್ತಿಯ ಶವಯಾತ್ರೆಗೆ ಗೌರವ

author img

By

Published : Sep 4, 2022, 11:03 PM IST

haveri-communal-harmony-at-ganesh-procession
ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ.. ಡಿಜೆ ಬಂದ್​ ಮಾಡಿ ಮೃತ ಮುಸ್ಲಿಂ ವ್ಯಕ್ತಿಗೆ ಗೌರವ ಸಮರ್ಪಣೆ

ಗಣೇಶ ಮೂರ್ತಿ ನಿಮಜ್ಜನ ವೇಳೆ ಬಂದ ಮುಸ್ಲಿಂ ವ್ಯಕ್ತಿಯ ಪಾರ್ಥಿವ ಶರೀರದ ಮೆರವಣಿಗಿಗೆ ಗೌರವ ಸೂಚಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಲ್ಲಿ ನಡೆದಿದೆ.

ಹಾವೇರಿ: ಗಣೇಶ ಮೂರ್ತಿ ನಿಮಜ್ಜನ ವೇಳೆ ಬಂದ ಮುಸ್ಲಿಂ ವ್ಯಕ್ತಿಯ ಪಾರ್ಥಿವ ಶರೀರದ ಮೆರವಣಿಗೆಗೆ ಗೌರವ ಸೂಚಿಸಿದ ಘಟನೆ ಜಿಲ್ಲೆಯ ರಾಣೆಬೆನ್ನೂರಲ್ಲಿ ನಡೆದಿದೆ.

ಮುಸ್ಲಿಂ ವ್ಯಕ್ತಿಯ ಪಾರ್ಥಿವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡುವ ಮೂಲಕ ಗಜಾನನ ಯುವಕ ಮಂಡಳಿಯವರು ಗೌರವ ಸೂಚಿಸಿದ್ದಾರೆ. ಈ ವಿಶೇಷ ಘಟನೆಗೆ ಯುವಕ ಮಂಡಳಿಯು ಸಾಕ್ಷಿಯಾಗಿದ್ದಲ್ಲದೆ ಸೌಹಾರ್ದತೆಯನ್ನು ಮೆರೆದರು. ಉಮಾಶಂಕರ‌ ನಗರದಲ್ಲಿ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ನಿಮಜ್ಜನ ವೇಳೆ ಈ ಘಟನೆ ನಡೆದಿದೆ.

ಗಣೇಶ ವಿಸರ್ಜನೆಯ ಮೆರವಣಿಗೆ ಎಂ.ಜಿ ರಸ್ತೆಗೆ ಬಂದಾಗ ಅದೇ ಮಾರ್ಗದಲ್ಲಿ ಮುಸ್ಲಿಂ ವ್ಯಕ್ತಿಯ ಶವಯಾತ್ರೆ ಬಂದಿದೆ. ಮುಸ್ಲಿಂ ವ್ಯಕ್ತಿಯ ಶವಯಾತ್ರೆ ದಾಟಿ ಹೋಗೋವರೆಗೂ ಡಿಜೆ ಬಂದ್ ಮಾಡಿದ ಯುವಕ ಮಂಡಳಿಯ ಸದಸ್ಯರು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ್ದಾರೆ.

ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ.. ಡಿಜೆ ಬಂದ್​ ಮಾಡಿ ಮೃತ ಮುಸ್ಲಿಂ ವ್ಯಕ್ತಿಗೆ ಗೌರವ ಸಮರ್ಪಣೆ

ಮುಸ್ಲಿಂ ವ್ಯಕ್ತಿಯ ಪಾರ್ಥಿವ ಶರೀರದ ಮೆರವಣಿಗೆ ಹೋದ ನಂತರ ಮತ್ತೆ ಗಣೇಶ ನಿಮಜ್ಜನ ಮೆರವಣಿಗೆ ಮುಂದುವರಿಸಲಾಯಿತು. ಅಲ್ಲದೆ, ಮೆರವಣಿಗೆ ಮೂಲಕ ಗಣೇಶ ಮೂರ್ತಿ ನಿಮಜ್ಜನೆ ನೆರವೇರಿಸಲು ಮೆರವಣಿಗೆಯಲ್ಲಿ ಒಯ್ಯಲಾಯಿತು.

ಇದನ್ನೂ ಓದಿ : ಬಿಎಂಟಿಸಿ ಚಾಲಕ ಆತ್ಮಹತ್ಯೆ ಕೇಸ್​.. ಡಿಪೋ ಮ್ಯಾನೇಜರ್ ಸಸ್ಪೆಂಡ್: ಆಪ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.