ETV Bharat / entertainment

ಅಹಮದಾಬಾದ್ ಹುಡುಗಿ ರಾಗ್ ಪಟೇಲ್​ಗೆ ಆರ್​ಆರ್​ಆರ್ ಸಿನಿಮಾಕ್ಕೆ ಹಾಡಲು ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ? ​ - WHO IS RAG PATEL

author img

By ETV Bharat Karnataka Team

Published : May 17, 2024, 7:11 PM IST

ರಾಜಮೌಳಿ ಅವರ ಆರ್​ಆರ್​ಆರ್ ಸಿನಿಮಾದಲ್ಲಿ ಹಾಡಿ ಜನಪ್ರಿಯತೆ ಗಳಿಸಿರುವ ರಾಗ್ ಪಟೇಲ್​ ಅವರು ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದಾರೆ.

Rag Patel
ರಾಗ್ ಪಟೇಲ್​ (ETV Bharat)

ಅಹಮದಾಬಾದ್‌ (ಗುಜರಾತ್‌) : 'ಅಂಬರ್ ಸೇ ತೋಡಾ ಸೂರಜ್ ವೋ ಪ್ಯಾರಾ, ಅಮ್ಮಾ ಕೆ ಆಂಚಲ್ ಮೇ ಧಕ್ ದಲಾ ಸಾರಾ..' ಈ ಹಾಡಿನ ಸಾಲುಗಳನ್ನು ಕೇಳಿದ ತಕ್ಷಣ ನಮ್ಮ ಕಣ್ಣ ಮುಂದೆ ಹನ್ನೆರಡು ವರ್ಷದ ಬಾಲಕಿಯೊಬ್ಬಳು ಕೆಲವು ಹೆಂಗಸರ ಕೈಗೆ ಗೋರಂಟಿ ಹಚ್ಚಿ ಸುಶ್ರಾವ್ಯವಾಗಿ ಹಾಡುತ್ತಿರುವ ಚಿತ್ರ ಕಾಣಿಸುತ್ತದೆ.

Rag Patel
ಚಿತ್ರಕಲೆಯಲ್ಲಿ ನಿರತರಾಗಿರುವುದು (ETV Bharat)

ಶಾಂತವಾದ ದನಿಯಲ್ಲಿ ಹರಿಯುವ ಈ ಹಾಡಿನ ಸಾಹಿತ್ಯದಲ್ಲಿ ಇಡೀ ಪ್ರಕೃತಿಯೇ ಅದನ್ನು ಕೇಳುತ್ತಾ ಮೈಮರೆತಂತೆ ಕಾಣುತ್ತದೆ. ಮಾರ್ಚ್ 24, 2022 ರಂದು ಬಿಡುಗಡೆಯಾದ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ 'RRR' ಲಕ್ಷಾಂತರ ವೀಕ್ಷಕರ ಹೃದಯವನ್ನು ಗೆದ್ದುಕೊಂಡಿದೆ. ಇಂದು ನಾವು ಈ ಹಾಡನ್ನು ಹಾಡಿರುವ ಗಾಯಕಿ ರಾಗ್ ಪಟೇಲ್ ಅವರೊಂದಿಗೆ ಮಾತನಾಡಿದ್ದೇವೆ. ಅವರಿಗೆ ಈ ಚಿತ್ರಕ್ಕೆ ಹೇಗೆ ಅವಕಾಶ ಸಿಕ್ಕಿತು ಎಂಬುದರ ಬಗ್ಗೆ ಸ್ವತಃ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Rag Patel
ರಾಗ್ ಪಟೇಲ್​ (ETV Bharat)

ರಾಗ್ ಪಟೇಲ್ ಗುಜರಾತ್‌ನ ಅಹಮದಾಬಾದ್‌ನ ನಿವಾಸಿಯಾಗಿದ್ದು, ಕೇವಲ 15 ನೇ ವಯಸ್ಸಿನಲ್ಲಿ ರಾಜಮೌಳಿ ಅವರ ಚಲನಚಿತ್ರದೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇತ್ತೀಚೆಗೆ ತನ್ನ 12 ನೇ ತರಗತಿ ಪರೀಕ್ಷೆಯಲ್ಲಿ 95.04 ಶೇಕಡಾದೊಂದಿಗೆ ಉತ್ತೀರ್ಣರಾಗಿರುವ ಇವರು ಮುಂದೆ ಮನೋವಿಜ್ಞಾನವನ್ನು ಅಧ್ಯಯನ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ART
ರಾಗ್ ಪಟೇಲ್ ಮನೆಯಲ್ಲಿರುವ ಪೇಂಟಿಂಗ್ಸ್​ (ETV Bharat)

ವಿಶೇಷ ಎಂದರೆ ಅವರು ಉತ್ತಮ ಗಾಯಕಿಯಾಗಿರುವುದರ ಜೊತೆಗೆ ಉತ್ತಮ ಚಿತ್ರಕಲಾವಿದರೂ ಹೌದು. ನೀವು ಅವರ ಮನೆಗೆ ಕಾಲಿಟ್ಟಾಗ ಅವರ ಕಲೆ ನಿಮ್ಮನ್ನು ಬೆರಗುಗೊಳಿಸುತ್ತದೆ. ಅವರ ಮನೆಯಲ್ಲಿ ಉತ್ತಮ ಫೋಟೋಗಳನ್ನು ಕಾಣಬಹುದು. ಅವರು ತಮ್ಮ ಹವ್ಯಾಸವನ್ನಾಗಿ ಹಾಡುವುದು ಮತ್ತು ಚಿತ್ರಕಲೆಯನ್ನು ತಮ್ಮ ವೃತ್ತಿಯನ್ನಾಗಿಸಲು ಬಯಸುತ್ತಾರೆ. ಅವರು ಹಾಡನ್ನು ಕಲಿಯಲು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುತ್ತಾರೆ.

art
ರಾಗ್ ಪಟೇಲ್ ಕುಂಚದಲ್ಲಿ ಅರಳಿದ ಚಿತ್ರ (ETV Bharat)

'RRR' ಚಿತ್ರದ ತಂಡವು 12 ವರ್ಷದ ಹುಡುಗಿಯ ಧ್ವನಿಯನ್ನು ಹುಡುಕುತ್ತಿದೆ' ಎಂಬ ಫೇಸ್​ಬುಕ್​ ಪೋಸ್ಟ್​ನ್ನು ರಾಗ್ ಪಟೇಲ್ ಅವರ ತಂದೆ ರಾಜೀವ್ ಪಟೇಲ್ ಗಮನಿಸಿ ತಿಳಿದುಕೊಂಡಿದ್ದಾರೆ. ನಂತರ ತಮ್ಮ ಮಗಳು ಮೂರು ಹಾಡುಗಳನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದಾರೆ. ಒಂದು ತಿಂಗಳ ನಂತರ, ರಾಜಮೌಳಿ ಚಿತ್ರಕ್ಕೆ ರಾಗ್ ಪಟೇಲ್ ಗಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸಂದೇಶ ಬಂದಿದೆ. ಇದಾದ ನಂತರ ಈ ಚಿತ್ರದಿಂದ ರಾಗ್‌ನ ಪಯಣ ಪ್ರಾರಂಭವಾಗಿದೆ.

ART
ಮನೆಯಲ್ಲಿ ಚಿತ್ರ ಬಿಡಿಸುತ್ತಿರುವ ರಾಗ್ ಪಟೇಲ್ (ETV Bharat)

ರಾಗ್ ಪಟೇಲ್ RRR ಚಿತ್ರಕ್ಕೆ ಗಾಯಕರಾಗಿ ಪ್ರವೇಶಿಸಿದ್ದು ಹೇಗೆ?: RRR ಚಿತ್ರದ ಫೇಸ್​ಬುಕ್ ಪೇಜ್​ನಲ್ಲಿ 12 ರಿಂದ 15 ವರ್ಷದ ಹುಡುಗಿಯ ಧ್ವನಿ ಬೇಕು ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿದ ನನ್ನ ತಂದೆ ಮೂರು ಹಾಡುಗಳನ್ನು ರೆಕಾರ್ಡ್ ಮಾಡಿ ಕಳುಹಿಸೋಣ ಎಂದು ಹೇಳಿದರು. ನಾವು ಆಗಸ್ಟ್‌ನಲ್ಲಿ ಹಾಡುಗಳನ್ನು ಕಳುಹಿಸಿದ್ದೆವು ಮತ್ತು ಸೆಪ್ಟೆಂಬರ್‌ನಲ್ಲಿ ನೀವು ಆಯ್ಕೆಯಾಗಿದ್ದೀರಿ ಮತ್ತು ನಾವು ಟಿಕೆಟ್‌ಗಳನ್ನು ಹೈದರಾಬಾದ್‌ಗೆ ಕಳುಹಿಸುತ್ತಿದ್ದೇವೆ ಎಂದು ಕರೆ ಬಂತು. ಇಷ್ಟು ದೊಡ್ಡ ಚಿತ್ರಕ್ಕೆ ಧ್ವನಿ ನೀಡುವುದು ನನಗೆ ದೊಡ್ಡ ವಿಷಯವಾಗಿತ್ತು. ಆಗ ನಾನು ತುಂಬಾ ಸಂತೋಷವಾಗಿದ್ದೆ. ಅಲ್ಲಿಗೆ ಹೋದ ಮೇಲೆ ನನಗೆ ಹುಚ್ಚು ಹಿಡಿದಂತಾಯಿತು ಎಂದರು.

ಯುವಕರು ಬಹಳಷ್ಟು ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಅವರಿಗೆ ಅವರ ಪ್ರತಿಭೆ ಮತ್ತು ಅದನ್ನು ಪ್ರದರ್ಶಿಸಲು ಸರಿಯಾದ ವೇದಿಕೆಯ ಅಗತ್ಯವಿದೆ. ಅದನ್ನು ರಾಗ್ ಪಟೇಲ್ ಪಡೆದುಕೊಂಡರು. ಅಲ್ಲದೇ ಅದನ್ನು ಸ್ವತಃ ಸಾಬೀತುಪಡಿಸಿದರು. ಯುವ ಕಲಾವಿದರಾಗಿ, ರಾಗ್ ಪಟೇಲ್ ಇಂದು ಲಕ್ಷಾಂತರ ಯುವಕರನ್ನು ಪ್ರೇರೇಪಿಸುತ್ತಿದ್ದಾರೆ ಮತ್ತು ದೇಶಾದ್ಯಂತ ಗುಜರಾತ್‌ಗೆ ಕೀರ್ತಿ ತಂದಿದ್ದಾರೆ. 'RRR' ಚಿತ್ರವು ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಮಾತ್ರವಲ್ಲದೇ 'RRR' ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದೆ.

ಇದನ್ನೂ ಓದಿ : Oscars ಅವಾರ್ಡ್ಸ್ 2024: ಈ ವರ್ಷವೂ ಆಸ್ಕರ್​ ಅಂಗಳದಲ್ಲಿ ಸದ್ದು ಮಾಡಿದ ರಾಮ್​ ಚರಣ್​-ಜೂ ಎನ್​ಟಿಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.