ETV Bharat / state

ಧಾರವಾಡ ವಿವಿಯಿಂದ ನೇಮಕಾತಿ: 14 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

author img

By ETV Bharat Karnataka Team

Published : Oct 23, 2023, 5:12 PM IST

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವ್ಯಾಪ್ತಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಈ ನೇಮಕಾತಿ ನಡೆಯಲಿದೆ.

Karnatak University Dharwad recruitment For assistant Teacher
Karnatak University Dharwad recruitment For assistant Teacher

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮಾಧ್ಯಮಿಕ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಶಿಕ್ಷಕರು ಸೇರಿದಂತೆ ಒಟ್ಟು 14 ಹುದ್ದೆಗಳಿವೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

  • ಸಹಾಯಕ ಶಿಕ್ಷಕರು- 9
  • ಸಂಗೀತ ಶಿಕ್ಷಕ- 1
  • ಸಹಾಯಕ ಹೌಸ್​ ಮಾಸ್ಟರ್​ ಹಾಗು ಸಹಾಯಕ ಶಿಕ್ಷಕ- 1
  • ಸಹಾಯಕ ಹೌಸ್​ ಮಾಸ್ಟರ್- 1
  • ಸಹಾಯಕ ಶಿಕ್ಷಕರು- 2

ವಿದ್ಯಾರ್ಹತೆ:

  • ಸಹಾಯಕ ಶಿಕ್ಷಕರು- ಸ್ನಾತಕೋತ್ತರ ಪದವಿ, ಬಿ.ಎಡ್​
  • ಸಂಗೀತ ಶಿಕ್ಷಕ- ಸಂಗೀತದಲ್ಲಿ ಸ್ನಾತಕೋತ್ತರ ಪದವಿ
  • ಸಹಾಯಕ ಹೌಸ್​ ಮಾಸ್ಟರ್​ ಕಂ ಸಹಾಯಕ ಶಿಕ್ಷಕ- ಸ್ನಾತಕೋತ್ತರ ಪದವಿ, ಬಿಎಡ್
  • ಸಹಾಯಕ ಹೌಸ್​ ಮಾಸ್ಟರ್​ - ವಿಜ್ಞಾನದಲ್ಲಿ ಪದವಿ ಬಿಎಡ್​​
  • ಸಹಾಯಕ ಶಿಕ್ಷಕರು- ಪಿಯುಸಿ, ಡಿಎಲ್​ಎಡ್​​, ಡಿ.ಎಡ್​

ವಯೋಮಿತಿ: ಗರಿಷ್ಠ ವಯೋಮಿತಿ 42 ವರ್ಷ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ. ಪಂ, ಪ್ರವರ್ಗ 1, ವಿಶೇಷಚೇತನ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ಜಾಕಲತಾಣದಿಂದ ನಿಗದಿತ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಜತೆಗೆ ಇನ್ನಿತರ ಅಗತ್ಯ ದಾಖಲಾತಿ ಮತ್ತು ಅರ್ಜಿ ಶುಲ್ಕದ ರಶೀದಿಯನ್ನು ಕೆಳಗಿನ ವಿಳಾಸಕ್ಕೆ ಪೋಸ್ಟ್​ ಅಥವಾ ನೇರವಾಗಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 1,250 ರೂ ಅರ್ಜಿ ಶುಲ್ಕ ಮತ್ತು ಪರಿಶಿಷ್ಟ ಜಾರಿ, ಪರಿಶಿಷ್ಟ, ಪ್ರವರ್ಗ 1 ಮತ್ತು ವಿಶೇಷಚೇತನ ಅಭ್ಯರ್ಥಿಗಳು 625 ರೂ ಅರ್ಜಿ ಶುಲ್ಕ ಭರಿಸಬೇಕಿದೆ.

ಅರ್ಜಿ ಸಲ್ಲಿಕೆ ವಿಳಾಸ: ಕುಲ ಸಚಿವರು, ಸಿಆಸು ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಪಾವಟಿನಗರ, ಧಾರವಾಡ- 580003.

ಆಯ್ಕೆ ಪ್ರಕ್ರಿಯೆ: ಮೆರಿಟ್​​, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ನವೆಂಬರ್​ 18ಕ್ಕೆ ಮೊದಲು ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ kud.ac.in ಈ ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Jobs in Shimoga: ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನೇಮಕಾತಿ; ಡೇಟಾ ಎಂಟ್ರಿ ಆಪರೇಟರ್​ ಸೇರಿದಂತೆ ಹಲವು ಹುದ್ದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.