ETV Bharat / state

ಕುಸಿತ ಕಂಡ ಈರುಳ್ಳಿ ಬೆಲೆ: ಕೊಳೆರೋಗಕ್ಕೆ ತುತ್ತಾಗಿ ರೈತರ ಕಣ್ಣಲ್ಲಿ‌ ನೀರು ತರಿಸುತ್ತಿದೆ ಉಳ್ಳಾಗಡ್ಡಿ

author img

By

Published : Sep 17, 2021, 7:00 AM IST

Updated : Sep 17, 2021, 2:01 PM IST

davangere
ಕುಸಿತ ಕಂಡ ಈರುಳ್ಳಿ ಬೆಲೆ

ದಾವಣಗೆರೆ ತಾಲೂಕಿನ ಮಲ್ಲಾಪುರ ಗ್ರಾಮದ ರೈತ ತಿಪ್ಪೆಸ್ವಾಮಿ ಎಂಬವರು 3 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಈಗ ಅವುಗಳಿಗೆ ಕೊಳೆ‌ರೋಗ ಬಂದಿದೆ. ಪ್ರತಿ ಎಕರೆಗೆ 50 ರಿಂದ 60 ಸಾವಿರ ಖರ್ಚು ಮಾಡಿದ್ದು, ಹಾಕಿದ ಬಂಡವಾಳ ಕೂಡ ಬರದೆ ರೈತರು ಹೈರಾಣಾಗಿದ್ದಾರೆ.

ದಾವಣಗೆರೆ: ರೈತರೆಲ್ಲ ಕಷ್ಟಪಟ್ಟು ಈರುಳ್ಳಿ ಬೆಳೆದಿದ್ದರು. ಉತ್ತಮ ಇಳುವರಿ ಕೂಡ ಬಂದಿತ್ತು. ಆದರೆ, ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟಕ್ಕೆ ತಂದರೆ ಕೇಳುವವರೇ ಇಲ್ಲ ಎಂಬಂತಾಗಿದೆ. ಬೆಲೆ ಇಲ್ಲದ ಕಾರಣ ಈರುಳ್ಳಿ ಖರೀದಿಗೆ ಯಾರು ಮುಂದೆ ಬರುತ್ತಿಲ್ಲ. ಇತ್ತ ಲಾಭನೂ ಇಲ್ಲ. ಹಾಕಿದ ಬಂಡವಾಳ ಕೂಡ ಸಿಗದೇ ರೈತರು ವಾಪಸ್ ಹೋಗುವಂತಾಗಿದೆ. ಕೊಳೆ‌ರೋಗಕ್ಕೆ ಈರುಳ್ಳಿ ಬೆಳೆ ತುತ್ತಾಗಿದ್ದು, ರೈತರ‌ ಕಣ್ಣಲ್ಲಿ‌ ನೀರು ತರಿಸುವಂತಾಗಿದೆ.

ದಾವಣಗೆರೆ ತಾಲೂಕಿನ ಮಲ್ಲಾಪುರ ಗ್ರಾಮದ ರೈತ ತಿಪ್ಪೆಸ್ವಾಮಿ ಎಂಬವರು 3 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಈಗ ಅವುಗಳಿಗೆ ಕೊಳೆ‌ರೋಗ ಬಂದಿದೆ. ಪ್ರತಿ ಎಕರೆಗೆ 50 ರಿಂದ 60 ಸಾವಿರ ಖರ್ಚು ಮಾಡಿದ್ದು, ಹಾಕಿದ ಬಂಡವಾಳ ಕೂಡ ಬರದೇ ರೈತರು ಹೈರಾಣಾಗಿದ್ದಾರೆ. ಈಗ ಪ್ರತಿ ಕ್ವಿಂಟಾಲ್​ಗೆ ಈರುಳ್ಳಿ 50 ರಿಂದ 200 ರೂಪಾಯಿ ಇದೆ. ಆದರೆ ಈರುಳ್ಳಿಯನ್ನು ಪ್ಯಾಕೇಟ್​ಗೆ ಹಾಕಿ ಮಾರುಕಟ್ಟೆಗೆ ತರಲು ಒಂದು ಚೀಲಕ್ಕೆ 100 ರಿಂದ 150 ರೂಪಾಯಿ ಖರ್ಚು ಆಗುತ್ತದೆ.

ಕುಸಿತ ಕಂಡ ಈರುಳ್ಳಿ ಬೆಲೆ

ಕಳೆದ ಹಲವಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಕೂಡ ಸರ್ಕಾರ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ದಾವಣಗೆರೆಯ ಈರುಳ್ಳಿ ಮಾರುಕಟ್ಟೆ ಸುತ್ತಮುತ್ತ ಜಿಲ್ಲೆಯಲ್ಲಿರುವ ದೊಡ್ಡ ಮಾರ್ಕೇಟ್. ಬಿಜಾಪುರ, ಬಳ್ಳಾರಿ, ಹಾವೇರಿ ಸೇರಿದಂತೆ ಮಹಾರಾಷ್ಟ್ರದಿಂದಲೂ ಈರುಳ್ಳಿ ಮಾರಾಟ ಮತ್ತು ಖರೀದಿಗೆ ಇಲ್ಲಿಗೆ ಬರುತ್ತಾರೆ. ಸ್ಥಳಿಯವಾಗಿ ಬೆಳೆದ ಈರುಳ್ಳಿಯನ್ನ ರೈತರೇ ಮಾರಾಟಕ್ಕೆ ತರುತ್ತಾರೆ. ಆದರೆ ಈರುಳ್ಳಿ ಮಾರಾಟಕ್ಕೆ ತಂದ ರೈತರು ಇದೀಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಕೆಜಿ ಈರುಳ್ಳಿಗೆ 1 ರಿಂದ 3 ರೂಪಾಯಿ ಬೆಲೆ ಸಿಗುತ್ತಿದೆ. ಇದರಿಂದ 30 ರಿಂದ 40 ಪ್ಯಾಕೇಟ್ ಈರುಳ್ಳಿ ಮಾರಾಟಕ್ಕೆ ತಂದ ರೈತರಿಗೆ ಅನ್ಯಾಯವಾಗುತ್ತಿದೆ. ಕೇವಲ 2 ರಿಂದ 3 ಸಾವಿರ ರೂಪಾಯಿ ತೆಗೆದುಕೊಂಡು‌ ಹೋಗುತ್ತಾರೆ. ವಾಹನ ಬಾಡಿಗೆ ಸಹ ಸಿಗುತ್ತಿಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಈರುಳ್ಳಿ ಬೆಳೆದರೆ ನೂರು ಇನ್ನೂರು ರೂಪಾಯಿಗೆ ಕೇಳುತ್ತಿದ್ದಾರೆ. ಕೆಲವರು ಈರುಳ್ಳಿ ಖರೀದಿಗೂ ಮುಂದೆ ಬರುತ್ತಿಲ್ಲವಂತೆ. ತಕ್ಷಣ ರಾಜ್ಯ‌ ಸರ್ಕಾರ ರೈತರಿಗೆ ಬೆಂಬಲ ಬೆಲೆ‌ ನೀಡಬೇಕು. ಹಾಗೂ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಒತ್ತಾಯಿಸಿದರು.

ಸಾಲ ಮಾಡಿ ಈರುಳ್ಳಿ ಬೆಳೆದಿದ್ದ ರೈತ ಇದೀಗ ಕಣ್ಣೀರಿಡುತ್ತಿದ್ದಾನೆ. ಸರ್ಕಾರ ಕೂಡಲೇ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಂದ ನೇರವಾಗಿ ಖರೀದಿಸುವ ವ್ಯವಸ್ಥೆ ಮಾಡಬೇಕೆಂದು ಈರುಳ್ಳಿ ಬೆಳೆಗಾರರು ಒತ್ತಾಯಿಸಿದ್ದಾರೆ.

Last Updated :Sep 17, 2021, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.