ETV Bharat / state

ಗೃಹಸಚಿವರು ವಿಎಚ್​ಪಿ ಮುಖಂಡನಿಗೆ ಹೇಳಿದ ವಿಷಯ ಎಲ್ಲೆಡೆ ವೈರಲ್​!

author img

By

Published : Aug 13, 2020, 9:53 PM IST

Updated : Aug 13, 2020, 10:46 PM IST

ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದ್ರು. ಆ ವೇಳೆ ಗೃಹ ಸಚಿವರು ಮಾತನಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ.

Home minister
ಗೃಹಸಚಿವರು ವಿಎಚ್​ಪಿ ಮುಖಂಡನಿಗೆ ಹೇಳಿದ ಗುಟ್ಟು ರಟ್ಟು

ಮಂಗಳೂರು: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ವಿಶ್ವ ಹಿಂದು ಪರಿಷತ್​ ಮುಖಂಡ ಶರಣ್ ಪಂಪ್ ವೆಲ್ ಅವರು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ನೀಡುವ ವೇಳೆ ಯ ಸಂಭಾಷಣೆಯ ದೃಶ್ಯ ಎಲ್ಲೆಡೆ ವೈರಲ್​ ಆಗಿದೆ.

ವಿಎಚ್​ಪಿ ಮುಖಂಡರಿಂದ ಗೃಹಸಚಿವರ ಭೇಟಿ

ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಎನ್​ಐಎ ತನಿಖೆ ನಡೆಸಬೇಕು. ಎಸ್​ಡಿಪಿಐಯನ್ನು ನಿಷೇಧಿಸಬೇಕು ಎಂದು ಮನವಿಯನ್ನು ಸಲ್ಲಿಸಿದ್ದರು. ಇದರ 7 ಸೆಕೆಂಡ್ ವಿಡಿಯೋವನ್ನು ವಿಎಚ್​ಪಿ ಮಾಧ್ಯಮ ವಿಭಾಗ ಗ್ರೂಪಿನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಗೃಹಸಚಿವರು ಶರಣ್ ಪಂಪ್ ವೆಲ್ ಅವರಿಗೆ ಹೇಳಿದ ಮಾತು ಎಲ್ಲೆಡೆ ಈಗ ಸದ್ದು ಮಾಡುತ್ತಿದೆ.

ನಿಮ್ಮ ಮೇಲೆ ಯಾವುದೇ ಕೇಸ್ ಹಾಕಿದ್ರೂ ತೆಗೆದುಹಾಕ್ತೀವಿ ಎಂದು ಗೃಹಸಚಿವರು ವಿಎಚ್​ಪಿ ಮುಖಂಡ ಶರಣ್ ಪಂಪ್ ವೆಲ್​ಗೆ ಹೇಳುತ್ತಿರುವುದು ಈ ವಿಡಿಯೋದಲ್ಲಿದೆ.

Last Updated :Aug 13, 2020, 10:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.