ETV Bharat / state

ನವಜಾತ ಶಿಶುವಿನ ನಾಲಗೆಯ ಬುಡದಲ್ಲಿ ಸಿಸ್ಟ್: ಮಂಗಳೂರಿನ ವೈದ್ಯರಿಂದ ಶಸ್ತ್ರಚಿಕಿತ್ಸೆ

author img

By

Published : Dec 12, 2022, 9:36 PM IST

Successful surgery by doctors in Mangalore
:ಮಂಗಳೂರಿನ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ನವಜಾತ ಶಿಶುವಿನ ಅಪರೂಪದ ಶಸ್ತ್ರಚಿಕಿತ್ಸೆ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ.

ಮಂಗಳೂರಿನ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಮಂಗಳೂರು: ನವಜಾತ ಶಿಶುವಿನ ಅಂಗಾಂಗದಲ್ಲಿ ದೋಷಗಳು ಕಂಡುಬಂದರೆ ಭಾರಿ ಪ್ರಯಾಸದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಇಂತಹ ಒಂದು ಅಪರೂಪದ ಶಸ್ತ್ರಚಿಕಿತ್ಸೆ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. 24 ದಿನದ ಗಂಡುಮಗು ಸ್ತನ್ಯಪಾನ ಮಾಡುವಾಗ ತೊಂದರೆ ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದು, ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಗು ಉಸಿರಾಡಲು ಕಷ್ಟಪಡುತ್ತಾ ಶ್ವಾಸೋಚ್ಚಾಸ ಮಾಡುವಾಗ, ಎದೆಹಾಲು ಕುಡಿಯುವಾಗ ಮೈ ನೀಲಿ ವರ್ಣಕ್ಕೆ ತಿರುಗುತಿತ್ತು.

ಮಗುವನ್ನು ಇಸಿಜಿ ಮೂಲಕ ಪರೀಕ್ಷಿಸಿದಾಗ ಹೃದಯದಿಂದ ಅಶುದ್ದ ರಕ್ತವನ್ನು ಶ್ವಾಸಕೋಶಗಳಿಗೆ ಕಳುಹಿಸುವ ಪಲ್ಮನರಿ ರಕ್ತನಾಳಗಳ ಒತ್ತಡ ತೀವ್ರವಾಗಿರುವುದು ಕಂಡುಬಂದಿದೆ. ಇಎನ್​ಟಿ ಚಿಕಿತ್ಸಕ ಡಾ.ಗೌತಮ್ ಕುಳವರ್ಮ ಅವರು ಶಿಶುವಿನ ಮೂಗಿನಿಂದ ಶ್ವಾಸನಾಳದವರೆಗೆ ಉಸಿರಾಟದ ದಾರಿಯಲ್ಲಿ ತೊಂದರೆಗಳೇನಾದರೂ ಇವೆಯೇ ಎಂದು ಪರೀಕ್ಷಿಸಿದ್ದಾರೆ. ಅತ್ಯಾಧುನಿಕ ವಿಡಿಯೋ ಎಂಡೋಸ್ಕೋಪಿ ಮೂಲಕ ನೋಡಿದಾಗ ನಾಲಿಗೆಯ ಬುಡದ ಶ್ವಾಸನಾಳದ ಪ್ರವೇಶದ್ವಾರದಲ್ಲಿ ಒಂದು ಸಿಸ್ಟ್ (ನೀರ್ಗುಳ್ಳೆ) ಇರುವುದು ಕಂಡುಬಂದಿದೆ. ಇದನ್ನು ಎಂಆರ್​ಐ ಸ್ಕ್ಯಾನಿಂಗ್ ಮೂಲಕ ಖಚಿತಪಡಿಸಿದ್ದಾರೆ.

ಡಾ.ಗೌತಮ್ ಕುಳವರ್ಮ ಅವರು ಅರಿವಳಿಕೆ ತಜ್ಞರಾದ ಡಾ.ಗುರುರಾಜ ತಂತ್ರಿಯವರ ಸಹಕಾರದೊಂದಿಗೆ ಎಂಡೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ನೀರ್ಗುಳ್ಳೆಯನ್ನು ಯಶಸ್ವಿಯಾಗಿ ಕತ್ತರಿಸಿ ತೆಗೆದಿದ್ದಾರೆ. ನಂತರ ಎ ಜೆ ಆಸ್ಪತ್ರೆಯ ಪೆಥಾಲಜಿಸ್ಟ್ ಡಾ.ಸಂಧ್ಯಾ ಇಳಂತೋಡಿ ಅವರು ಈ ಗುಳ್ಳೆಯನ್ನು ಥೈರೋಗ್ಲೋಸಲ್ ಸಿಸ್ಟ್ ಎಂದು ಖಚಿತಪಡಿಸಿದ್ದಾರೆ.

ಡಾ.ಗೌತಮ್ ಕುಳವರ್ಮ ಮಾತನಾಡಿ, ಈ ರೀತಿಯ ಸಮಸ್ಯೆ ಲಕ್ಷ ಸಂಖ್ಯೆಯಲ್ಲಿ ಇಬ್ಬರು ಮಕ್ಕಳಿಗೆ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಶೇ 40 ರಷ್ಟು ಮರಣದ ಅಪಾಯವಿರುತ್ತದೆ. ಶಿಶು ಗರ್ಭಾಶಯದಲ್ಲಿ ಬೆಳವಣಿಗೆಯ ಹಂತದಲ್ಲಿದ್ದಾಗ ಥೈರಾಯ್ಡ್ ಗ್ರಂಥಿಯ ಕೆಲವು ಕೋಶಗಳು ನಾಲಗೆಯ ಬುಡದಲ್ಲಿ ಉಳಿದುಕೊಂಡು ಈ ರೀತಿಯ ಗುಳ್ಳೆ ಉಂಟಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಂಗಳೂರು ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ.. ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.