ETV Bharat / state

ಅದ್ಧೂರಿ ಗಣೇಶ ಚತುರ್ಥಿ ಆಚರಣೆಗೆ ಪಟ್ಟುಹಿಡಿದ ಹಿಂದೂಪರ ಸಂಘಟನೆಗಳು..ಇಕ್ಕಟ್ಟಿನಲ್ಲಿ ಜಿಲ್ಲಾಡಳಿತ

author img

By

Published : Sep 8, 2021, 9:43 AM IST

davangere
ಗಣೇಶ ಚತುರ್ಥಿ ಆಚರಣೆಗೆ ಪಟ್ಟುಹಿಡಿದ ಹಿಂದೂಪರ ಸಂಘಟನೆಗಳು

ದಾವಣಗೆರೆಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಗಣೇಶೋತ್ಸವ ಆಚರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ದಾವಣಗೆರೆ: ಸಂಕಷ್ಟ ಹರ ಗಣಪತಿ ಎನ್ನುತ್ತೇವೆ. ಆದರೆ, ಈ ಬಾರಿಯ ಗಣಪತಿ ಹಬ್ಬಕ್ಕೆ ಸಾಲು ಸಾಲು ಸಂಕಷ್ಟಗಳು ಎದುರಾಗಿದೆ. ಸರ್ಕಾರ ಐದು ದಿನಗಳಿಗೆ ಮಾತ್ರ ಗಣಪತಿ ಹಬ್ಬ ಆಚರಣೆಗೆ ಅವಕಾಶ ನೀಡಿದೆ. ಆದರೆ, ಇತ್ತ ದಾವಣಗೆರೆಯಲ್ಲಿ ಹಿಂದೂ ಸಂಘಟನೆಗಳು ಹಬ್ಬವನ್ನು ಅದ್ದೂರಿಯಾಗಿ ಮಾಡಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.‌

ರಾಜ್ಯಾದಂತ ಸಾರ್ವಜನಿಕವಾಗಿ ಆಚರಣೆ ಮಾಡುವ ಗಣೇಶೋತ್ಸವಕ್ಕೆ ಸರ್ಕಾರ ಬ್ರೇಕ್‌ ಹಾಕಿದೆ. ಡಿಜೆ ನಾದ, ಸಾಂಸ್ಕೃತಿಕ ಹಾಗೂ ರಸ ಮಂಜರಿ ಕಾರ್ಯಕ್ರಮಕ್ಕೂ ಕೂಡ ಸರ್ಕಾರ ಕೊಕ್ ನೀಡಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡ ಬಯಸುವವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಹಾಗೂ ಥರ್ಮಲ್‌‌ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಆದೇಶಿಸಿದೆ. ಇನ್ನು ಕೊರೊನಾ ನೆಪ ಹೇಳಿ ಹಬ್ಬ ಆಚರಣೆಗೆ ಅಡ್ಡಿ ಮಾಡಿರುವ ಸರ್ಕಾರದ ವಿರುದ್ಧ ಆಯೋಜಕರು ಕೆಂಡ ಕಾರುತ್ತಿದ್ದಾರೆ.

ಗಣೇಶ ಚತುರ್ಥಿ ಆಚರಣೆಗೆ ಪಟ್ಟುಹಿಡಿದ ಹಿಂದೂಪರ ಸಂಘಟನೆಗಳು

ಇನ್ನೊಂದೆಡೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ. ಮನೆಯಲ್ಲಿ ಕೂರಿಸುವ ಗಣೇಶನ ಮೂರ್ತಿಯ ಎತ್ತರ ಎರಡು ಅಡಿ, ಸಾರ್ವಜನಿಕವಾಗಿ ಕೂಡಿಸುವ ಗಣೇಶ ಮೂರ್ತಿಯ ಎತ್ತರ ನಾಲ್ಕು ಅಡಿಗೆ ಸರ್ಕಾರ ಸೀಮಿತಗೊಳಿಸಿದೆ.

ಆದರೆ, ದಾವಣಗೆರೆಯ ಹಿಂದೂ ಮಹಾಗಣಪತಿ ಸಮಿತಿಯವರು ಎಂಟು ಅಡಿ ಗಣೇಶವನ್ನು ಇಡಲು ನಿರ್ಧಾರ ಮಾಡಿದ್ದು, ಐದು ದಿನಕ್ಕೆ ಗಣೇಶನನ್ನು ನೀರಿಗೆ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.