ETV Bharat / state

ದ.ಕ. ಜಿಲ್ಲೆಯಲ್ಲಿ ಅಬ್ಬರ ನಿಲ್ಲಿಸಿದ ವರುಣ: ನೇತ್ರಾವತಿ ನದಿ ಪ್ರವಾಹ ಇಳಿಕೆ

author img

By

Published : Aug 11, 2019, 10:46 AM IST

rain-falls-in-dakshina-kannada

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ನೇತ್ರಾವತಿ ನದಿಯಲ್ಲಿ ಉಬ್ಬರವೂ ಇಳಿಕೆಯಾಗಿದೆ. ಶನಿವಾರ ಬೆಳಗ್ಗೆ 11.6 ಮೀಟರ್‌ ದಾಖಲೆ ಏರಿಕೆಯಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯು ಬಳಿಕ 10.7ಮೀ.ನಲ್ಲಿ ಹರಿಯುತ್ತಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ನೇತ್ರಾವತಿ ನದಿ ಪ್ರವಾಹವೂ ಇಳಿಕೆಯಾಗಿದೆ. ಆದರೆ ತಗ್ಗುಪ್ರದೇಶಗಳಲ್ಲಿ ಜಲಾವೃತಗೊಂಡ ಮನೆಗಳಲ್ಲಿನ ನೀರು ಹಾಗೇ ಉಳಿದುಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಬರ ನಿಲ್ಲಿಸಿದ ವರುಣ

ಶನಿವಾರ ಬೆಳಗ್ಗೆ 11.6 ಮೀಟರ್‌ ದಾಖಲೆ ಏರಿಕೆಯಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯು ಬಳಿಕ 10.7ಮೀ.ನಲ್ಲಿ ಹರಿಯುತ್ತಿದೆ. ನೆರೆಯ ಏರಿಕೆ ಪ್ರಮಾಣ ಕಡಿಮೆ ಆಗಿದ್ದರೂ ಜನರಲ್ಲಿ ಇನ್ನೂ ಆತಂಕ ದೂರವಾಗಿಲ್ಲ. ಆದರೆ ಸಂಭಾವ್ಯ ಅಪಾಯಗಳನ್ನು ಎದುರಿಸಲು ರಕ್ಷಣಾ ತಂಡಗಳು, ಎನ್ ಡಿಆರ್​ಎಫ್​ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಶಿರಾಡಿ ಘಾಟ್ ರೈಲು ಮಾರ್ಗದಲ್ಲಿ ಭೂ ಕುಸಿತ ಮುಂದುವರಿದಿದ್ದು, ಪ್ರತಿಕೂಲ ಹವಾಮಾನ ಇರುವುದರಿಂದ ಹಳಿಗಳ ಮೇಲೆ ಬಿದ್ದಿರುವ ಮಣ್ಣು-ಕಲ್ಲುಗಳ ತೆರವು ಸ್ಥಗಿತಗೊಳಿಸಲಾಗಿದೆ. ಸ್ಥಳದಿಂದ ಎಲ್ಲಾ ರೈಲ್ವೆ ಸಿಬ್ಬಂದಿ ಮತ್ತು ಕಾರ್ಮಿಕರನ್ನು ತೆರವು ಮಾಡಲಾಗಿದೆ. ಆ. 23ರವರೆಗೆ ಎಲ್ಲಾ ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, ಹವಾಮಾನ ಇಲಾಖೆಯಿಂದ ಮುಂದಿನ ಸೂಚನೆ ಬಂದ ಬಳಿಕ ಕಾರ್ಯಾಚರಣೆ ನಡೆಸಲಾಗುವುದು ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿ‌ವೋರ್ವರು ಹೇಳಿದ್ದಾರೆ‌.

Intro:ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ನೇತ್ರಾವತಿ ನದಿಯಲ್ಲಿ ಉಬ್ಬರವೂ ಇಳಿಕೆಯಾಗಿದೆ. ಆದರೆ ತಗ್ಗುಪ್ರದೇಶಗಳಲ್ಲಿ ಜಲಾವೃತಗೊಂಡ ಮನೆಗಳಲ್ಲಿನ ನೀರು ಇನ್ನೂ ಇಳಿಕೆಯಾಗಿಲ್ಲ.

ನಿನ್ನೆ ಬೆಳಗ್ಗೆ 11.6 ಮೀಟರ್‌ ದಾಖಲೆ ಏರಿಕೆಯಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯು ಬಳಿಕ 10.7ಮೀ.ನಲ್ಲಿ ಹರಿಯುತ್ತಿದೆ. ನೆರೆಯ ಏರಿಕೆ ಪ್ರಮಾಣ ಕಡಿಮೆ ಆಗಿದ್ದರೂ ಜನರಲ್ಲಿ ಇನ್ನೂ ಆತಂಕ ದೂರವಾಗಿಲ್ಲ. ಆದರೆ ಸಂಭಾವ್ಯ ಅಪಾಯಗಳನ್ನು ಎದುರಿಸಲು ರಕ್ಷಣಾ ತಂಡಗಳು, ಎನ್ ಡಿಆರ್ ಎಫ್ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಶಿರಾಡಿ ಘಾಟ್ ರೈಲು ಮಾರ್ಗದಲ್ಲಿ ಭೂ ಕುಸಿತ ಮುಂದುವರಿಕೆಯಾಗಿದೆ ಪ್ರತಿಕೂಲ ಹವಾಮಾನವಿರುವುದರಿಂದ ಹಳಿಗಳ ಮೇಲೆ ಬಿದ್ದಿರುವ ಮಣ್ಣು-ಕಲ್ಲುಗಳ ತೆರವು ಸ್ಥಗಿತಗೊಳಿಸಲಾಗಿದೆ.

Body:ಸ್ಥಳದಿಂದ ಎಲ್ಲಾ ರೈಲ್ವೇ ಸಿಬ್ಬಂದಿ ಮತ್ತು ಕಾರ್ಮಿಕರನ್ನು ತೆರವುಮಾಡಲಾಗಿದೆ. ಆ. 23ರವರೆಗೆ ಎಲ್ಲಾ ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, ಹವಾಮಾನ ಇಲಾಖೆಯಿಂದ ಮುಂದಿನ ಸೂಚನೆ ಬಂದ ಬಳಿಕ ಕಾರ್ಯಾಚರಣೆ ಮಾಡಲಾಗುವುದು ಎಂದು ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಅಧಿಕಾರಿ‌ ಹೇಳಿದ್ದಾರೆ‌.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.