ETV Bharat / state

ದೇವೇಗೌಡರ ಮಾತಿಗೂ ಬೆಲೆಯಿಲ್ಲ.. ಸಿಎಂ ವಿರುದ್ದ ಹರಿಹಾಯ್ದ ಹೆಚ್‌ ಡಿ ರೇವಣ್ಣ

author img

By

Published : May 29, 2021, 9:35 PM IST

former-minister-hd-rewanna
ಸಿಎಂ ವಿರುದ್ದ ಹರಿಹಾಯ್ದ ರೇವಣ್ಣ

ದ್ವೇಷದ ರಾಜಕಾರಣ ಬಿಟ್ಟು ಜಿಲ್ಲೆಯ ಜನರನ್ನು ಉಳಿಸಿಕೊಡಿ ಎಂದು ಮುಖಕ್ಕೆ ಹೊಡೆದ ರೀತಿ ಹೇಳಿದ್ದೇನೆ. ಆದರೂ ಒಂದು ಮಾತು ಮಾತನಾಡದೇ ಸುಮ್ಮನಾದರು, ನಂತರ ಬಸವರಾಜ ಬೊಮ್ಮಾಯಿ ಬಂದು ರೇವಣ್ಣ ನಿನ್ನ ಸಮಸ್ಯೆಯನ್ನು ನಾನು ಕೇಳುತ್ತೇನೆ ಎಂದರು. ಆದರೆ, ಸಿಎಂ ಉಸಿರನ್ನೇ ಬಿಡಲ್ಲ..

ಹಾಸನ : ಮಾಜಿ ಪ್ರಧಾನಿಗೇ ಸುಳ್ಳು ಹೇಳ್ತಾರೆ ಸಿಎಂ. ಇನ್ನು ನಮ್ಮ ಮಾತಿಗೆ ಅವರು ಬೆಲೆ ಕೊಡ್ತಾರಾ..? ಹಾಸನ ಜಿಲ್ಲೆಯಲ್ಲಿ ಕೊರೊನಾ ಸಾವಿಗೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಮುಖ್ಯಮಂತ್ರಿಯವರಿಗೆ ನೇರವಾಗಿ ಮುಖಕ್ಕೆ ಹೊಡೆದಂಗೆ ಹೇಳಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಉಸಿರೇ ಬಿಡುತ್ತಿಲ್ಲ ಎಂದು ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ವಿರುದ್ದ ಹರಿಹಾಯ್ದ ರೇವಣ್ಣ

ಓದಿ: Audio viral: ಖಾಸಗಿ ಆಸ್ಪತ್ರೆಗೆ ಶಾಸಕರ ದಿಢೀರ್​​ ಭೇಟಿ: ಹವ್ಯಾಸಿ ಕಲಾವಿದರು ಮಾಡಿದ ಆಡಿಯೋ ಎಂದು ವ್ಯಂಗ್ಯ

ಮುಖ್ಯಮಂತ್ರಿಗಳೊಂದಿಗೆ ಇಂದು ನಡೆದ ವಿಡಿಯೋ ಕಾನ್ಪರೆನ್ಸ್ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಸಭೆಯಲ್ಲಿ ನಾನು ಸಿಎಂಗೆ ನೇರವಾಗಿ ಹೇಳಿದ್ದು, ನೀವು ನಮ್ಮ ಜಿಲ್ಲೆಯನ್ನು ಮಲತಾಯಿ ಧೋರಣೆಯಲ್ಲಿ ನೋಡಬೇಡಿ.

ದ್ವೇಷದ ರಾಜಕಾರಣ ಬಿಟ್ಟು ಜಿಲ್ಲೆಯ ಜನರನ್ನು ಉಳಿಸಿಕೊಡಿ ಎಂದು ಮುಖಕ್ಕೆ ಹೊಡೆದ ರೀತಿ ಹೇಳಿದ್ದೇನೆ. ಆದರೂ ಒಂದು ಮಾತು ಮಾತನಾಡದೇ ಸುಮ್ಮನಾದರು, ನಂತರ ಬಸವರಾಜ ಬೊಮ್ಮಾಯಿ ಬಂದು ರೇವಣ್ಣ ನಿನ್ನ ಸಮಸ್ಯೆಯನ್ನು ನಾನು ಕೇಳುತ್ತೇನೆ ಎಂದರು. ಆದರೆ, ಸಿಎಂ ಉಸಿರನ್ನೇ ಬಿಡಲ್ಲ, ಮಾಜಿ ಪ್ರಧಾನಿಗೇ ಸುಳ್ಳು ಹೇಳುವ ಇವರು, ನಮ್ಮ ಮಾತಿಗೆ ಬೆಲೆ ಕೊಡಲ್ಲ ಎಂದರು.

ಇನ್ನು, ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರಿಗೆ, ಬಡವರಿಗೆ, ಅಸಂಘಟಿತ ಕಾರ್ಮಿಕರಿಗೆ ಭಿಕ್ಷೆ ನೀಡಿದಂತೆ ಪ್ಯಾಕೇಜ್ ನೀಡಿದ್ದಾರೆ. ಪಾಸಿಟಿವ್ ಬಂದ ಬಡವರನ್ನು ಕೂಲಿಗೆ ಕರೀತಿಲ್ಲ, ಮನೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ, ಅಂಥವರ ಪಾಡು ಏನಾಗಬೇಕು..? ಅವರಿಗೆ ಸಹಾಯ ಮಾಡಿ. ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆ ಬಿದ್ದು ಹೋಗಿದ್ದು, ಅದಕ್ಕೆ ನೀವು ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಹೇಳಿದರು.

ಹಿಂದೆ ಮಹಾರಾಷ್ಟ್ರದಲ್ಲಿ ಹತ್ತಿ ಬೆಲೆ ಬಿದ್ದು, ಕೇವಲ ನಾಲ್ಕು ಗಂಟೆಯಲ್ಲಿ ಅಂದಿನ ಮುಖ್ಯಮಂತ್ರಿ ಮನೋಜ್ ಜೋಶಿ ರೈತರಿಂದ ಖರೀದಿಸಿ ರಫ್ತು ಮಾಡಲು ಕ್ರಮ ಕೈಗೊಂಡಿದ್ದರು. ಅಂಥ ಕೆಲಸ ನೀವು ಮಾಡಬೇಕು ಎಂದು ಹೇಳಿದ್ದೇನೆ.

ಅಲ್ಲದೇ ಮೈಸೂರು ಬಿಟ್ಟರೆ ರಾಜ್ಯದ ಎರಡನೇ ಸೋಂಕು ಹೊಂದಿರುವ ಜಿಲ್ಲೆ ಹಾಸನ. ದೇವೇಗೌಡರ ಮಾತಿಗೆ ಬೆಲೆ ಕೊಡಲ್ಲ ಎಂದರೆ ನಮ್ಮಂತ ಸಾಮಾನ್ಯರಿಗೆ ಬೆಲೆ ಕೊಡುತ್ತಾರಾ? ಜಿಲ್ಲೆಯನ್ನು ಬರೀ ದ್ವೇಷದಿಂದಲೇ ನೋಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.