ETV Bharat / state

ಆಧಾರ್ ಮೂಲಕ ಸೈಬರ್ ಬಳಸಿ ಲಕ್ಷಾಂತರ ರೂಪಾಯಿ ವಂಚನೆ.. ಬಿಹಾರದ ಮೂವರು ಆರೋಪಿಗಳ ಬಂಧನ

author img

By ETV Bharat Karnataka Team

Published : Oct 29, 2023, 6:22 PM IST

arrest three accused from Bihar
ಬಿಹಾರದ ಮೂವರು ಆರೋಪಿಗಳ ಬಂಧನ

ವಿವಿಧ ಬ್ಯಾಂಕ್‌ಗಳಿಂದ AEPS ಮೂಲಕ ಹಣ ವರ್ಗಾಯಿಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಆಧಾರ್ ಮೂಲಕ ಸೈಬರ್ ಬಳಸಿ ವಿವಿಧ ಬ್ಯಾಂಕ್​ಗಳಿಂದ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಪ್ರಕರಣದಡಿ AEPS (Aadhar Enabled Payment System) ಬಿಹಾರದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಿಹಾರ ರಾಜ್ಯದ ಸುಪೌಲ್ ನ ದೀಪಕ್ ಕುಮಾರ್ ಹೆಂಬ್ರಮ್ (33) ಅರಾರಿ ಜಿಲ್ಲೆಯ ವಿವೇಕ್ ಕುಮಾರ್ ಬಿಶ್ವಾಸ್ (24) ಮದನ್ ಕುಮಾರ್ (23) ಬಂಧಿತರು. 6 ತಿಂಗಳಿನ ಅವಧಿಯಲ್ಲಿ ಮಂಗಳೂರು ನಗರದ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೋಂದಣಿ ಮಾಡಿದ ಬಳಿಕ ನೋಂದಣಿದಾರರ ಹಣವು ಇತ್ತೀಚೆಗೆ 2 ತಿಂಗಳ ಅವಧಿಯಲ್ಲಿ ಅವರು ಹೊಂದಿರುವ ವಿವಿಧ ಬ್ಯಾಂಕ್‌ಗಳಿಂದ AEPS (Aadhar Enabled Payment System) ಮೂಲಕ ವರ್ಗಾವಣೆಯಾಗಿರುವ ಬಗ್ಗೆ ಮಂಗಳೂರು ನಗರದ ಸೆನ್ ಕೈಂ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿವೆ.

ಮಂಗಳೂರು ಪೊಲೀಸರು ಈ ಪ್ರಕರಣದ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಅ.22 ರಂದು ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯ ಶೂರ್ನಿಯಾ ಎಂಬ ಪ್ರದೇಶದಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಆಸ್ತಿ ನೋಂದಣಿಗೆ ಸಂಬಂಧಿಸಿದ ಕಾವೇರಿ-2.0 ವೆಬ್​ಸೈಟ್ ನಿಂದ ದಾಖಲಾತಿಗಳನ್ನು ಆಕ್ರಮವಾಗಿ ಪಡೆದು ಅದರಲ್ಲಿರುವ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳ ಗುರುತನ್ನು ಸಂಗ್ರಹಿಸಿ ಬೆರಳು ಮುದ್ರೆಯನ್ನು ಸ್ಕ್ಯಾನ್ ಮಾಡಿ ದೂರುದಾರರು ಹೊಂದಿರುವ ಬ್ಯಾಂಕ್‌ ಖಾತೆಗಳಿಂದ ಹಣವನ್ನು ಆರೋಪಿಗಳು ತಮ್ಮ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದರು.

ಹಣದ ವಹಿವಾಟು ಸ್ಥಗಿತ : ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್ ಖಾತೆಗಳಲ್ಲಿರುವ ರೂಪಾಯಿ 3,60,242/- ನ್ನು ವಹಿವಾಟು ಸ್ಥಗಿತಗೊಳಿಸಲಾಗಿರುತ್ತದೆ. ಆರೋಪಿಗಳಿಂದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ 1000 ಕ್ಕೂ ಹೆಚ್ಚು ನೋಂದಣಿ ಪತ್ರಗಳ PDF ಮತ್ತು ಆಂಧ್ರಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳ 300 ಕ್ಕೂ ಹೆಚ್ಚು ಪತ್ರಗಳ PDF ಪ್ರತಿಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

ಹೆಚ್ಚುವರಿ ತನಿಖೆಗಾಗಿ ಆರೋಪಿಗಳನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ಮಾಡಿ ಇನ್ನೂ ಹೆಚ್ಚಿನ ದಾಖಲಾತಿಗಳನ್ನು ಸಂಗ್ರಹಿಸಲು ಶೋಧಿಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್​​​​​ವಾಲ್ ತಿಳಿಸಿದ್ದಾರೆ.

ಇದನ್ನೂಓದಿ:ಬೆಂಗಳೂರು: ಮಹಿಳಾ ಉದ್ಯಮಿಗೆ ₹74 ಲಕ್ಷ ಹಣ ವಂಚನೆ, ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.