ETV Bharat / state

ಭಾರೀ ಮಳೆಗೆ ಕೊಚ್ಚಿಹೋದ ಈರುಳ್ಳಿ, ಶೇಂಗಾ... ಸಂಕಷ್ಟದಲ್ಲಿ ರೈತರು

author img

By

Published : Sep 11, 2020, 4:37 PM IST

Farmer crop loss, Farmer crop loss by Heavy rain, Farmer crop loss by Heavy rain in Gadag, Gadag farmer problem, Gadag farmer problem, Gadag farmer problem 2020, Gadag farmer problem 2020 news, ಮಳೆಯಿಂದ ರೈತರ ಬೆಳೆ ಹಾನಿ, ಗದಗದಲ್ಲಿ ಮಳೆಯಿಂದ ರೈತರ ಬೆಳೆ ಹಾನಿ, ಗದಗ ರೈತರ ಸಮಸ್ಯೆ, ಗದಗ ರೈತರ ಸಮಸ್ಯೆ ಸುದ್ದಿ, ಗದಗ ರೈತರ ಸಮಸ್ಯೆ 2020 ಸುದ್ದಿ,
ಅತಿಯಾದ ಮಳೆಗೆ ಕೊಚ್ಚಿಹೋದ ಈರುಳ್ಳಿ, ಶೇಂಗಾ

ಕೊರೊನಾ ಬಂದು ಎಲ್ಲಾ ರಂಗದಂತೆ ಕೃಷಿ ರಂಗವನ್ನು ಹಾಳು ಮಾಡಿದೆ. ಇದರ ಹೊಡೆತದಿಂದ ಇನ್ನೇನು ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಮಳರಾಯನೀಗ ರೈತರ ಜೀವನದೊಂದಿಗೆ ಆಟವಾಡ್ತಿದ್ದಾನೆ. ಕಳೆದ 15 ದಿನಗಳಿಂದ ಬಿಟ್ಟೂಬಿಡದೇ ಸುರಿಯುತ್ತಿರೋ ಮಳೆಗೆ ರೈತರ ಬೆಳೆಯಲ್ಲ ಹಾನಿಗೀಡಾಗಿದೆ.

ಗದಗ: ಕಳೆದ 15 ದಿನಗಳಿಂದ ಸುರಿಯುತ್ತಿರೋ ಮಳೆ ರೋಣ ತಾಲೂಕಿನ ಮಾರನಬಸರಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಆಸೆಗೆ ತಣ್ಣೀರೆರಚಿದೆ.

ರೈತರು ಸಾಲ ಸೋಲ ಮಾಡಿ ಈರುಳ್ಳಿ ಮತ್ತು ಶೇಂಗಾ ಬೆಳೆದಿದ್ರು. ಇನ್ನೇನು ಒಂದು ತಿಂಗಳಲ್ಲಿ ಬೆಳೆ ಅವರ ಕೈಗೆ ಬಂದು ಲಕ್ಷಾಂತರ ರೂಪಾಯಿ ಲಾಭ ಗಳಿಸ್ತಿದ್ರು. ಆದ್ರೆ ಮಳೆಯಿಂದಾಗಿ ರೈತರ ಹೊಲಗಳ ಬದುಗಳೆಲ್ಲವೂ ಒಡೆದು, ನೀರು ಹೊಲಗಳಿಗೆ ನುಗ್ಗಿದೆ. ಹೀಗಾಗಿ ಕಷ್ಟಪಟ್ಟು ಬೆಳೆದಿದ್ದ ಈರುಳ್ಳಿ, ಶೇಂಗಾ ನೀರುಪಾಲಾಗಿವೆ.

ಇನ್ನೂ ಕೆಲವೆಡೆ ಮಳೆ ನೀರಿನಲ್ಲಿಯೇ ಬೆಳೆಗಳಿರುವ ಪರಿಣಾಮ ಹಳದಿ ರೋಗ ಕಾಣಿಸಿಕೊಂಡಿದೆ. ನಮ್ಮ ಪರಿಸ್ಥಿತಿ ಹೀಗಾದ್ರೆ ನಮ್ಮ ಜೀವನ ನಡೆಯೋದು ಹೇಗೆ ಅಂತ ಪ್ರಶ್ನೆ ಮಾಡ್ತಿದ್ದಾರೆ ರೈತರು. ನಮ್ಮ ಸಹಾಯಕ್ಕೆ ಸರ್ಕಾರ ನಿಲ್ಲಬೇಕು ಅಂತ ಅಂಗಲಾಚುತ್ತಿದ್ದಾರೆ.

ಅತಿಯಾದ ಮಳೆಗೆ ಕೊಚ್ಚಿಹೋದ ಈರುಳ್ಳಿ, ಶೇಂಗಾ

ತಾಲೂಕಿನ ಮಾರನಬಸರಿ, ಕಳಕಾಪುರ, ನಿಡಗುಂದಿ, ಜಕ್ಕಲಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೈತರು ಸಾವಿರಾರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ನಿರಂತರ ಮಳೆಗೆ ಹೊಲಗಳಲ್ಲಿ ನೀರು ನಿಂತು ಬೆಳೆಗಳೆಲ್ಲಾ ಹಳದಿ, ಸುಳಿಯಂಥ ರೋಗಕ್ಕೆ ತುತ್ತಾಗುತ್ತಿವೆ. ಅಲ್ಲದೇ ಈ ಬಾರಿ ಈರುಳ್ಳಿ ಬೆಳೆಗೆ ಬಂಪರ್ ಬೆಲೆ ಇದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಹೀಗೆ ಪದೇ ಪದೇ ಆಗುತ್ತಿರುವ ಅವಾಂತರಗಳಿಗೆ ರೈತ ವರ್ಗ ತನ್ನ ಕಾಯಕ ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆದಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಯ ತಪ್ಪಿ‌ ಬರೋ ಮಳೆರಾಯ, ಭೀಕರ ಪ್ರವಾಹ, ಕೊರೊನಾ ಸಂಕಷ್ಟ ಇವೆಲ್ಲದರ ಹೊಡೆತಕ್ಕೆ ಕೃಷಿಯಲ್ಲಿ ಖುಷಿ ಕಾಣಬೇಕಿದ್ದ ಗ್ರಾಮೀಣ ಭಾಗದ ಕುಟುಂಬಗಳು ಕಣ್ಣೀರು ಸುರಿಸುತ್ತಿವೆ. ಹೀಗಾಗಿ ಸರ್ಕಾರ ತಕ್ಷಣ ಸದ್ಯಕ್ಕೆ ಮಳೆಯಿಂದ ಹಾಳಾದ ಬೆಳೆ ಸಮೀಕ್ಷೆ ‌ಮಾಡಿ ತುರ್ತಾಗಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್​ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದಾರೆ.

ಅದಾವುದೇ ಪ್ರಕೃತಿ ವಿಕೋಪಗಳಾದ್ರೂ ಸರ್ಕಾರ ಕೋಟಿಗಟ್ಟಲೇ ಅನುದಾನ ಅಂತ ಜಿಲ್ಲೆಗಳಿಗೆ‌ ನೀಡುತ್ತೆ. ಜಿಲ್ಲಾಡಳಿತ ಮಾನವೀಯತೆ ದೃಷ್ಟಿಯಿಂದ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.