ETV Bharat / state

ಮರಣೋತ್ತರ ಪರೀಕ್ಷೆಗೂ ಸಾಧ್ಯವಾಗದ ರೂಪದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!

author img

By

Published : Oct 15, 2019, 4:21 AM IST

Updated : Oct 15, 2019, 7:01 AM IST

ಪರೀಕ್ಷೆಗೂ ಸಾಧ್ಯವಾಗದ ರೂಪದಲ್ಲಿ ಅಪರಿಚಿತ ದೇಹ ಪತ್ತೆ

ರಾಷ್ಟೀಯ ಹೆದ್ದಾರಿ 7ರ ಪಕ್ಕ ಇರುವ ಗ್ರೀನ್ ಡಾಬಾದ ಹಿಂಬದಿಯಲ್ಲಿ ಗುರುತಿಗೆ ಸಿಗದ ರೀತಿಯಲ್ಲಿ ಶವವೊಂದು ಪತ್ತೆಯಾಗಿದೆ. ಸುಮಾರು 45 ವರ್ಷದ ಪುರುಷನ ದೇಹವು ಇದಾಗಿದೆ ಎಂದು ಊಹಿಸಲಾಗಿದೆ. ದೇಹದ ಶೇಕಡಾ 90ರಷ್ಟು ಭಾಗ ಪ್ರಾಣಿಗಳು ತಿಂದಿದ್ದು, ಇನ್ನು ಶೇ. 10ರಷ್ಟು ಮಾತ್ರ ಉಳಿದಿದೆ.

ಚಿಕ್ಕಬಳ್ಳಾಪುರ: ಬಾಗೇಪಲ್ಲಿಯ ಗ್ರೀನ್ ಡಾಬಾದ ಹಿಂಭಾಗದಲ್ಲಿ ಮರಣೋತ್ತರ ಪರೀಕ್ಷೆಗೂ ಸಾಧ್ಯವಾಗದ ರೂಪದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.

ರಾಷ್ಟೀಯ ಹೆದ್ದಾರಿ 7ರ ಪಕ್ಕ ಇರುವ ಗ್ರೀನ್ ಡಾಬಾದ ಹಿಂಬದಿಯಲ್ಲಿ ಗುರುತಿಗೆ ಸಿಗದ ರೀತಿಯಲ್ಲಿ ಶವವೊಂದು ಪತ್ತೆಯಾಗಿದೆ. ಸುಮಾರು 45 ವರ್ಷದ ಪುರುಷನ ದೇಹ ಇದಾಗಿದೆ ಎಂದು ಊಹಿಸಲಾಗಿದೆ. ದೇಹದ ಶೇಕಡಾ 90ರಷ್ಟು ಭಾಗ ಪ್ರಾಣಿಗಳು ತಿಂದಿದ್ದು, ಇನ್ನು ಶೇ. 10ರಷ್ಟು ಮಾತ್ರ ಉಳಿದಿದೆ.

ದೇಹದ ಎಡಗೈ ತೋಳಿನ ಮೇಲೆ ಓಂ ಗುರುತಿನ ಹಚ್ಚೆ ಇದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಂದು ಬಣ್ಣದ ಬೆಲ್ಟ್ ಧರಿಸಿರುವುದನ್ನು ಮಾತ್ರ ಗುರುತಿಸಬಹುದಾಗಿದೆ.

ಕುರಿ ಮೇಯಿಸಲು ಗ್ರೀನ್ ಡಾಬಾದ ಹಿಂಬದಿ ಹೋದವರು ಶವವನ್ನು ಕಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಅಪರಿಚಿತ ಶವ ಪರೀಕ್ಷೆಗೂ ಸಿಗದ ದೇಹ ಪತ್ತೆ Body:ಬಾಗೇಪಲ್ಲಿ ರಹದಾರಿಯ ಗ್ರೀನ್ ಢಾಬಾದ ಹಿಂಭಾಗದಲ್ಲಿ ಅಪರಿಚಿತ ಶವ ಪತ್ತೆಯಾಗಿದೆConclusion:ಬಾಗೇಪಲ್ಲಿ ಸುಮಾರು 45 ವರ್ಷದ ಪುರುಷನ ದೇಹವು ಶೇಕಡಾ 90 ರಷ್ಟು ನಾಯಿ ಮತ್ತು ಹದ್ದು ತಿಂದು ಇನ್ನು 10 ರಷ್ಟು ದೇಹ ಉಳಿದ ಶವ ಪತ್ತೆಯಾಗಿದೆ

ರಾಷ್ಟೀಯ ಹೆದ್ದಾರಿ 7 ರ ಪಕ್ಕ ಇರುವ ಗ್ರೀನ್ ಢಾಬಾ ದ ಹಿಂಬದಿಯಲ್ಲಿ ಅಪರಿಚಿತ ಶವವು ಗುರುತು ಹಿಡಿಯದಾಗೆ ದೇಹವು ಆಗಿದೆ. ಇಂದು ಬೆಳಿಗ್ಗೆ ಕುರಿ ಮೇಯಿಸಲು ಗ್ರೀನ್ ಢಾಬಾದ ಹಿಂಬದಿ ಹೋದಾಗ ಶವವನ್ನು ಕಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

ದೇಹದ ಎಡಗೈ ತೋಳಿನ ಮೇಲೆ ಓಂ ಗುರುತಿನ ಪಚ್ಛೆ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಕಂದು ಬಣ್ಣದ ಬೆಲ್ಟ್ ಮಾತ್ರ ಗುರುತು ಬಹುದಾಗಿದೆ

ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು
Last Updated :Oct 15, 2019, 7:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.