ETV Bharat / state

ಕೊರೊನಾ ವೈರಸ್​ನ ಹೊಡೆತಕ್ಕೆ ಕಾಫಿನಾಡಿನ ರೈತರು ಕಂಗಾಲು

author img

By

Published : Apr 11, 2020, 5:45 PM IST

ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗಿದ್ದು, ಮಾರುಕಟ್ಟೆಗೆ ಸಾಗಿಸಲಾಗಿದೇ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Chikkamagaluru District
ಕೊರೊನಾ ವೈರಸ್​ನ ಹೊಡೆತಕ್ಕೆ ಕಾಫಿನಾಡಿನಲ್ಲಿ ರೈತರು ಕಂಗಾಲು

ಚಿಕ್ಕಮಗಳೂರು: ಕೊರೊನಾ ವೈರಸ್​ನ ಹೊಡೆತಕ್ಕೆ ಚಿಕ್ಕಮಗಳೂರಿನ ಕೆಲ ರೈತರು ಬೀದಿಗೆ ಬೀಳುವಂತಾಗಿದೆ.

ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಣ್ಣೀರು ಹಾಕುತ್ತಿದ್ದು, ಕೋಸು ಸಾಗಿಸಲಾಗದೇ ಹೊಲದಲ್ಲೇ ಭಕ್ತರಹಳ್ಳಿಯ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲದಲ್ಲೇ ಸುಮಾರು ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗುತ್ತಿದೆ. ಮಾರುಕಟ್ಟೆಗೆ ಸಾಗಿಸಲಾಗಿದೆ ಕೋಸು ಮಣ್ಣುಪಾಲು ಆಗುತ್ತಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ನೋವು ಹಾಗೂ ಅಸಹಾಯಕತೆ ಕಾಣಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.