ETV Bharat / state

ಬೆಳೆದ ಬೆಳೆಗೆ ಸಿಗದ ಬೆಲೆ.. ಮೂರು ಟನ್​ ಟೊಮೇಟೊ ರಸ್ತೆಗೆ ಸುರಿದ ರೈತ!

author img

By

Published : Apr 17, 2021, 6:38 PM IST

tomatoes
ಟೊಮೇಟೋ

ಸಮೃದ್ಧವಾಗಿ ಬೆಳೆ ಬಂದು ಟೊಮೇಟೊ ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡೊಯ್ದರೆ ಖರೀದಿಸುವ ವರ್ತಕರೇ ಬಂದಿರಲಿಲ್ಲ. ಇದರಿಂದ ಬೇಸತ್ತ ರೈತ ರವಿ ಸುಮಾರು 250 ಕ್ರೇಟ್​ಗಳಷ್ಟು ಟೊಮೇಟೊ ರಸ್ತೆ ಬದಿಗೆ ಸುರಿದು ಹೋಗಿದ್ದಾರೆ.

ಚಿಕ್ಕಮಗಳೂರು: ಸಾವಿರಾರು ರೂಪಾಯಿ ಖರ್ಚು ಮಾಡಿ ಟೊಮೇಟೊ ಬೆಳೆದು ಮಾರುಕಟ್ಟೆಗೆ ತಂದರೆ ಅಲ್ಲಿ ಖರೀದಿಸುವ ವ್ಯಾಪಾರಿಗಳೇ ಇಲ್ಲ ಎಂದು ರೈತನೋರ್ವ ಮೂರು ಟನ್ ಟೊಮೇಟೊ ಕೆರೆಯ ಬದಿಗೆ ತಂದು ಸುರಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಮೂರು ಟನ್​ ಟೊಮೇಟೊ ರಸ್ತೆಗೆ ಸುರಿದ ರೈತ

ಜಿಲ್ಲೆಯ ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ಎಂ.ಹೆಚ್.ರವಿ ಮುಕ್ಕಾಲು ಎಕರೆ ಜಮೀನಿನಲ್ಲಿ 4 ಸಾವಿರ ಟೊಮೇಟೊ ಗಿಡ ಹಾಕಿದ್ದರು. ಸಮೃದ್ಧವಾಗಿ ಬೆಳೆ ಬಂದು ಟೊಮೇಟೊ ಹಣ್ಣುಗಳು ಕೊಯ್ಲಿಗೆ ಬಂದಾಗ ಮೊದಲ ಸುತ್ತಿನ ಕೊಯ್ಲಿಗೆ ಮೂರು ಟನ್​ಗಳಷ್ಟು ಇಳುವರಿ ಸಿಕ್ಕಾಗ ಸಹಜವಾಗಿಯೇ ಸಂತಸಗೊಂಡ ರವಿ ಹಣ್ಣಿನ ಕ್ರೇಟ್​​ಗಳನ್ನು ಕಡೂರು ಎಪಿಎಂಸಿಗೆ ಕೊಂಡೊಯ್ದರು. ಆದರೆ, ಖರೀದಿಸುವ ವರ್ತಕರೇ ಬಂದಿರಲಿಲ್ಲ. ಇದರಿಂದ ಬೇಸತ್ತ ರೈತ ರವಿ ಸುಮಾರು 250 ಕ್ರೇಟ್​ಗಳಷ್ಟು ಟೊಮೇಟೊ ರಸ್ತೆ ಬದಿಗೆ ಸುರಿದು ಹೋಗಿದ್ದಾರೆ.

2 ಸಾವಿರ ಟೊಮೇಟೊ ಗಿಡಗಳನ್ನು ನಾಟಿ ಮಾಡಿದ್ದೆ. ಬೇಸಾಯ, ಔಷಧ, ಗೊಬ್ಬರ, ಗೂಟ, ದಾರ ಕಟ್ಟಲು ಹೀಗೆ ಸುಮಾರು 50 ಸಾವಿರ ರೂ. ಖರ್ಚು ಮಾಡಿದ್ದೇನೆ. ಮಾರುಕಟ್ಟೆಗೆ ಹೋದರೆ ಖರೀದಿಸುವ ವರ್ತಕರೇ ಇಲ್ಲ. ಖರ್ಚು ಮಾಡಿದಷ್ಟಾದರೂ ವಾಪಸ್​​ ಬಂದಿದ್ದರೆ ಸಮಾಧಾನವಿರುತ್ತಿತ್ತು. ಆದರೆ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ರೈತ ರವಿ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ಸದ್ಯಕ್ಕೆ ಸಿಬಿಐ ತನಿಖೆ ಅಗತ್ಯವಿಲ್ಲವೆಂದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.