ETV Bharat / state

ಜೈಲಿನಿಂದಲೇ ಉದ್ಯಮಿಗಳಿಗೆ ಬೆದರಿಕೆ ಕರೆ ಪ್ರಕರಣ: ಶಂಕಿತ ಉಗ್ರನ ಹೆಂಡತಿ ಸೆರೆ

author img

By

Published : Oct 23, 2021, 8:31 PM IST

ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗದ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿ ಹಣದ ಬೇಡಿಕೆ ಇಟ್ಟ ಪ್ರಕರಣದಲ್ಲಿ ಶಂಕಿತ ಉಗ್ರನ ಹೆಂಡತಿಯನ್ನು ಶಿವಮೊಗ್ಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

suspected  terrorist wife arrested
ಜೈಲಿನಿಂದ ಉದ್ಯಮಿಗಳಿಗೆ ಬೆದರಿಕೆ ಕರೆ ಪ್ರಕರಣ

ಶಿವಮೊಗ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಶಿವಮೊಗ್ಗದ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿ ಹಣದ ಬೇಡಿಕೆ ಇಟ್ಟ ಪ್ರಕರಣದಲ್ಲಿ ಶಂಕಿತ ಉಗ್ರನ ಹೆಂಡತಿಯನ್ನು ಶಿವಮೊಗ್ಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಜೈಲಿನಿಂದ ಉದ್ಯಮಿಗಳಿಗೆ ಬೆದರಿಕೆ ಕರೆ ಪ್ರಕರಣ

ಪರಪ್ಪನ ಆಗ್ರಹಾರದಿಂದ ಕೇವಲ ಎಂಟು ಸಂಖ್ಯೆಯ ನಂಬರ್​ನಿಂದ ಶಿವಮೊಗ್ಗ ಉದ್ಯಮಿ ಶಾಂತ ಕುಮಾರ್ ಎಂಬುವರಿಗೆ ದಿನಾಂಕ 14-07-2021 ರಂದು ಕರೆ ಮಾಡಿ ನಾನು ಹೆಬ್ಬೆಟ್​ ಮಂಜ ತನಗೆ 5 ಲಕ್ಷ ರೂ ನೀಡಬೇಕೆಂದು ಫೋನ್​ನಲ್ಲಿ ಬೆದರಿಕೆ ಹಾಕಿರುತ್ತಾನೆ. ಹಣ ನೀಡದೆ ಹೋದರೆ, ನಿಮ್ಮ ಮನೆ ಬಳಿ ಹುಡುಗರನ್ನು ಕಳುಹಿಸಿ ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾನೆ.

ಇದಕ್ಕೆ ಬೆದರಿದ ಉದ್ಯಮಿಯು ಆತ ಹೇಳಿದ ಖಾತೆಗೆ ಮೊದಲು 30 ಸಾವಿರ ರೂ ಹಣ ಹಾಕುತ್ತಾರೆ. ನಂತರ ನಾನು ಮಾರ್ಕೆಟ್​​ ಲೋಕಿ ಎಂದು ಹೇಳಿ ಇನ್ನೊಂದು ನಂಬರ್​ನಿಂದ ತನಗೆ 5 ಲಕ್ಷ ರೂ ನೀಡಬೇಕೆಂದು ಬೇಡಿಕೆ ಇಟ್ಟಿರುತ್ತಾನೆ. ಇದಕ್ಕೆ ಉದ್ಯಮಿಯು 20 ಸಾವಿರ ರೂ ಹಣ ಹಾಕುತ್ತಾನೆ.

ಕಾಲ್​ ಬಂದಿದ್ದು ಎಲ್ಲಿಂದ?

ಪದೇ ಪದೆ ಫೋನ್ ಕಾಲ್​​ನಿಂದ ಬೇಸತ್ತ ಉದ್ಯಮಿಯು ಅಕ್ಟೊಬರ್ 11 ರಂದು ಸಿಇಎನ್ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾರೆ. ಈ ಪ್ರಕರಣದ ಬೆನ್ನು ಹತ್ತಿದ ಸಿಇಎನ್ ಪೊಲೀಸರು ಕಾಲ್ ಡೀಟೆಲ್ಸ್​​ ತೆಗೆದು ನೋಡಿದಾಗ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಕರೆಗಳು ಬಂದಿತ್ತು ಎಂದು ತಿಳಿದು ಬರುತ್ತದೆ.

ಇದರಲ್ಲಿ ಮೊದಲ ಕೆರೆಯನ್ನು ತಿಪಟೂರಿನಲ್ಲಿ ನಡೆದ ಮರ್ಡರ್ ಕೇಸ್​ನಲ್ಲಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ. ಹಾಗೂ ಇನ್ನೋರ್ವ ಬೆಂಗಳೂರಿನ ಪುಲಕೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಭಟ್ಕಳ ಮೂಲದ ಹುಸೇನ್ ಎಂಬಾತ ಕರೆ ಮಾಡಿದ್ದು ಎಂದು ತಿಳಿದು ಬರುತ್ತದೆ. ಈತ ತನ್ನ ಹೆಂಡತಿಯ ಬ್ಯಾಂಕ್ ಅಕೌಂಟ್ ನಂಬರ್ ನೀಡಿ ಇದಕ್ಕೆ ಹಣ ಹಾಕಿಸಿರುತ್ತಾನೆ. ಈ ಪ್ರಕರಣದಲ್ಲಿ ಹಣ ಪಡೆದ ಆರೋಪದಡಿ ಹುಸೇನ್ ಪತ್ನಿ ಸಾಹೀರಾ ಬಾನು ಎಂಬುವರನ್ನು ಬಂಧಿಸಲಾಗಿದೆ. ಈಕೆಯನ್ನು ಬಂಧಿಸಿ‌ ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಧಮ್ಕಿ‌ ಹಾಕಿದ ಇಬ್ಬರ ಬಂಧನಕ್ಕೆ ಸಿದ್ಧತೆ:

ಪರಪ್ಪನ ಅಗ್ರಹಾರದಲ್ಲಿಯೇ ಇದ್ದು ಬೆದರಿಕೆ ಹಾಕಿದ ಇಬ್ಬರು ಆರೋಪಿಗಳ ವಿಚಾರಣೆ ನಡೆಸಲು ಇಬ್ಬರ ಬಾಡಿ ವಾರಂಟ್​ಗಾಗಿ ಶಿವಮೊಗ್ಗ ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಅನುಮತಿ ನೀಡಿದ ನಂತರ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಎಸ್​ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ. ವಿಚಾರಣೆಯ ವೇಳೆ, ಇವರು ಇನ್ನೆಷ್ಟು ಜನಕ್ಕೆ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂಬುದು ತಿಳಿದು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.