ETV Bharat / state

ತಾಂತ್ರಿಕ ತೊಡಕು: ಬೆಳೆ ಹಾನಿ ಪರಿಹಾರ ಸಿಗದೇ ಆತಂಕದಲ್ಲಿ ರೈತರು

author img

By

Published : Oct 8, 2022, 9:10 AM IST

Updated : Oct 8, 2022, 2:17 PM IST

farmers
ಬೆಳೆ ಹಾನಿ ಪರಿಹಾರ ಸಿಗದೇ ಆತಂಕದಲ್ಲಿ ರೈತರು

ರಾಣೆಬೆನ್ನೂರಿನ ಮೂರುವರೆ ಸಾವಿರಕ್ಕೂ ಅಧಿಕ ರೈತರ ಹೆಸರು ಹೊಂದಾಣಿಕೆ ಆಗುತ್ತಿಲ್ಲ ಎಂದು ಬೆಳೆ ಹಾನಿ ಪರಿಹಾರ ತಡೆ ಹಿಡಿಯಲಾಗಿದೆ. ಈ ಹಿನ್ನೆಲೆ ರೈತರು ತಹಶೀಲ್ದಾರ್ ಕಚೇರಿ ಸೇರಿದಂತೆ ಬ್ಯಾಂಕ್‌ಗಳಿಗೆ ಅಲೆಯುತ್ತಿದ್ದಾರೆ.

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೂರುವರೆ ಸಾವಿರಕ್ಕೂ ಅಧಿಕ ರೈತರು ಆತಂಕದಲ್ಲಿದ್ದಾರೆ. ಇವರ ಆತಂಕಕ್ಕೆ ಕಾರಣ ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ಹಾನಿ ಪರಿಹಾರ ಸಿಗದಿರುವುದು.

ಹೌದು, ರಾಣೆಬೆನ್ನೂರು ತಾಲೂಕಿನ ಮೂರುವರೆ ಸಾವಿರಕ್ಕೂ ಅಧಿಕ ರೈತರ ಹೆಸರು ಹೊಂದಾಣಿಕೆ ಆಗುತ್ತಿಲ್ಲ ಎಂದು ಪರಿಹಾರ ತಡೆ ಹಿಡಿಯಲಾಗಿದೆ. ಈ ಹಿನ್ನೆಲೆ ರೈತರು ತಹಶೀಲ್ದಾರ್ ಕಚೇರಿ ಸೇರಿದಂತೆ ಬ್ಯಾಂಕ್‌ಗಳಿಗೆ ಅಲೆಯುತ್ತಿದ್ದಾರೆ. ಆದರೂ ಸಹ ಸರ್ಕಾರದ ಪರಿಹಾರ ಸಿಗುತ್ತಿಲ್ಲ. ಅಧಿಕಾರಿಗಳು ನಿಮ್ಮ ಹೆಸರು ಮ್ಯಾಚ್ ಆಗುತ್ತಿಲ್ಲ ಅಂತಿದ್ದಾರೆ ಅಂತಾ ರೈತರು ಅಸಮಾಧಾನ ಹೊರಹಾಕಿದ್ದಾರೆ.

ಬೆಳೆ ಹಾನಿ ಪರಿಹಾರ ಸಿಗದೇ ಆತಂಕದಲ್ಲಿ ರೈತರು

ಇದನ್ನೂ ಓದಿ: ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡ ರೈತರಿಗೆ ಒಂದೇ ತಿಂಗಳಲ್ಲಿ ಪರಿಹಾರ : ಸಚಿವ ಅಶೋಕ್

ಹನುಮಂತಪ್ಪ ಕಬ್ಬಾರ್ ಇರುವುದು ಕಬ್ಬಾರ್ ಹನುಮಂತಪ್ಪ ಎಂದಾಗಿದ್ದು, ಹೆಸರು ಲಾಗಿನ್ ಆಗುತ್ತಿಲ್ಲಾ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ವಿಚಿತ್ರ ಅಂದ್ರೆ, ಇದೇ ದಾಖಲಾತಿಗಳ ಮೇಲೆ ಬ್ಯಾಂಕ್ ಸಾಲ ನೀಡುತ್ತದೆ. ಇದೇ ಹೆಸರಿಗೆ ಬೆಳೆವಿಮೆಯನ್ನು ಸಹ ಅಧಿಕಾರಿಗಳು ಮಾಡಿಸಿಕೊಂಡಿದ್ದಾರೆ. ಆದರೆ, ಪರಿಹಾರದ ಹಣ ನೀಡಲು ಮಾತ್ರ ಲಾಗಿನ್ ಆಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ ಅಂತ್ಯದೊಳಗೆ ಬೆಳೆ ವಿಮಾ ಹಣ ಪಾವತಿ: ಬಿ ಸಿ ಪಾಟೀಲ್

ಈಗಾಗಲೇ ಎರಡು ಬಾರಿ ಬಿತ್ತನೆ ಮಾಡಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದೇವೆ. ಸಾಲಸೂಲ ಮಾಡಿ ಬಿತ್ತನೆ ಮಾಡಿದ ಬೀಜಗಳು ನೆಲದಲ್ಲಿ ಹಾಳಾಗಿವೆ. ರಾಣೆಬೆನ್ನೂರು ಹೊರತುಪಡಿಸಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೆಸರು ಮ್ಯಾಚ್ ಆಗದಿದ್ದರೂ ಸಹ ಅಧಿಕಾರಿಗಳು ಪರಿಹಾರದ ಹಣವನ್ನು ರೈತರಿಗೆ ವಿತರಿಸಿದ್ದಾರೆ. ಆದರೆ ನಮ್ಮ ತಾಲೂಕಿನಲ್ಲಿ ಮಾತ್ರ ಪರಿಹಾರದ ಹಣ ವಿತರಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

Last Updated :Oct 8, 2022, 2:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.