ETV Bharat / state

ಕಟೀಲ್​ ಕಚೇರಿಗೆ ಪಿಎಫ್​ಐ ಕಾರ್ಯಕರ್ತರ ಮುತ್ತಿಗೆ: ಸಿ.ಟಿ.ರವಿ ಖಂಡನೆ

author img

By

Published : Dec 26, 2020, 3:58 PM IST

CT Ravi
ಸಿ.ಟಿ ರವಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ನಳೀನ್ ಕುಮಾರ್ ಕಟೀಲ್ ಕಚೇರಿಗೆ ಸಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿರುವುದನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಖಂಡಿಸಿದ್ದಾರೆ.

ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಕಚೇರಿಯ ಮೇಲೆ ಪಿಎಫ್​ಐ ಕಾರ್ಯಕರ್ತರು ಮುತ್ತಿಗೆ ಹಾಕಿರುವುದನ್ನು ಖಂಡಿಸುವುದಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

'ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಮಾಡಬಾರದು ಎಂದು ಹೇಳುವುದಕ್ಕೆ ಅವರಿಗೆ ಏನು ಅಧಿಕಾರವಿದೆ?. ಅಕ್ರಮ ಹಣ ಚಲಾವಣೆ ಮಾಡಲು ಬರುತ್ತೆ, ಇಡಿ ತನಿಖೆ ಮಾಡಬಾರದಾ?. ಸಿಎಎ ಪ್ರತಿಭಟನೆಗೆ ದೇಶ- ವಿದೇಶದಿಂದ ನೂರಾರು ಕೋಟಿ ಅಕ್ರಮ ಹಣ ಬಂದಿದೆ ಎಂಬ ಮಾಹಿತಿ ಮೇಲೆ ಅವರ ಅಕ್ರಮದ ಜಾಡು ಹಿಡಿದು ಇಡಿ ತನಿಖೆ ಮಾಡಿದರೆ ಏನು ಕಷ್ಟ?. ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬ ರೀತಿಯಲ್ಲಿ ಪಿಎಫ್ಐ ಯಾಕೆ ಆಡಬೇಕು' ಎಂದರು.

ಅಕ್ರಮ ಹಣ ವರ್ಗಾವಣೆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ಅವರ ಉದ್ದೇಶ ಹಾಗೂ ದುರುದ್ದೇಶದ ಬಗ್ಗೆ ಜಗತ್ತಿಗೆ ತಿಳಿಸುವ ಕೆಲಸ ಮಾಡುತ್ತೆ. ಯಾವುದೇ ರೀತಿಯ ಅಕ್ರಮಗಳು ಇಲ್ಲಿ ನಡೆಯೋದಿಲ್ಲ, ಬಾಲ ಬಿಚ್ಚಿ ಮೆರೆಯೋ ಕಾಲವೂ ಈಗ ಇಲ್ಲ. ಬಾಲ ಬಿಚ್ಚಿ ಮೆರೆಯಲು ಹೊರಟರೆ ಬಾಲ ಮಾತ್ರವಲ್ಲ, ತಲೆಯನ್ನೂ ಕಟ್​ ಮಾಡುತ್ತೇವೆ ಎಂದು ಹೇಳಿದರು.

ಓದಿ: ಸಂಸದ ಕಟೀಲ್​ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಿಎಫ್ಐ ಕಾರ್ಯಕರ್ತರು ಪೊಲೀಸ್ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.