ETV Bharat / state

ಪತ್ನಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಹತ್ಯೆ ಆರೋಪ..ವೈದ್ಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

author img

By

Published : Oct 23, 2021, 10:56 PM IST

ಚನ್ನಕೇಶಪ್ಪ
ಚನ್ನಕೇಶಪ್ಪ

ವೈದ್ಯನೊಬ್ಬ ಲೋ ಬಿಪಿಯಿಂದ ಬಳಲುತ್ತಿದ್ದ ಪತ್ನಿಗೆ ಹೈಡೋಸ್ ಇಂಜೆಕ್ಷನ್​ ನೀಡಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆ: ರೋಗಿಗಳಿಗೆ ಚುಚ್ಚು ಮದ್ದು ನೀಡಿ ಜೀವ ಉಳಿಸುವ ವೈದ್ಯನೊಬ್ಬ ತನ್ನ ಮಡದಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವ ಘಟನೆ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ನಡೆದಿದೆ.

ಶಿಲ್ಪಾ(36)ಳನ್ನು ಚನ್ನಕೇಶಪ್ಪ (45) ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಒಂಬತ್ತು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾಳ ಕೊಲೆ ಪ್ರಕರಣವನ್ನು ಪೋಲಿಸರು ಭೇದಿಸಿದ್ದು, ಡಾ, ಚನ್ನಕೇಶಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 2005 ರಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಶಿಲ್ಪಾರೊಂದಿಗೆ ಚನ್ನಕೇಶಪ್ಪ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ವಾಮಾಚಾರದಲ್ಲಿ ತೊಡಗಿದ್ನಾ ವೈದ್ಯ?

ಚನ್ನಕೇಶಪ್ಪ ವಾಮಾಚಾರದಲ್ಲಿ ತೊಡಗಿದ್ದ ಎನ್ನಲಾಗಿದೆ. ಫೆಬ್ರವರಿ 11 ರಂದು ಶಿಲ್ಪಾಗೆ ಬಿಪಿ ಲೋ ಆಗಿತ್ತಂತೆ. ಈ ವೇಳೆ ಚನ್ನಕೇಶಪ್ಪ ಡೆಕ್ಸಮೆಥಾಸೊನ್ ಸ್ಟೀರಾಯ್ಡ್ ನೀಡಿದ್ದಾನೆ. ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾಳೆ.

ಈ ವೇಳೆ ಆರೋಪಿಯು, ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದೆ, ಮನೆಗೆ ತಂದಿದ್ದನಂತೆ. ಈ ಸಮಯದಲ್ಲಿ ಆಕೆಯ ಬಾಯಲ್ಲಿ ರಕ್ತ ಮಿಶ್ರಿತ ನೊರೆ ಬಂದಿದೆ. ಇದರಿಂದ ಅನುಮಾನಗೊಂಡ ಪೋಷಕರು ನ್ಯಾಮತಿ ಠಾಣೆಗೆ ದೂರು ನೀಡಿದ್ದರು.

ಎಸ್ಎಸ್ಎಲ್ ತನಿಖೆ ವರದಿಯಿಂದ ಪ್ರಕರಣ ಬೆಳಕಿಗೆ

ಶಿಲ್ಪಾಳ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಎಸ್​ಎಸ್​ಎಲ್​ ತನಿಖಾ ವರದಿ ಎರಡೂ ಹೊಂದಿಕೆಯಾದ ಹಿನ್ನೆಲೆ, ಪೊಲೀಸರು ಡಾ.ಚನ್ನಕೇಶಪ್ಪನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಆರೋಪಿ ಚನ್ನಕೇಶಪ್ಪ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ಕೊಲೆಗೆ ಕಾರಣ ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ:ಜೈಲಿನಿಂದಲೇ ಉದ್ಯಮಿಗಳಿಗೆ ಬೆದರಿಕೆ ಕರೆ ಪ್ರಕರಣ: ಶಂಕಿತ ಉಗ್ರನ ಹೆಂಡತಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.