ETV Bharat / state

ಕುಕ್ಕರ್ ಸ್ಫೋಟ ಕೇಸ್​.. ರಿಕ್ಷಾ ಚಾಲಕನಿಗೆ ಗುರು ಬೆಳದಿಂಗಳು ಸಂಸ್ಥೆಯಿಂದ ಮನೆ ಹಸ್ತಾಂತರ.. ಇನ್ನೂ ಸಿಗದ ಸರ್ಕಾರದ ಪರಿಹಾರ

author img

By

Published : Mar 22, 2023, 7:43 PM IST

Renovation house distributed to Purushottama Pujari
ಪುರುಷೋತ್ತಮ ಪೂಜಾರಿಗೆ ನವೀಕರಣ ಮನೆ ಹಸ್ತಾಂತರ

ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ, ಅವರ ಮನೆಯನ್ನು ಗುರು ಬೆಳದಿಂಗಳು ಸಂಸ್ಥೆಯು ನವೀಕರಣಗೊಳಿಸಿ ಬುಧವಾರ ಹಸ್ತಾಂತರ ಮಾಡಿದೆ.

ಪುರುಷೋತ್ತಮ ಪೂಜಾರಿಗೆ ನವೀಕರಣ ಮನೆ ಹಸ್ತಾಂತರ

ಮಂಗಳೂರು: ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಯನ್ನು ಗುರು ಬೆಳದಿಂಗಳು ಸಂಸ್ಥೆಯೂ ನವೀಕರಣ ಮಾಡಿ ಹಸ್ತಾಂತರಿಸಿದೆ. ನವೆಂಬರ್ 19 ರಂದು ಮಂಗಳೂರು ನಗರದ ಗರೋಡಿಯಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತು. ಈ ರಿಕ್ಷಾ ಚಲಾಯಿಸುತ್ತಿದ್ದ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ತಕ್ಷಣ ಆವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಗುರು ಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಅವರು ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ನವೀಕರಣ ಮಾಡಿಕೊಡುವ ಭರವಸೆಯನ್ನು ನೀಡಿದ್ದರು. ಅದರಂತೆ ನವೀಕರಣ ಮಾಡಲಾಗಿದ್ದ ಮನೆಯನ್ನು ಬುಧವಾರ ಅವರು ಪುರುಷೋತ್ತಮ ಪೂಜಾರಿ ಅವರಿಗೆ ಹಸ್ತಾಂತರ ಮಾಡಲಾಯಿತು.

ನಗರದ ಪಂಪ್​​ವೆಲ್ ನ ಉಜ್ಜೋಡಿಯಲ್ಲಿ ಈ ಮನೆ ಇದೆ. ಅದರ ನವೀಕರಣಕ್ಕೆ ಸುಮಾರು 6 ಲಕ್ಷ ರೂ ವೆಚ್ಚವನ್ನು ಗುರು ಬೆಳದಿಂಗಳು ಸಂಸ್ಥೆ ಮಾಡಿದೆ. ಇದು ಗುರು ಬೆಳದಿಂಗಳು ಸಂಸ್ಥೆಯಿಂದ ನವೀಕರಣ ಮಾಡಿರುವ ಆರನೇ ಮನೆ. ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಧರ್ಮಗುರು ಬಿ ಜೆ ಕ್ರಾಸ್ತಾ, ಮಾಜಿ ರಾಜ್ಯಸಭೆ ಸದಸ್ಯ ಮೊಹಮ್ಮದ್, ಇಂಡಿಯಾನ ಆಸ್ಪತ್ರೆ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಯೂಸುಫ್ ಆಲಿ ಕುಂಬ್ಳೆ, ಉದ್ಯಮಿ ರೋಹನ್ ಮೊಂತೆರೋ, ಗುರುಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.

ಗುರು ಬೆಳದಿಂಗಳು ಸಂಸ್ಥೆ ಮನೆ ನವೀಕರಣ:ಈ ಸಂದರ್ಭದಲ್ಲಿ ಮಾತನಾಡಿದ ಪುರುಷೋತ್ತಮ ಪೂಜಾರಿ ಅವರು, ನಾನು ಆಸ್ಪತ್ರೆಯಲ್ಲಿದ್ದಾಗ ನನಗೆ ಮನೆ ನವೀಕರಣ ಮಾಡಿಕೊಡುವ ಭರವಸೆಯನ್ನು ಗುರುಬೆಳದಿಂಗಳು ಸಂಸ್ಥೆಯವರು ನೀಡಿದ್ದರು. ಅದರಂತೆ ಆ ಸಂಸ್ಥೆಯಿಂದ ಮನೆ ನವೀಕರಣ ಮಾಡಿ ನೀಡಿರುವುದು ಖುಷಿ ತಂದಿದೆ ಎಂದರು.

ಗುರು ಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಮಾತನಾಡಿ, ಪುರುಷೋತ್ತಮ ಪೂಜಾರಿ ತೀವ್ರವಾಗಿ ಎದೆಗುಂದಿದ್ದರು. ಮನೆ ಶಿಥಿಲಾವಸ್ಥೆಯಲ್ಲಿತ್ತು. ಮಗಳ ಮದುವೆ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಆತ್ಮಸ್ಥೈರ್ಯ ತುಂಬಲು ಮನೆ ನವೀಕರಣ ಮಾಡಿ ಕೊಡುವ ಭರವಸೆ ನೀಡಿದ್ದೆವು. ದೇವರ ಅನುಗ್ರಹದಿಂದ ಮನೆ ನವೀಕರಣ ಕೆಲಸ ನಡೆದಿದೆ ಎಂದರು.

ಸರಕಾರದಿಂದ ಪರಿಹಾರ ಇನ್ನೂ ಸಿಕ್ಕಿಲ್ಲ : ಕುಕ್ಕರ್ ಬಾಂಬ್ ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದ ಪುರುಷೋತ್ತಮ ಪೂಜಾರಿ ಅವರಿಗೆ ಸರ್ಕಾರದಿಂದ ಇನ್ನೂ ಕೂಡ ಪರಿಹಾರ ಸಿಕ್ಕಿಲ್ಲ. ಘಟನೆ ನಡೆದು ನಾಲ್ಕು ತಿಂಗಳಾದರೂ ಇನ್ನೂ ಪರಿಹಾರವನ್ನು ಘೋಷಿಸಿಲ್ಲ. ಚಿಕಿತ್ಸಾ ವೆಚ್ಚಕ್ಕೂ ಸರಕಾರ ಹಣ ನೀಡಿಲ್ಲ. ಪುರುಷೋತ್ತಮ ಪೂಜಾರಿ ಅವರ ಮಗಳ ಇಎಸ್ಐ ನಿಂದ ಚಿಕಿತ್ಸಾ ವೆಚ್ಚವನ್ನು ನೀಡಲಾಗಿದೆ.

ಈ ಬಗ್ಗೆ ಮಾತನಾಡಿದ ಪುರುಷೋತ್ತಮ ಪೂಜಾರಿ ಅವರು, ನಮಗೆ ಸರ್ಕಾರದ ಯಾವುದೇ ಪರಿಹಾರ ಬಂದಿಲ್ಲ. ಎಂಟು ಲಕ್ಷ ರೂ ಚಿಕಿತ್ಸಾ ವೆಚ್ಚವಾಗಿದೆ. ಅದನ್ನು ತೆಗೆಸಿಕೊಡುತ್ತೇವೆ ಎಂದು ಹೇಳಿದ್ದಾರೆ.ಆದರೆ ಅದನ್ನು ಇನ್ನೂ ಮಾಡಿಲ್ಲ. ಎರಡು ಲಕ್ಷ ರೂ ಆಸ್ಪತ್ರೆ ಬಿಲ್ ಬಾಕಿ ಇದೆ.ಎರಡು ದಿವಸಕ್ಕೊಮ್ಮೆ ಪಿಸಿಯೋಥೆರಪಿಗೆಂದು ರೂ 500 ಖರ್ಚು ಮಾಡಬೇಕು. ಅದನ್ನೆಲ್ಲ ನಾವು ಕೊಡಬೇಕು. ಎಷ್ಟು ಹಣ ಇದ್ದರೂ ಮದ್ದಿಗೆ ಸಾಕಾಗುವುದಿಲ್ಲ ಎಂದರು.

ಗುರುಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಮಾತನಾಡಿ ಪುರುಷೋತ್ತಮ ಪೂಜಾರಿ ಅವರಿಗೆ ಸರ್ಕಾರದಿಂದ ಒಂದು ಪೈಸೆಯ ಪರಿಹಾರ ವನ್ನು ಇವತ್ತಿನವರೆಗೆ ಘೋಷಿಸಿಲ್ಲವೆಂದರೆ ಸರ್ಕಾರದ ಮೇಲೆ ಜನರಿಗೆ ಹೇಗೆ ನಂಬಿಕೆ ಬರುತ್ತದೆ. ಸರ್ಕಾರ ಉತ್ತರ ಕೊಡಬೇಕಾದ ಅನಿವಾರ್ಯತೆ ಇದೆ. ಘಟನೆ ಆಗಿ ನಾಲ್ಕು ತಿಂಗಳು ಕಳೆಯಿತು. ಐದು ಲಕ್ಷ ರೂ. ಕೊಡಲು ಇಷ್ಟು ಸಮಯ ಬೇಕಾ?. ಚಿಕಿತ್ಸಾ ವೆಚ್ಚ ಪೂರ ಭರಿಸುತ್ತೇವೆ ಎಂದು ಹೇಳಿದ್ದಾರೆ.

ಆದರೆ ಅವರ ಮಗಳು ಇಎಸ್ಐ ನಿಂದ ಚಿಕಿತ್ಸಾ ವೆಚ್ಚ ಪಡೆದರು. ಅದನ್ನು ಮರಳಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಪತ್ರ ಬರೆದು ಕೊಟ್ಟಿದ್ದರು. ಆದರೆ ಮೂರು ದಿನಗಳ ಬಳಿಕ ಪುರುಷೋತ್ತಮ ಪೂಜಾರಿ ಅವರ ಮಗಳನ್ನು ಕರೆಸಿ ಹತ್ತು ಲಕ್ಷ ರೂ. ವರೆಗೆ ಇಎಸ್ಐನಿಂದ ಭರಿಸುವಂತೆ, ಅದರ ಬಳಿಕದ ವೆಚ್ಚ ಸರ್ಕಾರದಿಂದ ನೀಡುವುದಾಗಿ ತಿಳಿಸಿದ್ದಾರೆ. ಇದು ಖಂಡಿಸಬೇಕಾದ ವಿಚಾರ. ಅವರಿಗೆ ಸರ್ಕಾರದಿಂದ ಪರಿಹಾರವನ್ನು ಮತ್ತು ಚಿಕಿತ್ಸಾ ವೆಚ್ಚವನ್ನು ನೀಡಿಲ್ಲ ಎಂದು ಆರೋಪಿಸಿದರು.

ಇದನ್ನೂಓದಿ:ಕೃಷ್ಣಾ ನದಿಯಲ್ಲಿ ಭಕ್ತರ ಪುಣ್ಯಸ್ನಾನ: ಯುಗಾದಿಯ ಹೊಸ ವರ್ಷಕ್ಕೆ ಪಲ್ಲಕ್ಕಿ, ಉತ್ಸವಮೂರ್ತಿ ಶುದ್ಧೀಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.