ETV Bharat / state

ನೆರೆ ಬಂದ್ರೇನು ಹಬ್ಬದ ಖರೀದಿ ಬಲು ಜೋರು.. ಹುಬ್ಬಳ್ಳಿಯಲ್ಲಿ ಮಾರ್ಕೆಟ್‌ನಲ್ಲಿ ಜನರ ಉತ್ಸಾಹ!

author img

By

Published : Oct 7, 2019, 7:20 PM IST

ನೆರೆ ನಡುವೆಯೂ ನಲುಗದ ವ್ಯಾಪಾರ, ಕುಂದಾನಗರಿ ಜನರ ಉತ್ಸಾಹ.....!

ನೆರೆಯಿಂದ ಕಂಗೆಟ್ಟಿದ್ದರೂ ಹೆಚ್ಚಿನ ಮಂದಿ ವಾಣಿಜ್ಯನಗರಿಯ ಮಾರುಕಟ್ಟೆಯಲ್ಲಿ ಅಡ್ಡಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಅದರ ಬಿಸಿ ಹಬ್ಬದ ಸಡಗರದ ಮುಂದೆ ಗೌಣವಾಯಿತು.

ಹುಬ್ಬಳ್ಳಿ: ಆಯುಧಪೂಜೆ, ವಿಜಯದಶಮಿ ಹಿನ್ನೆಲೆ ವಾಣಿಜ್ಯ ನಗರಿಯ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಚುರುಕಾಗಿತ್ತು. ಪೂಜಾ ಸಾಮಗ್ರಿಗಳು ಹಾಗೂ ವಾಹನಗಳ ಅಲಂಕಾರಿಕ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಇರುವುದು ಕಂಡು ಬಂದಿತು.

ನೆರೆ ನಡುವೆಯೂ ನಲುಗದ ವ್ಯಾಪಾರ, ಜನರ ಉತ್ಸಾಹ..!

ಆಯುಧಪೂಜೆಗೆ ಅಗತ್ಯವಾದ ಪೂಜೆ ಸಾಮಗ್ರಿಗಳನ್ನು ಕೊಳ್ಳಲು ಗ್ರಾಹಕರು ಮುಗಿ ಬಿದ್ದಿದ್ದರು. ಹೂವಿಗೆ ಭಾರಿ ಬೇಡಿಕೆಯಿದ್ದು, ಎಲ್ಲೆಂದರಲ್ಲಿ ಹೂ ಮಾರಾಟ ಕಂಡು ಬಂತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಳೆದೆರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಕುಂದು ಬಂದಂತೆ ಕಾಣಲಿಲ್ಲ. ನೆರೆಯಿಂದ ಕಂಗೆಟ್ಟಿದ್ದರೂ ಹೆಚ್ಚಿನ ಮಂದಿ ಮಾರುಕಟ್ಟೆಯಲ್ಲಿ ಅಡ್ಡಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಅದರ ಬಿಸಿ ಹಬ್ಬದ ಸಡಗರದ ಮುಂದೆ ಗೌಣವಾಯಿತು.

ಇನ್ನg, ನಗರದ ಜನತಾ ಬಜಾರ್​, ಗಾಂಧಿ ಮಾರ್ಕೆಟ್, ಈದ್ಗಾ ಮೈದಾನ, ಸಂಗೊಳ್ಳಿ ರಾಯಣ್ಣ ವೃತ್ತದ ಅಕ್ಕಪಕ್ಕ ಸೇರಿದಂತೆ ವಿವಿಧೆಡೆ ಹಣ್ಣು, ಹೂ, ತರಕಾರಿ, ಬಾಳೆ ಕಂದು, ಮಾವಿನ ಸೊಪ್ಪುಗಳ ವ್ಯಾಪಾರ ಭರಾಟೆ ಜೋರಾಗಿತ್ತು. ಒಟ್ಟಾರೆಯಾಗಿ ಮಳೆಯ ನಡುವೆಯೂ ನಗರದಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

Intro:ಹುಬ್ಬಳಿBody:ದಸರಾ ಹಬ್ಬ: ನೆರೆ ಪರಿಸ್ಥಿತಿಯಲ್ಲೂ ವ್ಯಾಪಾರ ಭರಾಟೆ ಜೋರು, ಕುಂದದ ಜನರ ಉತ್ಸಾಹ.....!

ಹುಬ್ಬಳ್ಳಿ:- ವಾಣಿಜ್ಯ ನಗರಿಯಲ್ಲಿ ಆಯುಧಪೂಜೆ ವಿಜಯದಶಮಿ ಹಿನ್ನೆಲೆ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಚುರುಕಾಗಿತ್ತು. ಪೂಜಾ ಸಾಮಗ್ರಿಗಳು ಹಾಗೂ ವಾಹನಗಳ ಅಲಂಕಾರಿಕ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಇರುವುದು ಕಂಡು ಬಂದಿತು.....
ಹೌದು ಆಯುಧಪೂಜೆಗೆ ಅಗತ್ಯವಾದ ಪೂಜೆ ಸಾಮಗ್ರಿ, ಹಣ್ಣು- ಹಂಪಲು, ಬಾಳೆ ದಿಂಡು, ಮಾವಿನ ಸೊಪ್ಪನ್ನು ಕೊಳ್ಳಲು ಗ್ರಾಹಕರು ಮುಗಿ ಬಿದ್ದಿದ್ದರು. ಹೂವಿಗೆ ಭಾರಿ ಬೇಡಿಕೆಯಿದ್ದು, ಎಲ್ಲೆಂದರಲ್ಲಿ ಹೂ ಮಾರಾಟ ಕಂಡು ಬಂತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಳೆದೆರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಕುಂದು ಬರಲಿಲ್ಲವಾದ್ರೂ ಕೂಡ ಮಳೆಯಿಂದಾಗಿ ಸ್ವಲ್ಪಮಟ್ಟಿಗೆ ಜನರಲ್ಲಿ ಉತ್ಸಾಹ ಕಂಡು ಬಂತ್ತು. ನಗರದ ಪ್ರಮುಖ ಬೀದಿ ಅಂಗಡಿಗಳಲ್ಲಿ ಬಣ್ಣ, ಬಣ್ಣದ ಕಾಗದ, ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಮಾರಾಟಕ್ಕೆ ಇಡಲಾಗಿತ್ತು. ಹಬ್ಬದ ಸಡಗರ, ಸಂಭ್ರಮ ಕಂಡು ಬಂತು. ಹೆಚ್ಚಿನ ಮಂದಿ ಮಾರುಕಟ್ಟೆಯಲ್ಲಿ ಅಡ್ಡಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತ ರಾಗಿದ್ದರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಅದರ ಬಿಸಿ ಹಬ್ಬದ ಸಡಗರದ ಮುಂದೆ ಗೌಣವಾಯಿತು.ನಗರದ ಜನತಾ ಬಜಾರ, ಗಾಂಧಿ ಮಾರ್ಕೆಟ್, ಈದ್ಗಾ ಮೈದಾನ, ಸಂಗೊಳ್ಳಿ ರಾಯಣ್ಣ ವೃತ್ತದ ಅಕ್ಕಪಕ್ಕ ಸೇರಿದಂತೆ ವಿವಿಧೆಡೆ ಹಣ್ಣು, ಹೂ, ತರಕಾರಿ, ಬಾಳೆ ಕಂದು, ಮಾವಿನ ಸೊಪ್ಪುಗಳ ವ್ಯಾಪಾರ ಭರಾಟೆ ಜೋರಾಗಿತ್ತು.ಇನ್ನೂ ಆಯುಧ ಪೂಜೆಗೆ ಮುಖ್ಯವಾಗಿ ಹೂ ಅಗತ್ಯವಾಗಿದ್ದು, ಹಬ್ಬದ ಅಂಗವಾಗಿ ಬೇಡಿಕೆ ಹೆಚ್ಚಾಗಿತ್ತು. ಮಲ್ಲಿಗೆ, ಕಾಕಕ, ಕನಕಾಂಬರ, ಸೇವಂತಿ, ಚೆಂಡು, ಗುಲಾಬಿ ಹೂಗಳ ಬೆಲೆ ಗಗನಕ್ಕೆ ಏರಿತ್ತು. ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ 80 ರಿಂದ 100, ಪಚ್ಚಬಾಳೆ 40ರಿಂದ 60, ಕಿತ್ತಳೆ 80, ದ್ರಾಕ್ಷಿ 120, ಕಪ್ಪು ದ್ರಾಕ್ಷಿ 80, ಸೇಬು 100 ರಿಂದ 120ಕ್ಕೆ ಮಾರಾಟವಾಗುತ್ತಿರುವುದು ಕಂಡು ಬಂದಿತು.ಒಟ್ಟಾರೆಯಾಗಿ ಮಳೆಯ ನಡುವೆಯೂ ನಗರದಲ್ಲಿ ದಸರಾ ಹಬ್ಬ ಸಂಭ್ರಮ ಕಳೆಗಟ್ಟಿತ್ತು.


ಬೈಟ್:- ಮಹ್ಮದ್ ಅಲಿ...ಹೂವಿನ ಅಂಗಡಿ ಮಾಲೀಕ

ಬೈಟ್:- ರಮೇಶ ಕುಮಾರ್ ಗ್ರಾಹಕ...

________________________________________________

Conclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.