ETV Bharat / state

ಮಂಗಳೂರು ಜೈಲಿಗೆ 300 ಪೊಲೀಸರ ದಾಳಿ - ತಂಬಾಕು ಗುಟ್ಕಾ ಪ್ಯಾಕೇಟ್ ಹಿಡಿದು ಹೊರಬಂದ ಆರಕ್ಷಕರು

author img

By

Published : Apr 2, 2023, 6:26 PM IST

ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್
ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್

ಮಂಗಳೂರು ನಗರದ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ದಾಳಿ ನಡೆಸಿ ತಂಬಾಕು, ಗುಟ್ಕಾ ಪ್ಯಾಕೇಟ್​ ಹಾಗೂ ಬೀಡಿ-ಸಿಗರೇಟ್​ ಪ್ಯಾಕ್ ಅನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಅವರು ಕಾರಾಗೃಹದಲ್ಲಿ ತಪಾಸಣೆ ಬಗ್ಗೆ ಮಾಹಿತಿ ನೀಡಿದರು

ಮಂಗಳೂರು: ನಗರದ ಜಿಲ್ಲಾ ಕಾರಾಗೃಹಕ್ಕೆ ಇಂದು 300 ಮಂದಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಆದರೆ ದಾಳಿ ಮಾಡಿದ ಸಂದರ್ಭದಲ್ಲಿ ಪೊಲೀಸರಿಗೆ ತಂಬಾಕು - ಗುಟ್ಕಾ ಪ್ಯಾಕೆಟ್​ಗಳು, ಬೀಡಿ - ಸಿಗರೇಟ್​ಗಳು ದೊರೆತಿದ್ದು, ಅದನ್ನು ಬಿಟ್ಟರೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.

ಇಂದು ಮಧ್ಯಾಹ್ನ 12ರ ಸುಮಾರಿಗೆ ಕಾರಾಗೃಹದ ಮುಂದೆ ಏಕಾಏಕಿ ಪೊಲೀಸ್ ವಾಹನಗಳು ಬಂದು ನಿಂತಿವೆ. ವಾಹನಗಳಿಂದ ಸಾಲುಸಾಲಾಗಿ ಇಳಿದ ಪೊಲೀಸರು ಕಾರಾಗೃಹಕ್ಕೆ ದಿಢೀರನೇ ಪ್ರವೇಶ ಮಾಡಿದ್ದಾರೆ. ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಹಾಗೂ ಉಪ ಪೊಲೀಸ್ ಆಯುಕ್ತ ಅಂಶುಕುಮಾರ್, ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಾರಾಗೃಹದ ಮೇಲೆ ದಾಳಿ ನಡೆದಿದೆ.

ಈ ದಾಳಿಯನ್ನು ರೆಗ್ಯುಲರ್ ತಪಾಸಣೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 300 ಕ್ಕೂ ಅಧಿಕ ಮಂದಿ ಒಂದುವರೆ ಗಂಟೆಯಲ್ಲಿ ಈ ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ : ಚರಂಡಿ ನೀರು ಹರಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಗಾಯಾಳುಗಳು ಆಸ್ಪತ್ರೆಗೆ ದಾಖಲು

ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಮಾತನಾಡಿ, ಇದೊಂದು ಜೈಲಿಗೆ ದಿಢೀರ್​ ದಾಳಿ. ಒಟ್ಟಾರೆ ನಾವು ಸುಮಾರು 300 ಪೊಲೀಸ್​ ಸಿಬ್ಬಂದಿಯಿಂದ ಒಂದೂವರೆ ಗಂಟೆ ತಪಾಸಣೆ ಆಗಿದೆ. ಮಾಹಿತಿ ಹಾಗೂ ಏನಾದ್ರು ವಿಚಾರಗಳನ್ನು ತಿಳಿದುಕೊಳ್ಳಲು ನಾವು ರೇಡ್​ ಅನ್ನು ಮಾಡಿದ್ದೇವೆ. ತಪಾಸಣೆಯನ್ನು ನಾವು ಜಸ್ಟ್​ ರೂಟೀನ್​ನಲ್ಲಿ ಮಾಡಿದ್ದೇವೆ.

ಇದನ್ನೂ ಓದಿ : ಕಡಲ ಮೂಲಕ ಅಕ್ರಮ ಮದ್ಯ ಸಾಗಣೆ: 1.50 ಲಕ್ಷ ಮೌಲ್ಯದ ಮದ್ಯ ಜಪ್ತಿ

ಈ ಹಿಂದೆ ಜೈಲಿನೊಳಗೆ ಮಾದಕ ವಸ್ತು (ಗಾಂಜಾ) ಈ ರೀತಿಯ ವಸ್ತುಗಳು ಪತ್ತೆಯಾಗಿದ್ದವು. ಈ ನಿಟ್ಟಿನಲ್ಲಿ ಸ್ಕ್ರೀನಿಂಗ್​ಗೆ ಏನಾದ್ರು ಕ್ರಮ ಕೈಗೊಂಡಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಈಗಾಗಲೇ ನಾವು ಜೈಲ್ ಸುಪಿರಿಯಂಡೆಂಟ್​ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅವರೂ ಕೂಡಾ ತಪಾಸಣೆ ನಡೆಸುತ್ತಿದ್ದಾರೆ. ಅವರ ಬಗ್ಗೆ ಚರ್ಚೆ ಮಾಡಿಸಿದಾಗ, ಅಂತಹದ್ದೇನು ಸಮಸ್ಯೆ ಕಂಡುಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಎಂದು ದೂರು ದಾಖಲಿಸಿದ ಕುಟುಂಬಸ್ಥರು

ಹೊರಗಿನ ವ್ಯಕ್ತಿಗಳು ಬೀಡಿ-ಸಿಗರೇಟ್​ ತರುತ್ತಾರೆ: ನೀವು ಸ್ಕ್ರೀನಿಂಗ್ ಎಲ್ಲವೂ ಕಟ್ಟುನಿಟ್ಟಾಗಿದೆ ಎಂದಿರಿ. ಹಾಗಾದ್ರೆ ಜೈಲಿನೊಳಗೆ ಹೇಗೆ ಬಿಡಿ ಸಿಗರೇಟು ಅಂತಹದ್ದೆಲ್ಲಾ ತಲುಪುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಕಾರಾಗೃಹಕ್ಕೆ ಭೇಟಿ ಮಾಡಲು ಬರುವ ಹೊರಗಿನ ವ್ಯಕ್ತಿಗಳು ಬೀಡಿ-ಸಿಗರೇಟ್​ನ್ನು ತರುತ್ತಾರೆ ಎಂದರು. ಅಲ್ಲದೇ, ಈ ನಿಟ್ಟಿನಲ್ಲಿ ನಾವು ಕಾಲಕಾಲಕ್ಕೆ ನಾವು ಕಾರಾಗೃಹಕ್ಕೆ ಭೇಟಿ ನೀಡಿ ತಪಾಸಣೆಯನ್ನು ಮಾಡುತ್ತೇವೆ. ಈಗಲೂ ತಪಾಸಣೆ ಮಾಡಿದ್ದೇವೆ. ಈಗ ಬೀಡಿ, ಸಿಗರೇಟ್​, ತಂಬಾಕು ಮಾತ್ರ ಸಿಕ್ಕಿದೆ ಎಂದು ತಿಳಿಸಿದರು.

ಇದನ್ನೂ ಓದಿ : ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಿಂದ ಸುಲಿಗೆ; ಪುಲಿಕೇಶಿ ನಗರ ಠಾಣೆಯ ಮತ್ತಿಬ್ಬರು ಕಾನ್​​ಸ್ಟೇಬಲ್ಸ್​​ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.