ETV Bharat / state

ದಾಖಲೆ ಬೆಲೆಗೆ ಮಾರಾಟವಾದ ಬ್ಯಾಡಗಿ ಮೆಣಸಿನಕಾಯಿ.. ಕ್ವಿಂಟಾಲ್​ಗೆ ಎಷ್ಟು ಗೊತ್ತಾ..?

author img

By

Published : Jan 1, 2021, 6:46 AM IST

Badagi Chili sold at record price
ದಾಖಲೆ ಬೆಲೆಗೆ ಮಾರಾಟವಾದ ಬ್ಯಾಡಗಿ ಮೆಣಸಿನಕಾಯಿ

ಜಿಲ್ಲೆ ಶಿಂಗ್ಗಾವಿ ತಾಲೂಕಿನ ಪಾಣಿಗಟ್ಟಿ ಗ್ರಾಮದ ರೈತ ಚೆನ್ನಪ್ಪಗೌಡ ಬ್ಯಾಳಿಗೌಡ್ರ ಬೆಳೆದ ಆರು ಚೀಲ (ಎರಡು ಕ್ವಿಂಟಾಲ್) ಮೆಣಸಿನಕಾಯಿ ಕಾಯಿಗೆ ಬಂಪರ್​ ಬೆಲೆ ದೊರೆತಿದೆ.

ಹಾವೇರಿ: ಬ್ಯಾಡಗಿ ಅಂದರೆ ಸಾಕು ತಕ್ಷಣ ನೆನಪಾಗುವುದು ಮೆಣಸಿನಕಾಯಿ. ಹಾವೇರಿ ಜಿಲ್ಲೆ ಬ್ಯಾಡಗಿ ವಿಶ್ವ ಪ್ರಸಿದ್ಧವಾಗಿರುವುದು ಮೆಣಸಿನಕಾಯಿ ಮಾರುಕಟ್ಟೆಯಿಂದ. ಮೆಣಸಿನಕಾಯಿ ಮಾರುಕಟ್ಟೆ ಇದೀಗ ಅತ್ಯಧಿಕ ದರ ನೀಡುವ ಮೂಲಕ ಸುದ್ದಿಯಲ್ಲಿದೆ.

ಜಿಲ್ಲೆ ಶಿಂಗ್ಗಾವಿ ತಾಲೂಕಿನ ಪಾಣಿಗಟ್ಟಿ ಗ್ರಾಮದ ರೈತ ಚೆನ್ನಪ್ಪಗೌಡ ಬ್ಯಾಳಿಗೌಡ್ರ ಬೆಳೆದ ಆರು ಚೀಲ (ಎರಡು ಕ್ವಿಂಟಾಲ್) ಮೆಣಸಿನಕಾಯಿ ಕಾಯಿಗೆ ಬಂಪರ್​ ಬೆಲೆ ದೊರೆತಿದೆ. ಪ್ರತಿ ಕ್ವಿಂಟಾಲ್​ಗೆ 55,329 ರೂ. ದರ ದೊರಕಿದೆ. ಕಳೆದ ವಾರವಷ್ಟೇ ಪ್ರತಿ ಕ್ವಿಂಟಾಲ್​ಗೆ ದಾಖಲೆ ಬೆಲೆ 55,111 ರೂ.ಗೆ ಮಾರಟವಾಗಿತ್ತು. ಈಗ ಆ ದಾಖಲೆ ಮೀರಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮೆಣಸಿನಕಾಯಿ ಮಾರಾಟವಾಗಿದೆ. ಈ ಬೆಲೆಯಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಮೆಣಸಿನಕಾಯಿಯನ್ನ ಎ.ಎಚ್.ನಾಸಿಪುರ ಎಂಬ ಖರೀದಿದಾರ ದಾಖಲೆ ಬೆಲೆಗೆ ಖರೀದಿ ಮಾಡಿದ್ದಾರೆ.

ಓದಿ : ಬಲು ಜೋರಾಗಿದೆ ಬ್ಯಾಡಗಿ ಮೆಣಸಿನ ಮಾರಾಟ.. ರೈತರ ಬಾಯಿ ಸಿಹಿಯಾಗಿಸಿದ ಮೆಣಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.