ETV Bharat / state

ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಶನ್​​ನ ನಾಗಮಂಟಪ ಉದ್ಘಾಟನೆ

author img

By

Published : Oct 9, 2022, 8:30 PM IST

inauguration-of-nagamantapa-at-chikkaballapur
ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಶನ್​​ನ ನಾಗಮಂಟಪ ಉದ್ಘಾಟನೆ

ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಈ ಕಾರ್ಯಕ್ರಮದ ಮೊದಲ ಭಾಗವಾಗಿ ನಾಗಮಂಟಪವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಚಿಕ್ಕಬಳ್ಳಾಪುರ : ಈಶಾ ಫೌಂಡೇಶನ್ ವತಿಯಿಂದ ರಾಜ್ಯದಲ್ಲೂ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೊದಲ ಕಾರ್ಯಕ್ರಮವಾಗಿ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು.

ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ರಸ್ತೆಯಲ್ಲಿರುವ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಹದೇವರ ಬೆಟ್ಟದ ತಪ್ಪಲಿನಲ್ಲಿ ಈಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನ‌ ಕೊಯಂಮತ್ತೂರಿನಲ್ಲಿರುವಂತೆ 112 ಅಡಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದೆ.

ನಾಗಮಂಟಪ ಲೋಕಾರ್ಪಣೆ : ಶಿವನ ಅವತಾರದ ಪ್ರತಿಮೆ ನಿರ್ಮಾಣದ ಕಾರ್ಯದ ಅಂಗವಾಗಿ ಈಶಾ ಫೌಂಡೇಶನ್ ವತಿಯಿಂದ ನಾಗಮಂಟಪ ಲೋಕಾರ್ಪಣೆ ನೇರವೇರಿದೆ. ಈ ಕಾರ್ಯಕ್ರಮಕ್ಕೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಕೆ. ಸುಧಾಕರ್ ಆಗಮಿಸಿದ್ದರು. ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನಾಗಮಂಟಪ ಪೂಜಾಗಳನ್ನು ನಡೆಸಿ ಲೋಕಾರ್ಪಣೆಗೊಳಿಸಿದರು.

ಈಶಾ ಯೋಗ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳು, ಪ್ರಮುಖವಾಗಿ ರಸ್ತೆ ಸೇರಿದಂತೆ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ನಿರ್ಮಾಣ ಕಾರ್ಯ ಮುಂದುವರೆದಿದೆ. 2023ರ ಮಹಾಶಿವರಾತ್ರಿಯಂದು‌ ಈ ಆದಿಯೋಗಿ ಶಿವನ‌ ಪ್ರತಿಮೆ ಎದುರು ಸದ್ಗುರುಗಳ‌ ನೇತೃತ್ವದಲ್ಲಿ ಜಾಗರಣೆ, ಶಿವನ ಆರಾಧನೆ ನಡೆಯಲಿದೆ.

ಇದನ್ನೂ ಓದಿ : ವಾಲ್ ಆಫ್ ಫೇಮ್ ಪ್ರಶಸ್ತಿ ಪ್ರದಾನ: 50 ಸಾಧಕರಿಗೆ ಸಂದ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.