ETV Bharat / state

ಅಂತರ್ಜಾತಿ ವಿವಾಹಕ್ಕೆ ಮೂಕ ಹಕ್ಕಿಗಳ ಸಾಕ್ಷಿ.. ಕುವೆಂಪು ಆಶಯದಂತೆ ಮಂತ್ರಮಾಂಗಲ್ಯ..

author img

By

Published : Jun 15, 2021, 10:03 PM IST

Updated : Jun 15, 2021, 10:40 PM IST

ಮೂಕ ಹಕ್ಕಿಗಳು
ಮೂಕ ಹಕ್ಕಿಗಳು

ಸೌಮ್ಯ SSLC ಮುಗಿಸಿ ಮೈಸೂರಿನಲ್ಲಿ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಆರ್ಕಿಟೆಕ್ ಪದವಿ ಮುಗಿಸಿದ್ದಾರೆ. ಪರಶುರಾಮ ಕೂಡ SSLC ಮುಗಿಸಿ ರಿಲಯನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಜಾತಿ, ಧರ್ಮ, ಪಂಥ, ಪ್ರತಿಷ್ಠೆಯನ್ನು ಬಿಟ್ಟು ಕುವೆಂಪು ಅವರ ಮಂತ್ರ ಮಾಂಗಲ್ಯ ಮೂಲಕ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ..

ಚಿತ್ರದುರ್ಗ: ಶ್ರವಣ ದೋಷವುಳ್ಳ ಜೋಡಿಯೊಂದು ಪೋಷಕರ ಸಹಕಾರದೊಂದಿಗೆ ಅಂತರ್ಜಾತಿ ವಿವಾಹ ಮಾಡಿಕೊಂಡು ಹೊಸಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಜಾತಿ ದೊಡ್ಡದಲ್ಲ ಎರಡು ಮನಸ್ಸುಗಳು ಮುಖ್ಯ ಎಂದು ತೋರಿಸಿದ್ದಾರೆ.

ದಾವಣಗೆರೆಯ ಭಗತ್ ಸಿಂಗ್ ನಗರದ ಮಂಜಣ್ಣ ಮತ್ತು ಯಮುನಮ್ಮ ಎಂಬ ದಂಪತಿ ಪುತ್ರ ಪರುಶುರಾಮ ಎಂಬುವರು ವರ. ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದ ಮಂಜುನಾಥ ಮತ್ತು ಮಂಗಳಮ್ಮರ ದಂಪತಿಯ ಪುತ್ರಿ ಸೌಮ್ಯ ಎಂಬುವರು ವಧುವಾಗಿದ್ದಾರೆ. ಇವರು ಕಿವುಡ ಮತ್ತು ಮೂಕ ನವದಂಪತಿ. ಇವರ ವಿವಾಹ ಮಹೋತ್ಸವವನ್ನು ವಧುವಿನ ಗ್ರಾಮವಾದ ಸಿದ್ದಾಪುರದಲ್ಲಿ ಸಂಭ್ರಮದಿಂದ ಮಾಡಲಾಯಿತು.

Inter cast marriage of Dumb and Duff couple
ಶ್ರವಣ ದೋಷವುಳ್ಳ ಜೋಡಿ ಅಂರ್ತಜಾತಿ ವಿವಾಹ
Inter cast marriage of Dumb and Duff couple
ಶ್ರವಣ ದೋಷವುಳ್ಳ ಜೋಡಿ ಅಂರ್ತಜಾತಿ ವಿವಾಹ

ವರನ ತಂದೆ,ತಾಯಿ ಸ್ವಜಾತಿಯಲ್ಲಿ ಸಾಕಷ್ಟು ವಧುವನ್ನು ನೋಡಿದ್ರೂ, ಸಂಬಂಧಿಕರು ಸಹ ಯಾರು ಹುಡುಗಿಯನ್ನು ಕೊಟ್ಟು ಮದುವೆ ಮಾಡಲು ಮುಂದೆ ಬರಲಿಲ್ಲ. ಇಂತಹ ಸಮಯದಲ್ಲಿ ಇವರ ವಿವಾಹಕ್ಕೆ ಬೆಂಬಲವಾಗಿ ನಿಂತವರು ದಾವಣಗೆರೆ ಭಗತ್ ಸಿಂಗ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಿಕಿ ಸುಜಾತ. ಸೌಮ್ಯಳ ಪೋಷಕರ ಮನವೊಲಿಸಿ ನೇಕಾರರು-ಕುರುಬ ಸಾಮುದಾಯದಲ್ಲಿ ಸಂಬಂಧ ಬೆಳೆಸಿದರು.

ವಿವಾಹ ಮಹೋತ್ಸವವನ್ನು ವಧುವಿನ ಗ್ರಾಮವಾದ ಸಿದ್ದಾಪುರದಲ್ಲಿ ಸಂಭ್ರಮದಿಂದ ಮಾಡಲಾಯಿತು

ಸೌಮ್ಯ SSLC ಮುಗಿಸಿ ಮೈಸೂರಿನಲ್ಲಿ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಆರ್ಕಿಟೆಕ್ ಪದವಿ ಮುಗಿಸಿದ್ದಾರೆ. ಪರಶುರಾಮ ಕೂಡ SSLC ಮುಗಿಸಿ ರಿಲಯನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಜಾತಿ, ಧರ್ಮ, ಪಂಥ, ಪ್ರತಿಷ್ಠೆಯನ್ನು ಬಿಟ್ಟು ಕುವೆಂಪು ಅವರ ಮಂತ್ರ ಮಾಂಗಲ್ಯ ಮೂಲಕ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಕಂದಿಕೆರೆ ಹಾಗೂ ಗ್ರಾಮಸ್ಥರು ನವ ಜೋಡಿಗೆ ಶುಭ ಹಾರೈಸಿದರು.

Last Updated :Jun 15, 2021, 10:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.